ಆರೋಗ್ಯಆಹಾರಜೀವನ ಶೈಲಿ

ಮೈಕ್ರೋಒವನ್ ಇಲ್ಲದೆಯೂ ಮಾಡಿ ತಂದೂರಿ ಗೋಬಿ…

ಬೆಂಗಳೂರು, ಮೇ.23:

ಮೈಕ್ರೋಒವನ್ ಅಥವಾ ಇದ್ದಿಲು ಯಾವುದೂ ಇಲ್ಲದೇ ಸುಲಭವಾಗಿ ತಂದೂರಿ ಗೋಬಿ ಮಾಡುವ ವಿಧಾನ ಇಲ್ಲಿದೆ.

ಅಗತ್ಯ ಸಾಮಗ್ರಿಗಳು:

ಗೋಬಿ  ½ ಕಿ.ಲೋ. (ಗೋಬಿಯನ್ನು ವಿನಿಗರ್ ಅಥವಾ ನಿಂಬೆ ರಸದಿಂದ, ನೀರಿನಲ್ಲಿ ಶುದ್ಧಗೊಳಿಸಿ)

ಮೊಸರು – 1 ಕಪ್

ಕಡ್ಲೆಹಿಟ್ಟು- 3-4 ಚಮಚ

ಅಚ್ಚಮೆಣಸಿನ ಪುಡಿ- 1 ಚಮಚ

ಗರಂ ಮಸಾಲ- 1 ಚಮಚ

ಆಮ್ ಚೂರ್ ಪೌಡರ್- ಚೂರು

ಜೀರಿಗೆ ಪುಡಿ -1 ಚಮಚ

ನಿಂಬೆ ರಸ-ಚೂರು

ಕಸೂರಿ ಮೇಥಿ – ¼ ಚಮಚ

ಉಪ್ಪು- ರುಚಿಗೆ

ಮಾಡುವ ವಿಧಾನ:

1. ಇದನ್ನೆಲ್ಲಾ ಸೇರಿಸಿ ಮಿಶ್ರಣ ಮಾಡಿ, ಸ್ವಲ್ಪ ಎಣ್ಣೆ ಹಾಕಿ.

2. ಫಾಯಿಲ್ ಪೇಪರ್ ಮೇಲೆ ಒಂದು ಚೂರು ಬಿಸಿ ಕೆಂಡ ಹಾಕಿ, 1 ಗಂಟೆ ಧಮ್ ಕಟ್ಟಲು ಬಿಡಿ.

3. ತಂದೂರಿ ಕಡ್ಡಿಗೆ ಧಮ್ ಕಟ್ಟಿಟ್ಟ ಗೋಬಿಯನ್ನು ಪೋಣಿಸಿ, ಸ್ಟವ್ ನಿಂದ ಡೈರೆಕ್ಟಾಗಿ ಬೇಯಿಸಿ. ಬೆಣ್ಣೆ ಸವರಿ  ಮತ್ತೆ ಬೇಯಿಸಿದರೆ ರುಚಿ ಹೆಚ್ಚುತ್ತೆ. ನೀವು ಟ್ರೈ ಮಾಡಿ ಸವಿಯಿರಿ.

ಒಡವೆಯ ಗೊಡವೇ, ಮರುಗೋದು ತರವೇ

#tandoorigobi #tandoorigobifood #tandoorigobicauliflower

 

Tags