ಆರೋಗ್ಯಆಹಾರಜೀವನ ಶೈಲಿ

ಗ್ಯಾಸ್ ಟ್ರಬಲ್ ಗೆ ಸಿಂಪಲ್ ಮನೆ ಮದ್ದು

ಇಂದಿನ ಜನಜೀವನದಲ್ಲಿ ಒತ್ತಡ, ಗ್ಯಾಸ್ ಟ್ರಬಲ್ ಸೇರಿದಂತೆ ಅನೇಕ ಸಣ್ಣ ಸಮಸ್ಯೆಗಳು ಕಂಡು ಬರುತ್ತವೆ. ಇದಕ್ಕೆ ಮನೆಯಲ್ಲಿಯೇ ಕೆಲವೊಂದು ಸಿಂಪಲ್ ಮದ್ದುಗಳನ್ನು ಮಾಡಿಕೊಳ್ಳಬಹುದು.

1 ನಿಯಮಿತ ಮತ್ತು ಮಿತವಾಗಿ ಊಟ ಮಾಡಬೇಕು

2 ಸೈಂಧವ ಲವಣದೊಂದಿಗೆ ಬೆಳ್ಳುಳ್ಳಿ ರಸವನ್ನು ಮಿಶ್ರ ಮಾಡಿಕೊಳ್ಳಿ. ಈ ಬೆಳ್ಳುಳ್ಳಿ ರಸವನ್ನುಪ್ರತಿದಿನ ದಿನಕ್ಕೆರಡು ಬಾರಿ ಸೇವಿಸಿ.

3 ಮುಂಜಾನೆ ಎದ್ದ ಕೂಡಲೇ ಬಿಸಿ ನೀರಿಗೆ ಜೇನು ತುಪ್ಪ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ

4 ಹೊಟ್ಟೆ ನೋವು, ಹೊಟ್ಟೆ ಉರಿ ಇದ್ದಾಗ ಕಾಫಿ, ಟೀ, ಮಧ್ಯಪಾನ, ಕೋಲ್ಡ್ ಡ್ರಿಂಕ್ಸ್, ಧೂಮಪಾನ ಬಿಟ್ಟು ಬಿಡಿ

5 ನೀರಿನಲ್ಲಿ ಬೇಯಿಸಿದ ಹುರುಳಿಗೆ ತುಪ್ಪ ಸೇರಿಸಿ, ಸೇವಿಸಿ. ದಿನದಲ್ಲಿ ಎರಡು ಬಾರಿ ಸೇವಿಸಿದರೆ ಹೊಟ್ಟೆ ನೋವು ಕಡಿಮೆಯಾಗುವುದು.

6 ಊಟವಾದ ಕೂಡಲೇ ಬಗ್ಗುವುದು, ಭಾರವಾಗುವುದು, ಮಲಗಬಾರದು

7 ಮಜ್ಜಿಗೆಯಲ್ಲಿ ಇಂಗು, ಕರಿಬೇವು ಸೇರಿಸಿ ಕುಡಿಯಬೇಕು

8 ನೆಲ್ಲಿಕಾಯಿ ಪುಡಿಯನ್ನು ಮಜ್ಜಿಗೆಯೊಂದಿಗೆ ಸೇರಿಸಿ ಕುಡಿಯಬೇಕು.

ತೆಂಗಿನ ಹಾಲಿನಿಂದ ಚರ್ಮಕ್ಕೆ ಸಿಗುವ ಲಾಭಗಳೇನು?

#Gas #GasTrouble #HealthTips

Tags