ಆರೋಗ್ಯಆಹಾರಜೀವನ ಶೈಲಿಸೌಂದರ್ಯ

ಸ್ವಲ್ಪ ಕಾಳಜಿ ವಹಿಸಿ, ಮೇಕಪ್ ಇಲ್ಲದೇ ಸಹಜ ಸೌಂದರ್ಯವನ್ನು ನಿಮ್ಮದಾಗಿಸಿಕೊಳ್ಳಿ

ಬೆಂಗಳೂರು, ಫೆ.20:

ಸುಂದರ ಹೆಣ್ಣಿನ ಹೋಲಿಕೆ ಮತ್ತು ವರ್ಣನೆ ಅಷ್ಟು ಸುಲಭದ ಮಾತಲ್ಲ. ಕವಿಗಳು ಕೂಡ ಒಂದು ಮಟ್ಟಕ್ಕೆ ಪ್ರಯತ್ನಿಸಿ ಸೈ ಎನಿಸಿಕೊಂಡಿರಬಹುದೇ ವಿನಾ ತೃಪ್ತಿಪಡಿಸಲು ಸಾಧ್ಯವಾಗಿಲ್ಲ. ಅಲಂಕರಿಸಿಕೊಳ್ಳೋದು ಅಂದ್ರೆನೆ ಸಂಭ್ರಮ. ಯಾರು ಬೇಕಾದರೂ ಬೈಯಲಿ, ಬೆದರಿಸಲಿ ಡೋಂಟ್ ಕೇರ್. ಕಣ್ಣಿಗೆ ಕಾಡಿಗೆ, ತುಟಿಗೆ ಒಂದಿಷ್ಟು ಬಣ್ಣ ಮುಖದ ಹೊಳಪಿಗೆ ಕೊಂಚ ಕ್ರೀಮ್ ಹೀಗೆ ಸೌಂದರ್ಯ ವರ್ಧಕಗಳನ್ನು ಬಳಸಿಕೊಂಡು ಸುಂದರವಾದ ನೋಟ ಪಡೆಯುವುದು. ಎಲ್ಲಾದರೂ ಹೋಗಬೇಕು ಅಂದ್ರೆ ಮೊದಲು ಕನ್ನಡಿಯಲ್ಲಿ ಅಂದವಾದ ಮುಖ ನೋಡಿಕೊಂಡು, ತಮ್ಮ ಸೌಂದರ್ಯಕ್ಕೆ ಅಗತ್ಯವಾದ ಮೇಕಪ್ ಮಾಡಿಕೊಳ್ಳೋದು ಇದ್ದೇ ಇರುತ್ತದೆ.

ಮೇಕಪ್‍ ಎಂದಿಗೂ ಹೆಣ್ಣಿನ ಜನ್ಮಸಿದ್ಧ ಹಕ್ಕು. ಸಮಾಜದ ಎಲ್ಲಾ ವರ್ಗದ ಮಾನಿನಿಯರ ಬಯಕೆ ಕೂಡ. ಹೀಗಾಗಿಯೇ ಅನೇಕ ಸಂಸ್ಥೆಗಳು ಸೌಂದರ್ಯವರ್ಧಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರ ಮೂಲಕ ಆರ್ಥಿಕವಾಗಿ ಲಾಭ ಮಾಡಿಕೊಳ್ಳುತ್ತಿವೆ.

ಹೆಣ್ಣು ತಾನಿರುವುದಕ್ಕಿಂತಲೂ ಹೆಚ್ಚು ಸುಂದರವಾಗಿ ಕಾಣುವಂತೆ ಮಾಡಿಕೊಳ್ಳುವ ಸಾಧನ ಅಥವಾ ಕ್ರಿಯೆಯೇ ಮೇಕಪ್. ಮೇಕಪ್ ಮಾನಿನಿಯರನ್ನು ಹೆಚ್ಚು ಆಕರ್ಷಕ ಹಾಗೂ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಆದರೆ ಪದೇ ಪದೆ ಮೇಕಪ್ ಮಾಡುವುದು ಅಥವಾ ದಿನವಿಡೀ ಅಧಿಕ ಸಮಯ ಮೇಕಪ್ ‍ನಲ್ಲಿ ಕಳೆಯುವುದು ತ್ವಚೆ ತನ್ನ ನೈಸರ್ಗಿಕ ಕಳೆಯನ್ನು ಅಥವಾ ಆರೋಗ್ಯವನ್ನು ಕಳೆದುಕೊಳ್ಳುತ್ತದೆ.

ದೀರ್ಘ ಕಾಲ ಮೇಕಪ್ ನಲ್ಲದ್ದರೆ ಅದರಲ್ಲಿರುವ ರಾಸಾಯನಿಕ ಪದಾರ್ಥಗಳು ಮುಖದ ಮೇಲೆ ಮೊಡವೆ, ತುರಿಕೆ, ಸುಕ್ಕುಗಟ್ಟುವಿಕೆ, ಒರಟಾದ ಚರ್ಮ, ಉರಿಯೂತ, ಶುಷ್ಕತೆ ಹೀಗೆ ಅನೇಕ ಬಗೆಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಮೇಕಪ್ ‍ನಿಂದ ತಮ್ಮ ಆತ್ಮವಿಸ್ವಾಸ ಹೆಚ್ಚಿಸಿಕೊಳ್ಳಬಹುದು ಎಂಬುದು ಕಾಲ್ಪನಿಕವೇ ಸರಿ. ಮೇಕಪ್ ಇಲ್ಲದೆಯೇ ನಮ್ಮ ಸೌಂದರ್ಯವನ್ನು ಸುಂದರ ಮತ್ತು ಆಕರ್ಷಕವಾಗಿಸಿಕೊಳ್ಳಬಹುದು. ನಿಮ್ಮ ತ್ವಚೆಯು ನೈಸರ್ಗಿಕವಾಗಿ ಸುಂದರ ಮತ್ತು ಆರೋಗ್ಯವಾಗಿಸಲು ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು. ಅವು ಇಂತಿದೆ.

ಎಫ್ಫೋಲಿಯಾಟ್ ಮಾಡಿಸಿ: ಚರ್ಮ ಆರೋಗ್ಯಕರ ಹೊಳಪಿನಿಂದ ಕಂಗೊಳಿಸುಲು ಎಫ್ಫೋಲಿಯಾಟ್ ಸಹಾಯಕ. ನಿಮ್ಮ ತ್ವಚೆ ನಿರಂತರವಾಗಿ ಧೂಳು ಹಾಗೂ ಹೊಗೆಗೆ ತೆರೆದುಕೊಂಡಿರುತ್ತದೆ. ಅಲ್ಲದೇ ಆಗಾಗ ಹಚ್ಚುವ ಮೇಕಪ್‍ ಗಳ ಪ್ರಭಾವದಿಂದ ತ್ವಚೆ ಸಾಕಷ್ಟು ಹಾನಿಗೆ ಒಳಗಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಎಫ್ಫೋಲಿಯಾಟ್ ಮಾಡಿಸುವುದರಿಂದ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ. ಇದು ಚರ್ಮದ ಮೇಲಿರುವ ಸತ್ತ ಜೀವಕೋಶಗಳನ್ನು ತೆಗೆದು ಹಾಕುವುದು. ನಿಮ್ಮ ಚರ್ಮ ಮಂದವಾಗಿದೆ ಎಂದರೆ ವಾರದಲ್ಲಿ 2 – 3 ಬಾರಿ ಎಫ್ಫೋಲಿಯಾಟ್ ಮಾಡಿಸಬಹುದು.

ಸನ್‍ ಸ್ಕ್ರೀನ್ ಅಗತ್ಯವಾಗಿ ಬಳಸಿ: ಮನೆಯಿಂದ ಆಚೆ ಹೋಗುತ್ತಿದ್ದೀರಿ ಎಂದಾದರೆ ಮೊದಲು ನಿಮ್ಮ ಮುಖಕ್ಕೆ ಸನ್‍ಸ್ಕ್ರೀನ್ ಹಚ್ಚುವುದು ಒಳ್ಳೆಯ ಅಭ್ಯಾಸ. ಸೂರ್ಯನ ಬೆಳಕಿಗೆ ಹೋಗುವ 15 ನಿಮಿಷಗಳಿಗೂ ಮುಂಚೆ ಲೇಪಿಸಿಕೊಳ್ಳಿ. ಟಿಂನ್‍ಟೆಡ್ ಮಾಯಿಶ್ಚುರೈಸರ್ ಬಳಕೆಯಿಂದ ನಿಮ್ಮ ಮುಖ ತುಂಬಾ ಮಂದವಾಗಿ ಕಾಣುತ್ತಿದ್ದರೆ ಮಧ್ಯಮ ವ್ಯಾಪ್ತಿಯ ಟಿಂನ್‍ಟೆಡ್ ಮಾಯ್ಚುರೈಸರ್ ಕ್ರೀಮ್ ಅನ್ನು ಬಳಸಿ. ಅನಿವಾರ್ಯ ಸಂದರ್ಭ ಅಥವಾ ದೊಡ್ಡ ಸಮಾರಂಭಗಳಿಗೆ ಹೋಗುವಾಗ ಮಾತ್ರ ಹೆಚ್ಚಿನ ವ್ಯಾಪ್ತಿಯ ಅಥವಾ ಗಾಢವಾಗಿ ಅನ್ವಯಿಸಿಕೊಳ್ಳುವುದು ಸೂಕ್ತ.

ತಾಜಾ ನಿಂಬೆಹಣ್ಣಿನ ಬಳಕೆ: ಪ್ರತಿದಿನ ಬೆಚ್ಚಗಿನ ನೀರಿಗೆ ತಾಜಾ ನಿಂಬೆಹಣ್ಣಿನ ರಸವನ್ನು ಸೇರಿಸಿ ಕುಡಿಯಿರಿ. ಇದರಿಂದ ದೇಹ ಶುದ್ಧಿ ಸುಲಭವಾಗುವುದು. ಅಲ್ಲದೇ ಚರ್ಮದ ಆರೋಗ್ಯಕ್ಕೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ.

ಅಧಿಕ ನೀರು ಕುಡಿಯಿರಿ: ಹೆಚ್ಚು ನೀರು ಸೇವಿಸುವುದರಿಂದ ಉತ್ತಮ ಹಾಗೂ ಆರೋಗ್ಯಕರವಾದ ಚರ್ಮವನ್ನು ಪಡೆಯಬಹುದು. ಹೆಚ್ಚು ನೀರನ್ನು ಸೇವಿಸುವುದರಿಂದ ಚರ್ಮವು ತೇವಾಂಶದಿಂದ ಕೂಡಿರುತ್ತದೆ. ಆಗ ಚರ್ಮವು ಸುಕ್ಕಾಗದೆ ಮೃದುವಾಗಿ ಕೋಮಲವಾಗಿರುತ್ತದೆ. ಜೊತೆಗೆ ಉತ್ತಮ ಹೊಳಪು ಹಾಗೂ ಆಕರ್ಷಣೆಯಿಂದ ಕಂಗೊಳಿಸುತ್ತದೆ. ಆಗ ನೀವು ನಿಮ್ಮ ನೋಟವನ್ನು ಆಕರ್ಷಿಸಲು ಮೇಕಪ್ ಬಳಕೆ ಮಾಡುವ ಅಗತ್ಯವಿರುವುದಿಲ್ಲ. ನೈಸರ್ಗಿಕವಾಗಿಯೇ ಸುಂದರ ತ್ವಚೆ ಹಾಗೂ ಸೌಂದರ್ಯ ಪಡೆದುಕೊಳ್ಳುವಿರಿ. 

ಟೋನರ್ ಬಳಕೆ: ಸಾಮಾನ್ಯವಾಗಿ ಮುಖವನ್ನು ತೊಳೆಯುವಾಗ ಟೋನರ್ ಹಚ್ಚುವುದನ್ನು ಮರೆತುಬಿಟ್ಟಿರುತ್ತೇವೆ. ಆರೋಗ್ಯಕರ ಚರ್ಮವನ್ನು ಹೊಂದಬೇಕು ಎಂದರೆ ಟೋನರ್ ಬಳಕೆಯ ಹಂತ ಅತ್ಯಂತ ಪ್ರಮುಖವಾದ ಹೆಜ್ಜೆ. ಟೋನರ್ ಬಳಸಿ ಮುಖ ತೊಳೆಯುವುದರಿಂದ ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಜೊತೆಗೆ ನಿಮ್ಮ ಚರ್ಮ ಉಲ್ಲಾಸದಿಂದ ಕೂಡಿರುತ್ತದೆ.

ವಿಶ್ರಾಂತಿ: ದಣಿದ ದೇಹಕ್ಕೆ ನಿದ್ರೆ ಒಂದೇ ಪರಿಹಾರ. ಹಾಗಾಗಿ 5-6 ಗಂಟೆಗಳ ಸುಖ ನಿದ್ರೆ ಆರೋಗ್ಯಕರ ತ್ವಚೆ ಹೊಂದಲು ಸಹಕಾರಿ. ಹೀಗೆ ಅಲ್ಪ ಸುಧಾರಣೆಗಾಗಿ ಸಮಯ ಮೀಸಲಿಟ್ಟಾಗ ಸುಂದರ ಮೊಗವನ್ನು, ನಗುವಿನ ಜೊತೆಗೆ ನಿಸ್ಸಂದೇಹವಾಗಿ ಪಡೆಯಬಹುದು.

ಪ್ರೇಮಿಗಳ ದಿನಾಚರಣೆಯನ್ನು ಆಚರಿಸುವ ಅಸಲಿ ಕಾರಣವೇನು ಗೊತ್ತೆ…?

#balkaninews #makeup #makeuptips #makeupgirl #makegirl

Tags

Related Articles