ಆರೋಗ್ಯಆಹಾರಜೀವನ ಶೈಲಿಸೌಂದರ್ಯ

ಬಳಸಿದ ಟೀ ಬ್ಯಾಗ್ ಗಳನ್ನು ಎಸೆಯಬೇಡಿ, ಏಕೆ ಅಂತಿರಾ ಕಾರಣ ಇಲ್ಲಿದೆ ನೋಡಿ

ಬೆಂಗಳೂರು, ಜ.10: ಗ್ರೀನ್‍, ಟೀ, ಬ್ಲಾಕ್‍ ಚಹಾ ಕುಡಿಯುವುದರಿಂದ ನಿಸ್ಸಂಶಯವಾಗಿ ನಮ್ಮ ದೇಹ ಮತ್ತು ಅದರ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನವಾಗುತ್ತದೆ.

ಆದರೆ ನಾವು ಚಹಾ ಮಾಡಿಕೊಂಡ ನಂತರ ಟೀ ಬ್ಯಾಗ್‍ ಗಳನ್ನು ಬಹುತೇಕ ಸಂದರ್ಭಗಳಲ್ಲಿ ಹೊರಹಾಕುತ್ತೇವೆ. ಆದರೆ ಹೀಗೆ ಬಳಸಿದ ಟೀ ಬ್ಯಾಗ್‍ ಗಳು ನಾನಾ ಪ್ರಯೋಜನಗಳನ್ನು ಹೊಂದಿವೆ. ಹೌದು! ಬಳಸಿದ ಟೀ ಬ್ಯಾಗ್‍ ಗಳನ್ನು ಬೇರೆ ಬೇರೆ ಕಾರಣಗಳಿಂದಾಗಿ ಪುನಃ ಬಳಕೆ ಮಾಡಿಕೊಳ್ಳಬಹುದು.

ಮುಖದ ಕಾಂತಿಯನ್ನು ವೃದ್ಧಿಸುತ್ತದೆ:

ಒಂದು ಚಹಾ ಚೀಲ ನಿಮ್ಮ ಚರ್ಮವನ್ನು ತಿಕ್ಕಿ ತೊಳೆಯುತ್ತದೆ. ಚಹಾದ ಒರಟಾದ ವಿನ್ಯಾಸವು ನಿಮ್ಮ ಚರ್ಮದ ಆಳಕ್ಕೆ ಇಳಿದು ದುಪ್ಪಟ್ಟು ಪ್ರಮಾಣದಲ್ಲಿ ಶುದ್ಧೀಕರಿಸುತ್ತದೆ. ಇದು ಚರ್ಮದ ರಂಧ್ರಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ಯಾವುದೇ ಚರ್ಮದ ಮೇಲಿರುವ ಕೊಳಕು ಮತ್ತು ಇತರ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಅಷ್ಟೇ ಅಲ್ಲದೇ, ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ಕಣ್ಣಿನ ಸುತ್ತಾ ಇರುವ ಕಪ್ಪು ಕಲೆಯನ್ನು ನಿವಾರಿಸುತ್ತದೆ:

ಒತ್ತಡ, ದಣಿದ ಮತ್ತು ನಿದ್ದೆಯಿಲ್ಲದ ರಾತ್ರಿಗಳಿಂದಾಗಿ ನಿಮ್ಮ ಕಣ್ಣುಗಳು ಸುತ್ತಾ ಕಪ್ಪು ಕಲೆಗಳನ್ನುಂಟು ಮಾಡಬಹುದು. ಇದರಿಂದ ನಿಮ್ಮ ಮುಖದ ಕಾಂತಿಯನ್ನು ಕುಂದಿಸಬಹುದು. ಸುಮಾರು 15 ನಿಮಿಷಗಳ ಕಾಲ ಫ್ರೀಡ್ಜ್ ‍ನಲ್ಲಿಟ್ಟಿರುವ ಚಹಾ ಚೀಲಗಳನ್ನು ಕಣ್ಣಿನ ಮೇಲೆ ಇಡುವುದರಿಂದ ಕಪ್ಪು ಕಲೆಯನ್ನು ಗುಣಪಡಿಸುತ್ತದೆ.ಸುಟ್ಟ ಗಾಯದ ಗುರುತು ಹಾಗೂ ಕಲೆ ನಿವಾರಕ:

ನಿಮ್ಮದು ಸೂಕ್ಷ್ಮ ಚರ್ಮವಾಗಿದ್ದು ಸೂರ್ಯನ ಬೆಳಕು ಬಿದ್ದರೆ ಸುಟ್ಟ ಗಾಯಗಳಾಗಬಹುದು. ಹೀಗಾದರೆ ಅದನ್ನು ನಿವಾರಿಸುವುದು ಬಹಳ ಕಷ್ಟ. ಈ ಟೀ ಬ್ಯಾಗ್‍ ಗಳು ಚರ್ಮದ ಮೇಲಾಗಿರುವ ಸುಟ್ಟ ಕಲೆಗಳನ್ನು ತೊಡೆದುಹಾಕುತ್ತದೆ. ಸುಮಾರು 30 ನಿಮಿಷಗಳ ಕಾಲ ಚಹಾ ಚೀಲಗಳನ್ನು ಫ್ರಿಡ್ಜ್‍ ನಲ್ಲಿ ಇಟ್ಟು ತಣ್ಣಗಿರುವ  ಟೀ ಬ್ಯಾಗನ್ನು 15 ನಿಮಿಷಗಳ ಕಾಲ ಮುಖದ ಮೇಲಿಟ್ಟುಕೊಂಡರೆ ಉತ್ತಮ ಫಲಿತಾಂಶ ಕಾಣಬಹುದು. ಅಲ್ಲದೇ, ಯಾವುದೇ ರೀತಿಯ ಉರಿಯೂತವನ್ನು ಕಡಿಮೆ ಮಾಡುತ್ತವೆ. ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆ ಎರಡು ಬಾರಿ ಇದನ್ನು ಮಾಡಿದರೆ ಒಳ್ಳೆಯದು.

Tags