ಆರೋಗ್ಯಆಹಾರಜೀವನ ಶೈಲಿ

ಉತ್ತಮ ಆರೋಗ್ಯಕ್ಕೆ ಸೇವಿಸಿ ನೈಸರ್ಗಿಕ ಚಹಾ..!

ಮುಂಜಾನೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಕೈಯಲ್ಲಿ ಬಿಸಿ ಬಿಸಿ ಚಹಾದ ಕಪ್ ಹಿಡಿದರೆ ಸಾಕು, ಮನಕೆ ಆಗುವ ಸಂತಸವೇ ಬೇರೆ..! ಚಹಾವನ್ನು, ಅದರ ಸವಿಯನ್ನು ಇಷ್ಟಪಡದವರಿಲ್ಲ! ರುಚಿ ರುಚಿಯಾದ ಚಹಾದಲ್ಲಿ ಉತ್ಕರ್ಷಣ ನಿರೋಧಕ ಅಂಶಗಳು ಹೆಚ್ಚಾಗಿದೆ. ಆದುದರಿಂದ ಇದು ಕ್ಯಾನ್ಸರ್ ನಂತಹ ಮಾರಣಾಂತಿಕ ರೋಗಗಳು ಬಾರದಂತೆ ತಡೆಯುತ್ತದೆ. ಜೊತೆಗೆ ಮನೋಲ್ಲಾಸಕ್ಕಾಗಿ ನೀವು ಕುಡಿಯುವ ಚಹಾ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ದಿನನಿತ್ಯ ಸೇವಿಸುವ ಚಹಾ ಕ್ಕೆ ಮನೆಯಲ್ಲಿಯೇ ಸಿಗುವ ಒಂದಿಷ್ಟು ಗಿಡಮೂಲಿಕೆ ಸತ್ವಗಳನ್ನು ಸೇರಿಸಿ ಸವಿದರೆ ಆರೋಗ್ಯಕ್ಕೆ ಇನ್ನೂ ಉತ್ತಮ. ಚಹಾಗೆ ಸೇರಿಸಬಹುದಾದ ಹಾಗೂ ಆರೋಗ್ಯಕ್ಕೆ ಉತ್ತಮವಾದ ನೈಸರ್ಗಿಕ ಸತ್ವಗಳು ಯಾವುದು ಎಂಬುದನ್ನು ನಾವೀಗ ತಿಳಿಯೋಣ.

Image result for ತುಳಸಿ ಎಲೆಗಳ ಚಹಾ

ತುಳಸಿ ಎಲೆಗಳ ಚಹಾ

ತುಳಸಿಯ ಆರೋಗ್ಯ ಲೀಲೆಯನ್ನು ತಿಳಿಯದವರಾರು ಹೇಳಿ. ಆಗಾಗ ಕಾಡುವ ಶೀತ, ನೆಗಡಿಗೆ ತುಳಸಿ ರಸ ರಾಮಬಾಣ. ತುಳಸಿ ಎಲೆಗಳಲ್ಲಿ ಅಧಿಕ ಪ್ರಮಾಣದ ಔಷಧೀಯ ಸತ್ವಗಳು ಅಡಕಗೊಂಡಿವೆ. ಪ್ರತಿನಿತ್ಯ ತುಳಸಿ ಚಹಾ ಸೇವಿಸದರೆ ಉತ್ತಮ ಆರೋಗ್ಯವನ್ನು ನೀವು ಪಡೆಯಬಹುದು. ಒಂದಷ್ಟು ತುಳಸಿ ಎಲೆಗಳನ್ನು ಚಹಾದ ಮಿಶ್ರಣಕ್ಕೆ ಬೆರೆಸಿದರೆ ಆಯಿತು.

Image result for ಶುಂಠಿ ಚಹಾ

ಶುಂಠಿ ಚಹಾ

ನೈಸರ್ಗಿಕವಾಗಿ ದೊರಕುವ ಶುಂಠಿಯು ಕೂಡಾ ಉತ್ತಮ ಆರೋಗ್ಯಕ್ಕೆ ಒಳ್ಳೆಯದು. ಶುಂಠಿ ಚಹಾವೂ ಅಷ್ಟೇ. ತುಂಬಾ ರುಚಿಕರವಾದುದು ಹೌದು. ಇದರಲ್ಲಿರುವ ಮಸಾಲೆ ಗುಣವು ಮಸಾಲೆ ಪ್ರಿಯರಿಗೆ ತುಂಬಾ ಇಷ್ಟವಾಗುತ್ತದೆ. ಶುಂಠಿ ಚಹಾ ತಯಾರಿಸಿವಾಗ ಸ್ವಲ್ಪ ಏಲಕ್ಕಿ ಮತ್ತು ಲವಂಗವನ್ನು ಬೆರೆಸಿದರೆ ಸಾಕು, ಬಿಸಿ ಬಿಸಿಯಾದ ಮಸಾಲೆ ಟೀ ರೆಡಿ.

Image result for ಪುದಿನ ಚಹಾ

ಪುದಿನ ಚಹಾ

ಪುದಿನ ದಲ್ಲಿ ಉತ್ಕರ್ಷಣ ನಿರೋಧಕ ಸತ್ವವು ಅಧಿಕವಿದ್ದು, ಹೊಟ್ಟೆ ಉಬ್ಬುರವನ್ನು ನಿಯಂತ್ರಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿರುವ ಪುದೀನಾ ಚಹಾ ಕುಡಿಯಲು ರುಚಿಯಾಗಿರುತ್ತದೆ ಮೊದಲಿಗೆ ಕೆಲವು ತಾಜಾ ಪುದಿನ ಎಲೆಗಳನ್ನು ಕಲಸಿ ಕುದಿಯುವ ನೀರಿಗೆ ಹಾಕಬೇಕು. ನಂತರ ಚಹಾ ಪುಡಿ ಬೆರೆಸಿ ಸ್ವಲ್ಪ ಸಮಯ ಕುದಿಯಲು ಬಿಡಿ. ನಂತರ ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಬೆರೆಸಿ. ಸವಿಯಾದ ಪುದಿನ ಚಹಾ ಸೇವಿಸಲು ಸಿದ್ಧ.

ಇನ್ನೇಕೆ ತಡ? ನೀವು ಚಹಾ ಪ್ರಿಯರಾಗಿದ್ದರೆ, ಈ ನೈಸರ್ಗಿಕವಾದ ಚಹಾ ವನ್ನು ಮರೆಯದೆ ಕುಡಿಯಿರಿ. ಉತ್ತಮ ಆರೋಗ್ಯ ಪಡೆಯಿರಿ.

ರಾಜಕೀಯದಿಂದ ದೂರ ಇಳಿದ ಅಜಯ್ ದೇವಗನ್

#tea, #helth, #tips, #balkaninews

Tags