ಆರೋಗ್ಯಜೀವನ ಶೈಲಿ

ಸುರುಳಿ ಹೂವಿನಲ್ಲಿದೆ ಔಷಧೀಯ ಗುಣ!!

ಶುಂಠಿ ಲಿಲ್ಲಿ ಅಥವಾ ಸುರುಳಿ ಸುಗಂಧಿ ಹೂಗಳು ಈಗ ಹೆಚ್ಚಿನ ಕಡೆ ಕಾಣ ಸಿಗುತ್ತವೆ. ಇದರ ಸುಗಂಧ ಅಮಲೇರಿಸುವಂತಿವೆ. ಈ ಹೂವುಗಳ ಬಿಳಿ ಹಾಗೂ ನಸು ಹಳದಿ ಬಣ‍್ಣದಿಂದ ಕೂಡಿರುತ್ತದೆ. ಇದನ್ನು ವೈಟ್ ಶುಂಠಿ ಹೂ ಎಂದು ಕರೆಯುತ್ತಾರೆ. ಇದು ಮಳೆ ಬೀಳುವಲ್ಲಿ ಹಾಗೂ ತಂಪಾದ ಹವಮಾನದಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಇದು zingiberaceae ಕುಟುಂಬಕ್ಕೆ ಸೇರಿದೆ. ಇದರ ತುದಿ ಬಿಳಿ ಹಾಗೂ ಒಳಾಂಗಣ ಹಳದಿ ಬಣ‍್ಣದಿಂದ ಕೂಡಿರುತ್ತದೆ. ಇದರ ಹಣ‍್ಣು ಕಿತ್ತಳೆ ಬಣ‍್ಣಕ್ಕೆ ತಿರುಗುತ್ತದೆ, ಮತ್ತು ಗಾಢ ಕೆಂಪು ಬೀಜಗಳು ಹೊಂದಿರುವ ಮೂರು ಬದಿಯ ಜೀವ ಕೋಶವಾಗಿರುತ್ತದೆ.

Image result for surali flowe

ಈ ಸುರುಳಿಯ ಮೂಲವು ನೇಪಾಳ ಹಾಗೂ ಭಾರತದ ಹಿಮಾಲಯ ಪರ್ವತದಲ್ಲಿ ಬೆಳೆಯಲಾಗುತಿತ್ತು ಎಂದು ಹೇಳಲಾಗುತ್ತದೆ. ಕ್ಯೂಬಾ ದೇಶದಲ್ಲಿ ಸುರುಳಿ ಹೂ  ರಾಷ್ಟ್ರೀಯ ಹೂ . ಅಲ್ಲಿ ಇದನ್ನು ವೈಟ್ ಬಟರ್ ಫ್ಲೈ ಹೂ ಎಂದು ಕರೆಯಲಾಗುತ್ತದೆ. ಈ ಹೂವನ್ನು ದೇವರ ಪೂಜೆ ಹಾಗೂ ಅಲಂಕಾರಕ್ಕೆ ಬಳಸಲಾಗುತ್ತದೆ. ಶಾಲೆಗೆ ಹೋಗುವ ಮಕ್ಕಳಿಗಂತೂ ಸುರುಳಿ ಹೂವೆಂದರೆ ಬಲು ಇಷ್ಟ. ಚೈನಾದಲ್ಲಿ  ಇದರ ಬೇರು ಕಾಂಡವನ್ನು ನೈಸರ್ಗಿಕ ಔಷಧಿಗೆ ಬಳಸಲಾಗುತ್ತದೆ, ತೆನೋವು, ಉರಿಯೂತ, ಸಂಧಿವಾತ ಇತ್ಯಾದಿ.

ನನ್ನ ಮೇಲೆ ಅಭಿಮಾನವಿದ್ದರೆ ಇಂತಹ ಕೆಲಸ ಮಾಡಬೇಡಿ: ಕಿಚ್ಚ ಸುದೀಪ್

#suraliflower #aarogya #health #lifestyle

Tags

Related Articles