18+ಆರೋಗ್ಯಆಹಾರಜೀವನ ಶೈಲಿಸಂಬಂಧಗಳು

‘ವೀರ್ಯಾಣು’ ಗಳ ಸಂಖ್ಯೆ ಹೆಚ್ಚಾಗಬೇಕಾದರೆ ಏನು ಮಾಡಬೇಕು?

ಬೆಂಗಳೂರು, ಅ.09: ಇಂದಿನ ಆಧುನಿಕ ಯುಗದಲ್ಲಿ ಬಹಳಷ್ಟು ಮಂದಿ ಪುರುಷರು ಎದುರಿಸುತ್ತಿರುವ ಸಮಸ್ಯೆ ವೀರ್ಯಾಣುಗಳ ಲೋಪ. ಸೂಕ್ತವಾದ ಸಂಖ್ಯೆಯ ಕಣಗಳು ಇಲ್ಲದಿರುವ ಕಾರಣ ಸಂತಾನಹೀನತೆಯಂತಹ ಸಮಸ್ಯೆಗಳು ಉದ್ಭವಿಸುತ್ತಿವೆ. ಇದರಿಂದ ಮಾನಸಿಕವಾಗಿ ಹೈರಾಣಾಗುತ್ತಿದ್ದಾರೆ. ಆದರೆ ನಾವು ಸಾರಿನಲ್ಲಿ ಹೆಚ್ಚಾಗಿ ಬಳಸುವ ಕಡಲೆಯನ್ನು ನಿತ್ಯ ತಿನ್ನುತ್ತಿದ್ದರೆ ವೀರ್ಯಾಣುಗಳ ಲೋಪದಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ಅದಕ್ಕಾಗಿ ಏನು ಮಾಡಬೇಕು ಎಂಬುದನ್ನು ಈಗ ನೋಡೋಣ.

  1. ಒಂದು ಹಿಡಿ ಕಡಲೆ, 5 ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಬಳಿಕ ಒಂದು ಗ್ಲಾಸ್ ಉಗುರು ಬೆಚ್ಚಗಿನ ಹಾಲನ್ನು ಕುಡಿಯಬೇಕು. ಈ ರೀತಿ ಮಾಡುತ್ತಿದ್ದರೆ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ.
  2. ರಾತ್ರಿ ಹೊತ್ತು ಒಂದು ಕಪ್ ಕಡಲೆಯನ್ನು ನೆನೆಸಿ ಬೆಳಗ್ಗೆ ಅದಕ್ಕೆ ಒಂದು ಟೀಸ್ಫೂನ್ ಜೇನು ಬೆರೆಸಿ ತಿನ್ನಬೇಕು. ಇದರಿಂದ ಸಮಸ್ಯೆ ದೂರವಾಗುತ್ತದೆ.
  3. ರಾತ್ರಿ ಹೊತ್ತು ನೆನೆಸಿದ ಕಡಲೆಯನ್ನು ಬೆಳಗ್ಗೆ ಬೆಲ್ಲದ ಜೊತೆಗೆ ತಿನ್ನಬೇಕು. ಇದರಿಂದ ಶೃಂಗಾರ ಸಾಮರ್ಥ್ಯ ಹೆಚ್ಚುತ್ತದೆ. ವೀರ್ಯಾಣುಗಳ ಸಂಖ್ಯೆ ಹೆಚ್ಚುತ್ತದೆ.
  4. ರಾತ್ರಿಯಲ್ಲಾ ನೆನೆಸಿದ ಕಡಲೆಯನ್ನು ಬೆಳಗ್ಗೆ ತುಪ್ಪದೊಂದಿಗೆ ಬೇಯಿಸಬೇಕು. ಬಳಿಕ ಅವನ್ನು ತಿಂದು ಒಂದು ಗ್ಲಾಸ್ ಬೆಚ್ಚಗಿನ ಹಾಲನ್ನು ಸೇವಿಸಬೇಕು. ಈ ರೀತಿ ಮಾಡಿದರೆ ವೀರ್ಯಾಣುಗಳ ಸಂಖ್ಯೆ ಹೆಚ್ಚುತ್ತದೆ.
Tags