ಜೀವನ ಶೈಲಿಫ್ಯಾಷನ್

ಈಗಿನ ಹೊಸ ಟ್ರೆಂಡ್ ಗೆ ಸನ್ ಗ್ಲಾಸ್!!

ಮೊದಲೆಲ್ಲ ಕಣ‍್ಣಿಗೆ ಕನ್ನಡ್ಕ ಎಂದರೆ ದೋಷ. ದೃಷ್ಟಿ ದೋಷವಿದ್ದರೆ ಮಾತ್ರ ಕನ್ನಡ್ಕ ಧರಿಸುತ್ತಿದ್ದರು.ಇನ್ನು ಹೆಣ‍್ಣಿಗೆ ಕನ್ನಡ್ಕ ಇದ್ದರೆ ಮುಗೀತು ಕತೆ ಮದುವೆಯಾಗಲು ಯಾವ ಗಂಡೂ ಮುಂದೆ ಬರುವುದಿಲ್ಲ. ಸೋಡಾಬುಡ್ಡಿ, ಕನ್ನಡಿ ಹೀಗೆ ಹಲವಾರು ನಾಮಧೇಯ. ಹಿಂದೆಲ್ಲ ತುಂಬಾ ದಪ್ಪದ ಕನ್ನಡ್ಕಗಳನ್ನು ಧರಿಸಿತ್ತಿದ್ದರು.

ಆದರೆ ಅಷ್ಟೇ ಜೋಪಾನ ಮಾಡುತ್ತಿದ್ದರು. ಮಕ್ಕಳ ಕೈಗೆ ಸಿಗದಂತೆ ಕಪಾಟಿನಲ್ಲಿಡುತ್ತಿದ್ದರು. ಮೊದಲೆಲ್ಲ ವೈದ್ಯರ ಸಲಹೆಯ ಮೇರೆಗೆ ಕನ್ನಡ್ಕ ಧರಿಸುತ್ತಿದ್ದರು, ಆದರೆ ಈಗ ಹಾಗಿಲ್ಲ ಇದು ಈಗಿನ ಜಾಯಮಾನ.ಈಗ ಅದು ಫ್ಯಾಶನ್ ಆಗಿ ಮಾರ್ಪಟ್ಟಿದೆ. ಹಿಂದೆಲ್ಲ ಕನ್ನಡ್ಕದ ಬಗ್ಗೆ ಅಷ್ಟು ಜಾಗರೂಕತೆಯಿತ್ತು. ಈಗ ಬಿದ್ದರೂ ಪರ್ವಾಗಿಲ್ಲ ಮತ್ತೊಂದು ತೆಗೆದರಾಯಿತು ಎಂದು ಇರುವವರೇ ಜಾಸ್ತಿ. ಬೇಕಾದ ವೆರೈಟಿ ಡಿಸೈನ್ಸ್ ನಲ್ಲಿ ಆನ್ ಲೈನ್ನಲ್ಲಿ ಕಮ್ಮಿ ಬೆಲೆಗೆ ಸಿಗುತ್ತದೆ.

ಈಗಿನ ಹೊಸ ಟ್ರೆಂಡ್ ಗೆ ಸನ್ ಗ್ಲಾಸ್ ಸೇರಿಕೊಂಡಿದೆ. ಹೌದು ಸನ್ ಗ್ಲಾಸ್ ಧರಿಸುವುದು ಈಗಿನ ಟ್ರೆಂಡ್. ಇದು ಯಾರನ್ನೂ ಬಿಟ್ಟಿಲ್ಲ ಸಿನಿಮಾ ಸೆಲೆಬ್ರೆಟಿಗಳಿಂದ ಹಿಡಿದು ಕಾಲೇಜ್ ಯುವಕ ಯುವತಿಯರನ್ನೂ ಸನ್‍ ಗ್ಲಾಸ್ ತನ್ನತ್ತ ಸೆಳೆದಿದೆ. ಒಂದು ಕಾಲದಲ್ಲಿ ಬೈಕ್, ಕಾರ್ ನಲ್ಲಿ ಸನ್ ಗ್ಲಾಸ್ ಹಾಕಿ ಪ್ರಯಾಣಿಸುತ್ತಿದ್ದರು ಆದರೆ ಈಗ ಅದರ ಹವಾ ಎಷ್ಟು ಜೋರಾಗಿದೆ ಎಂದರೆ ನಡೆದಾಡುವಾಗ, ಬಸ್ಸಿನಲ್ಲಿ ಕೂಡ ಸನ್ ಗ್ಲಾಸ್ ಹಾಕಿ ಈಗ ಓಡಾಡುವವರಿದ್ದಾರೆ.

Image result for sunglass

ಇದು ಸೂರ್ಯನ ಹಾನಿಕಾರಕ ಕಿರಣಗಳಂದ ರಕ್ಷಣೆ ನೀಡುವುದಲ್ಲದೆ ಜೊತೆಗೆ ಸ್ಟೈಲಿಶ್ ಲುಕ್ ಕೂಡ ನೀಡುತ್ತದೆ. ಸೂರ್ಯನ ಅಪಾಯಕಾರಿ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಹೆಚ್ಚು ಜಾಗರೂಕತೆ ವಹಿಸಬೇಕಾಗುತ್ತದೆ. ಸನ್ ಗ್ಲಾಸ್ ನಮ್ಮ ಮುಖಕ್ಕೆ ಸೂಟ್ ಆಗುವಂತಿರಬೇಕು. ವಿವಿಧ ರೀತಿಯ ಸ್ಟೈಲ್ ಲುಕ್ನಲ್ಲಿ ಸನ್ ಗ್ಲಾಸ್ ಮಾರುಕಟ್ಟೆಯಲ್ಲಿ ದೊರಕುತ್ತವೆ. ಸನ್ ಗ್ಲಾಸ್ ಅದರ ಗೋಚರ ಮತ್ತು ಅಗೋಚರ ಘಟಕಗಳು ಸೇರಿದಂತೆ ಬೆಳಕಿಗೆ ಹೆಚ್ಚಿನ ಮಾನ್ಯತೆ ವಿರುದ್ಧ ರಕ್ಷಣೆ ನೀಡುತ್ತವೆ. ಸರಿಯಾದ ಫಿಟ್ಟಿಂಗ್ ಇರುವ ಗ್ಲಾಸ್ ಖರೀದಿಸಿದರೆ ಮುಖಕ್ಕೆ ಅಂದವಾಗಿ ಕಾಣುತ್ತದೆ. ಲೆನ್ಸ್ ಆಯ್ಕೆ ಮಾಡುವಾಗ ನಿಮಗೊಪ್ಪುವಂತಹ ಬಣ‍್ಣ ಖರೀದಿಸಿದರೆ ಒಳ‍್ಳೆಯದು. ಕೆಲವು ಗಾಢ ಬಣ‍್ಣದ ಲೆನ್ಸ್ ಗಳು ನೋಡಲು ಫ್ಯಾಶನೇಬಲ್ ಆಗಿರಬಹುದು. ಆದರೆ ಅದನ್ನು ಧರಿಸಿದರೆ ನಿಮ್ಮ ನೋಟದಲ್ಲಿ ವ್ಯತ್ಯಾಸ ಕಂಡುಬರಬಹುದು.

Related image

ಆದಷ್ಟು ಸನ್ ಗ್ಲಾಸ್ ಹಗುರವಾಗಿದ್ದರೆ ಒಳ‍್ಳೆಯದು. ಭಾರವಾದರೆ ಮೂಗು ಹಾಗೂ ಕಿವಿಗೆ ನೋವಾಗಿ ಭಾರವಾಗುವ ಸಾಧ್ಯತೆಯಿದೆ. ಹಾಗಾಗಿ ನಾವು ಒಳ‍್ಳೆಯ ಗುಣ ಮಟ್ಟದ ಸನ್ ಗ್ಲಾಸ್ ಆಯ್ಕೆ ಮಾಡುವುದು ಉತ್ತಮ. ನಾನಾರೀತಿಯ  ಸನ್ ಗ್ಲಾಸ್ ಕಂಪೆನಿಗಳು ಇಂದು ಪೈಪೋಟಿಗೆ ನಿಂತಿವೆ. ಒಳ‍್ಳೆಯ ಕ್ವಾಲಿಟಿ ಹೊಂದಿರುವ ಗ್ಲಾಸ್ ಗಳು ದುಬಾರಿಯಾದರೂ ಹೆಚ್ಚು ಕಾಲ ಬಾಳ್ವಿಕೆ ಬರುತ್ತದೆ.

ಸನ್ ಗ್ಲಾಸ್ ಜಾಸ್ತಿ ದೊಡ್ಡದೂ ಚಿಕ್ಕದೂ ಆಗಿರದೆ ಮುಖಕ್ಕೆ ಒಪ್ಪುವಂತಿರಲಿ. ಕ್ರೀಡಾಪಡುಗಳು ಕ್ರೀಡಾಂಗಣದಲ್ಲಿ ಪ್ರಕಾಶಮಾನವಾದ ಗ್ಲಾಸ್ ಬಳಸುತ್ತಾರೆ. ಬೀಚ್, ರೆಸಾರ್ಟ್ ಗೆ ತರಳುವಾಗ ನೀಲ ಗ್ಲಾಸ್ ಒಪ್ಪುತ್ತದೆ, ಹಾಗೂ ಇನ್ನಿತರ ಪಾರ್ಟಿ ನಮಾರಂಭಗಳಿಗೆ ಕಂದು ಬಣ‍್ಣ, ಅಥವಾ ಕಪ್ಪು ಬಣ‍್ಣ ಇನ್ನಷ್ಟು ಸ್ಟೈಲಿಷ್ ಲುಕ್ ನೀಡುತ್ತದೆ.

ತಲೆಹೊಟ್ಟಿನ ನಿವಾರಣೆ ಮಾಡಲು ಲಿಂಬೆ, ಕಹಿಬೇವು, ಮೆಂತ್ಯೆ …

 

 

Tags