ಆಹಾರಜೀವನ ಶೈಲಿ

ಸೌತೇಕಾಯಿ ತಿನ್ನುವುದರಿಂದ ನಮಗೆ ಸಿಗುವ ಲಾಭಗಳು

ಸೌತೇಕಾಯಿ ತುಂಬಾ ಕಡಿಮೆ ಬೆಲೆಗೆ ಸಿಗುವ ಅದ್ಭುತ ತರಕಾರಿ. ಅದನ್ನು ಸಾರಿಗೆ ಹಾಕಬಹುದು, ಹಾಗೆಯೇ ತಿನ್ನಬಹುದು, ಕೋಸಂಬರಿ ಮಾಡಿ ಸವಿಯಬಹುದು. ಹೇಗೆ ತಿಂದರೂ ದೇಹಕ್ಕೆ ತಂಪನ್ನು ನೀಡುವ ತರಕಾರಿ. ಏನು ಸಿಗದಿದ್ದರೂ ಮಾರುಕಟ್ಟೆಯಲ್ಲಿ ಸೌತೇಕಾಯಿಯಂತೂ ಸಿಕ್ಕೇ ಸಿಗುತ್ತದೆ. ಮುಖ್ಯವಾಗಿ ಬೆಲೆ ಏರಿಕೆ ಇಲ್ಲದೆ ಸ್ಥಿರವಾಗಿ ಸಿಗುವ ತರಕಾರಿ ಇದೊಂದೇ. ಇಷ್ಟಕ್ಕೂ ಸೌತೇಕಾಯಿ ತಿನ್ನುವುದರಿಂದ ಏನು ಲಾಭ? ಇಲ್ಲಿವೆ ನೋಡಿ ಒಂದಷ್ಟು ಲಾಭಗಳ ಪಟ್ಟಿ.

ಈಗ ಮೊದಲೇ ಬೇಸಿಗೆ. ಧಗೆ ಸಹಿಸಿಕೊಳ್ಳುವುದು ಕಷ್ಟ. ಆ ಜ್ಯೂಸು, ಈ ಜ್ಯೂಸು ಕುಡಿಯುವುದಕ್ಕಿಂತ ಹೆಚ್ಚಿನ ನೀರಿನ ಅಂಶ ಇರುವ ಸೌತೇಕಾಯಿಯನ್ನು ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?

* ದೇಹದಲ್ಲಿ ನೀರಿನಂಶ ಕಾಪಾಡಿ, ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರ ಹಾಕುವಲ್ಲಿ ಸಹಾಯ ಮಾಡುತ್ತೆ.

*ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

* ಸೆಕೆಗೆ ತ್ವಚೆಯಲ್ಲಿ ತುರಿಕೆ ಬರುವುದನ್ನು ತಡೆಯುತ್ತದೆ.

* ಡಾರ್ಕ್‌ ಸರ್ಕಲ್‌ ಸಮಸ್ಯೆ ನಿವಾರಣೆಯಾಗುತ್ತದೆ.

* ಬಿಸಿಲಿನಲ್ಲಿ ಸುತ್ತಾಡಿ ಬಂದ ಮೇಲೆ ಇದರಿಂದ ತವಚೆ ಮೇಲೆ ಮೆಲ್ಲಗೆ ಮಸಾಜ್‌ ಮಾಡಿದರೆ ಟ್ಯಾನ್‌ ಆಗುವುದನ್ನು ತಪ್ಪಿಸಬಹುದು.

* ದೇಹವನ್ನು ತಂಪಾಗಿ ಇಡುತ್ತದೆ.

* ಮುಖದ ತಾಜಾತನ ಕಾಪಾಡುತ್ತದೆ.

* ಉಗುರು ಹಾಗೂ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

Tags