ಆರೋಗ್ಯಆಹಾರಜೀವನ ಶೈಲಿ

ಜಂತು ರೋಗಕ್ಕೆ ಇಲ್ಲಿವೆ ಮನೆ ಮದ್ದುಗಳು

ಸಾಮಾನ್ಯವಾಗಿ ಕೆಲವು ಚಿಕ್ಕಮಕ್ಕಳಿಗೆ ಜಂತು ಹುಳುವಿನ ಸಮಸ್ಯೆಗಳು ಕಂಡು ಬರುತ್ತವೆ. ಈ ಹುಳುಗಳು ದಿನದಿಂದ ದಿನಕ್ಕೆ ಜಾಸ್ತಿ ಬೆಳೆಯುತ್ತಾ ಹೋಗುವುದರಿಂದ ಮಕ್ಕಳು ಸಾಯುವ ಸ್ಥಿತಿ ತಲುಪಬಹುದು. ಹಾಗಂತಾ ಆತಂಕ ಪಡಬೇಕಿಲ್ಲ. ಈ ಕೆಳಗಿನ ಮನೆ ಮದ್ದುಗಳನ್ನು ಬಳಸಿದರೆ ಸಮಸ್ಯೆ ನಿಲ್ಲುತ್ತದೆ.

1 ಬೆಳಿಗ್ಗೆ ತಿಂಡಿಯ ಜೊತೆಗೆ ಸ್ವಲ್ಪ ಕೊಬ್ಬರಿ ತಿನ್ನಬೇಕು. ಸುಮಾರು 15 ನಿಮಿಷಗಳ ನಂತರ 1 ಲೋಟ ಹಾಲಿಗೆ 3 ಚಮಚ ಅರಳೆ ಎಣ್ಣೆ ಬೆರೆಸಿ ಕುಡಿಯಬೇಕು.

2 ತುಳಸಿ ರಸವನ್ನು ಸ್ವಲ್ಪ ಬಿಸಿ ಮಾಡಿ ದಿನಕ್ಕೆ 2 ಸಲದಂತೆ  ನಿಯಮಿತವಾಗಿ 3 ದಿನ ಸೇವಿಸಬೇಕು.

3 ದಪ್ಪ ಲಿಂಬೆಯ ತೊಗಟೆಯ ಕಷಾಯವನ್ನು ಕೆಲವು ದಿನ ಸೇವಿಸಬೇಕು.

4 ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಅದಕ್ಕೆ ಸ್ವಲ್ಪ ಜೇನು ತುಪ್ಪ ಸೇವಿಸಿ ತಿನ್ನಬಹುದು. ಇಲ್ಲವಾದರೆ ಹಸಿ ಬೆಳ್ಳುಳ್ಳಿಯನ್ನೇ ತಿನ್ನಬಹುದು.

5 ಹಾಗಲಕಾಯಿ ರಸವನ್ನು ದಿನ ಅಥವಾ ವಾರಕ್ಕೆ 4 ಬಾರಿಯಾದರೂ ಕುಡಿಯಬೇಕು.

ನಿಮ್ಮ ಕೂದಲು ಬೆಳೆಯುತ್ತಿಲ್ಲವೇ? ಶುಂಠಿ ಬಳಸಿ ನೋಡಿ

#Worms #HealthTips #KannadaSuddigalu

Tags