ಆರೋಗ್ಯಆಹಾರಜೀವನ ಶೈಲಿಸೌಂದರ್ಯ

ನೈಸರ್ಗಿಕ ಸೌಂದರ್ಯವರ್ಧಕ ಕಬ್ಬಿನ ಜ್ಯೂಸ್

ಕಬ್ಬಿನ ಜ್ಯೂಸ್ ನಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ನಮ್ಮ ಆರೋಗ್ಯದ ಉಳಿತಿಗೆ ಸಹಾಯಕವಾಗುತ್ತದೆ.

1. ಕಬ್ಬಿನ ಜ್ಯೂಸ್ ನಲ್ಲಿ ನಿಮ್ಮ ದೇಹಕ್ಕೆ ಬೇಕಾದ ಸರಿಯಾದ ಪ್ರಮಾಣದ ಶಕ್ತಿಯನ್ನು ನೀಡುತ್ತದೆ. ಹಾಗೂ ನಿಮ್ಮ ದೇಹವನ್ನು ಆಯಾಸದಿಂದ ತಪ್ಪಿಸಲು ಕಬ್ಬಿನ ಜ್ಯೂಸ್ ಉತ್ತಮವಾದ ಆಯ್ಕೆಯಾಗಿದೆ.

2. ಕಬ್ಬಿನ ಜ್ಯೂಸ್ ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ತಪ್ಪಿಸುತ್ತದೆ ಹಾಗೂ ಕಬ್ಬಿನ ರಸವನ್ನು ಕುಡಿಯುವುದರಿಂದ ಮೂತ್ರದ ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

3. ಕಬ್ಬಿನ ಜ್ಯೂಸ್ ಸೇವನೆಯಿಂದ ನಮ್ಮ ಹಲ್ಲುಗಳು ಗಟ್ಟಿಯಾಗುತ್ತದೆ ಹಾಗೂ ಬಾಯಿಯಲ್ಲಿನ ಕೆಟ್ಟ ವಾಸನೆಯನ್ನು ತೆಗೆಯುತ್ತದೆ.

Image result for sugar cane

4. ಕಬ್ಬಿನ ಜ್ಯೂಸ್ ನಲ್ಲಿ ನಮ್ಮ ಲಿವರ್ ನನ್ನು ಬಲಪಡಿಸುವ ಅಂಶಗಳಿವೆ. ಇದರ ಸಲುವಾಗಿ ಕಾಮಾಲೆಗೆ ಉತ್ತಮವಾದ ಪರಿಹಾರವಾಗಿದೆ.

5. ಕಬ್ಬಿನ ರಸವನ್ನು ಕುಡಿಯುವುದರಿಂದ ಉತ್ತಮ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ಇಷ್ಟೇ ಅಲ್ಲದೇ ಹೊಟ್ಟೆಯ ಸೋಂಕನ್ನು ತಡೆಯುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಗೆ ಚಿಕಿತ್ಸೆ ನೀಡಲು ಬಹಳ ಸಹಾಯಕವಾಗಿದೆ.

6. ಜ್ವರ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಕಬ್ಬಿನ ರಸವು ಅಪಾರ ಪ್ರಯೋಜನಗಳನ್ನು ಹೊಂದಿದೆ. ಇದರ ಸೇವನೆಯಿಂದ ಜ್ವರದಿಂದ ದೇಹದಲ್ಲಿನ ಪ್ರೋಟೀನ್ ಅಂಶವನ್ನು ಪುನಃ ತುಂಬಿಸಲು ಸಹಾಯ ಮಾಡುತ್ತದೆ ಮತ್ತು ಚೇತರಿಕೆಗೆ ಸಹಾಯ ಮಾಡುತ್ತದೆ.

7. ಕಬ್ಬಿನ ಜ್ಯೂಸ್ ಮೊಡವೆಗಳ ವಿರುದ್ದ ಹೋರಾಡುವುದಲ್ಲದೇ, ಮುಖದಲ್ಲಿನ ಕಲೆಗಳನ್ನು ಸಹ ಕಡಿಮೆ ಮಾಡುತ್ತದೆ. ಕಬ್ಬಿನಲ್ಲಿರುವ ಗ್ಲೈಕೋಲಿಕ್ ಆಮ್ಲವು ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಆರತಕ್ಷತೆಯ ಸಮಾರಂಭದಲ್ಲಿ ವಧುವಿನ ಡ್ರೆಸ್ ಹೀಗಿರಲಿ

Tags