ಜೀವನ ಶೈಲಿಸೌಂದರ್ಯ

ಬೇಸಿಗೆಯಲ್ಲಿ ಸೌಂದರ್ಯವನ್ನು ಕಾಪಾಡಿಕೊಳ‍್ಳಿ!!

ದೇಹದಲ್ಲಿ ಎಲ್ಲಾ ಭಾಗಗಳಿಗಿಂತ ಮುಖ್ಯವಾದುದು ತ್ವಚೆ. ಅಥವಾ ಚರ್ಮ. ಅದಕ್ಕೆ ಸರಿಯಾಗಿ ಪೋಷಣೆ ನೀಡಿದರೆ ಸುಂದರವಾಗಿ ಕಾಣುತ್ತದೆ. ಇನ್ನೇನು ಎಲ್ಲೆಡೆ ಬೇಸಿಗೆಯ ಧಗೆ. ಬಿಸಿಲಿನಲ್ಲಿ ಹೊರ ಬಂದರಂತೂ ಸನ್ ಟ್ಯಾನ್ ಕಂಡಿತ. ಬೇಸಿಗೆಕಾಲ ಬಂತೆಂದರೆ ಸಾಕು ಎಲ್ಲಾ ಯುವ ಯುವತಿಯರಿಗೆ ತಮ್ಮ ತ್ವಚೆಯದ್ದೇ ಚಿಂತೆ. ಹಾಗಾಗಿ ನಾವು ಕೆಲವೊಂದು ಮುನ್ನಚ್ಚರಿಕೆಯನ್ನು ತೆಗೆದುಕೊಳ‍್ಳಬೇಕು

Image result for summer season facepack

 • ಬೇಸಿಗೆಯಲ್ಲಿ ದಿನಕ್ಕೆ ಎರಡು ಮೂರು ಬಾರಿ ಕಡಲೆ ಹಿಟ್ಟಿನಿಂದ ಮುಖ ತೊಳೆದರೆ ಮೊಡವೆಗಳಿಂದ ದೂರವಿರಬಹುದು
 • ಮೈಯ್ಯಿನ ಚರ್ಮ ಒಣಗಿ ಸುಕ್ಕು ಕಟ್ಟುವುದನ್ನು ತಡೆಗಟ್ಟಲು ಪ್ರತಿದಿನ ಎರಡು ಬಾರಿ ಒಂದು ಬಟ್ಟಲು ಮೊಸರಿಗೆ ಅರ್ಧ ಚಮಚ ಸಕ್ಕರೆ, ಅರ್ಧ ಚಮಚ ಉಪ್ಪು ಸೇರಿಸಿ ಕುಡಿಯಬೇಕು.
 • ಬೇಸಿಗೆಯಲ್ಲಿ ವಾರಕ್ಕೆ ಇಲ್ಲವೇ ಹದಿನೈದು ದಿನಗಳಿಗೊಮ್ಮೆ ಸ್ವಿಮ್ಮಿಂಗ್ ಮಾಡಿರಿ. ಅದು ದೇಹವನ್ನು ಶುಚಿಯಾಗಿಯೂ ಆರೋಗ್ಯವಾಗಿಯೂ ಇಡುತ್ತದೆ.

Image result for summer season facepack

 • ಕಾಫಿ – ಟೀಗಳಿಗಿಂತ ಜ್ಯೂಸನ್ನು ಸೇವಿಸಿದರೆ ಮೈಯನ್ನು ತಂಪಾಗಿಡಬಹುದು.
 • ಸಾಧ್ಯವಾದಷ್ಟು ಕಾಟನ್ ಉಡುಪನ್ನೇ ಧರಿಸಿ. ಇದರಿಂದ ಮೈ ಉಷ‍್ಣವನ್ನು ತಡೆಯಬುದು.
 • ಕೂದಲನ್ನು ಬಿಚ್ಚಿ ಬಿಡುವುದರಿಂದ ಬೆವರುವುದು ಜಾಸ್ತಿಯಾಗುತ್ತದೆ, ಕೂದಲನ್ನು ಪೋನಿಟೈಲ್ ಅಥವಾ ಜಡೆ ಹೆಣೆಯಿರಿ.
 • ಮುಖಕ್ಕೆ ಆದಷ್ಟು ಮೇಕಪ್ ಮಾಡಬೇಡಿ ಹಾಗೆ ಮೇಕಪ್ ಮಾಡಿದರೂ ರಾತ್ರಿ ಹೊತ್ತು ಮಲಗುವ ಮುನ್ನ ತೆಗೆದಿರಿಸಿ.
 • ಸಂಜೆಯ ತಿಂಡಿಗೆ ಕರಿದ ಪದಾರ್ಥಗಳಿಗಿಂತ ಫ್ರೂಟ್ ಸಲಾಡ್, ವೆಜಿಟೇಬಲ್ ಸಲಾಡ್ಗಳನ್ನು ತಿನ್ನುವುದು ಒಳ‍್ಳೆಯದು.
 • ಬೇಸಿಗೆಯಲ್ಲಿ ತಣ‍್ಣೀರಿನ ಸ್ನಾನ ಹಿತಕರವೆನಿಸಿದರೂ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಒಳ‍್ಳೆಯದು.
 • ತಲೆಗೆ ಸ್ನಾನ ಮಾಡಿ ಕೂದಲನ್ನು ತಲೆಯ ಚರ್ಮವನ್ನು ಶುದ್ದವಾಗಿರಿಸಿಕೊಳ‍್ಳಿ.
 • ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ. ಹಾಗೆ ಹೋಗಲೇ ಬೇಕಾದರೆ ಕ್ಯಾಪ್, ಸ್ಕಾರ್ಫ್ ಧರಿಸಿ ಇಲ್ಲವೇ ಕೊಡೆಯನ್ನು ಬಳಸುವುದು ಉತ್ತಮ.
 • ಬೇಸಿಗೆಯ ಕಾಲದಲ್ಲಿ ಆಹಾರದಲ್ಲಿ ಮೊಸರು ಸೇವಿಸಲು ಮರೆಯದಿರಿ. ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಪುಷ್ಟಿಕರ ಆಹಾರವೂ ಹೌದು.

ಪತ್ನಿಗೆ ದುಬಾರಿ ಕಾರ್ ಗಿಫ್ಟ್ ಕೊಟ್ಟ ನಿಖ್

Tags