ಆರೋಗ್ಯಆಹಾರಜೀವನ ಶೈಲಿ

ಮನೆಯಲ್ಲಿಯೇ ಮಾಡಿ ಎಲ್ಲರ ಮೆಚ್ಚಿನ ಸ್ವೀಟ್ ಜಾಂಗೀರ್

ನಿಮ್ಮ ಮನೆಯ ಯಾವುದೇ ಶುಭ ಸಮಾರಂಭಗಳಿರಲಿ ಅಲ್ಲಿ ಜಾಂಗೀರ್ ನದ್ದೇ ಹವಾ. ಅಷ್ಟರ ಮಟ್ಟಿಗೆ ಈ ಸಿಹಿತಿನಿಸು ನೋಡಲು ಹಾಗೂ ಸವಿಯಲು ಬಹಳ ರುಚಿಕರವಾಗಿರುತ್ತದೆ. ಅದರ ಸಲುವಾಗಿ ನಾವಿಂದು ಮನೆಯಲ್ಲಿ ಯಾವ ರೀತಿ ಜಾಂಗೀರ್ ಮಾಡುವ ರೆಸಿಪಿ ಇಲ್ಲಿದೆ ನೋಡಿ.ಜಾಂಗೀರ್ ಮಾಡಲು ಬೇಕಾಗುವ ಪದಾರ್ಥಗಳು

ನೆನೆ ಹಾಕಿದ ಉದ್ದಿನಬೇಳೆ  -1 ಲೋಟ

ಸಕ್ಕರೆ – 2 ಲೋಟ

ಏಲಕ್ಕಿ

ನಿಂಬೆಹಣ್ಣು

ಕೇಸರಿ ಕಲರ್

ಜೋಳದ ಹಿಟ್ಟು

ಎಣ್ಣೆಮಾಡುವ ವಿಧಾನ

ಮೊದಲಿಗೆ ಮಿಕ್ಸ್ ಜಾರಿಗೆ ನೆನಸಿದ ಉದ್ದಿನ ಬೇಳೆಯ ಜೊತೆಗೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ನುಣ್ಣಗೆ ಹಾಗುವವರೆಗೆ ರುಬ್ಬಿಕೊಳ್ಳಿ. ಬಳಿಕ ರುಬ್ಬಿದ ಮಿಶ್ರಣವನ್ನು ಒಂದು ಬೌಲ್ ಗೆ ಅದಕ್ಕೆ ಕೇಸರಿ ಕಲರ್ ಪುಡಿ  ಹಾಗೂ ಜೋಳದ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಸುಮಾರು ಹತ್ತು ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಬೇಕು. ಬಳಿಕ ಕಲಸಿದ ಹಿಟ್ಟು ಸರಿಯಾದ ಹದವಾಗಿ ಇದೆ ಎಂದು ತಿಳಿದುಕೊಳ್ಳಲು ಒಂದು ಬೌಲ್ ನಲ್ಲಿ ನೀರನ್ನು ಹಾಕಿ. ಅದರಲ್ಲಿ ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಬೌಲ್ ನಲ್ಲಿ ಹಾಕಿದರೆ ಅದು ತೇಲುವಂತಿದ್ದರೇ, ಹಿಟ್ಟು ಸರಿಯಾದ ಹದವಾಗಿದೆಯೆಂದು ಗೊತ್ತಾಗುತ್ತದೆ.Related imageಇಷ್ಟೆಲ್ಲ ಆದ ಬಳಿಕ ಪಾಕವನ್ನು ರೆಡಿಮಾಡಿಟ್ಟುಕೊಳ್ಳಿ. ಎಷ್ಟರ ಪ್ರಮಾಣದಲ್ಲಿ ಉದ್ದಿನಬೇಳೆಯನ್ನು ತೆಗೆದುಕೊಂಡಿರುತ್ತಿರೋ, ಅದಕ್ಕಿಂತ ಅರ್ಧದಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ತೆಗೆದುಕೊಳ್ಳಿ.  ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಚೆನ್ನಾಗಿ ಕುದಿಯುವಂತೆ ನೋಡಿಕೊಳ್ಳಿರಿ. ಬಳಿಕ ಇದಕ್ಕೆ ಏಲಕ್ಕಿಯನ್ನು ಹಾಕಿ ಪಾಕ ಬಂದಿದೆ ಎಂದು ಗೊತ್ತಾದ ಬಳಿಕ ಸ್ಟೌವ್ ಆಫ್ ಮಾಡಿ ನಿಂಬೆಹಣ್ಣಿನ ರಸವನ್ನು ಹಾಕಬೇಕು.ಇದೀಗ ಪಾಕ ಹಾಗೂ ಹಿಟ್ಟು ರೆಡಿಯಾಗಿದ್ದು, ಒಂದೆಡೆ ಎಣ್ಣೆ ಕಾಯಲು ಇಟ್ಟುಕೊಳ್ಳಿ.  ಬಳಿಕ ಒಂದು ಕವರ್ ನಲ್ಲಿ ಜಾಂಗೀರ್ ಹಿಟ್ಟನ್ನು ಹಾಕಿಕೊಳ್ಳಿರಿ. ಬಳಿಕ ನಮಗೆ ಬೇಕಾದ ಸೈಜ್ ಗೆ ಕವರ್ ನ ಹೋಲ್ ಮಾಡಿಕೊಂಡು ಕಾಯಲು ಇಟ್ಟಿರುವ ಎಣ್ಣೆಯಲ್ಲಿ ಕೈಯಿಂದ ಪ್ರೆಸ್ ಮಾಡಿ ನಮಗೆ ಬೇಕಾದ ಡಿಸೈನ್ ನಲ್ಲಿ ಜಾಂಗೀರ್ ನನ್ನು ಹಾಕಿಕೊಳ್ಳಬಹುದು. ಇದು ಹಾಕಿ ಚೆನ್ನಾಗಿ ಬೆಂದ ನಂತರ , ಕೊಂಚ ಬಿಸಿಯಾಗಿರುವ ಪಾಕದಲ್ಲಿ ಹಾಕಬೇಕು. ಕನಿಷ್ಟ ಐದು ನಿಮಿಷಗಳ ಪಾಕದಲ್ಲಿ ಬಿಟ್ಟು, ಆನಂತರ ಹೊರತೆಗೆದರೆ ಜಾಂಗೀರ್ ಸವಿಯಲು ಸಿದ್ದ.

ಚಿಕನ್ ರೆಸಿಪಿ ಲಿಸ್ಟ್ ಗಳ ಪಟ್ಟಿದೆ ಇಲ್ಲಿದೆ ನೋಡಿ…

Tags