ಆರೋಗ್ಯಜೀವನ ಶೈಲಿ

ಟೀ ಕುಡಿಯುವುದರಿಂದ ಆಗುವ ಲಾಭಗಳು, ದಿನಕ್ಕೆಷ್ಟು ಕಪ್ ಸೇವಿಸಬೇಕು?

ಕೆಲವರಿಗೆ ಗಂಟೆ, ಅರ್ಧಗಂಟೆಗೊಮ್ಮೆ ಕಾಫಿ, ಟೀ ಸೇವಿಸುವ ಅಭ್ಯಾಸ ಇರುತ್ತದೆ. ಯಾವುದೇ ಆಗಲಿ ಅತಿಯಾದರೆ ಆರೋಗ್ಯಕ್ಕೆ ಮಾರಕ ಎಂಬುದು ನೆನಪಿರಲಿ. ಕಾಫಿ, ಟೀ ಆಗಲಿ ಹಿತಮಿತವಾಗಿದ್ದರೆ ಆರೋಗ್ಯಕ್ಕೆ ಒಳಿತಾಗುತ್ತದೆ. ಅದೂ ಮಿತಿ ಮೀರಿದರೆ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದೇ ರೀತಿ ಮಸಾಲಾ ಟೀ ಸೇವನೆಯಿಂದಲೂ ನಾನಾ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಅವು ಏನು ಎಂಬುದನ್ನು ಈಗ ನೋಡೋಣ. ಅದರ ಜತೆಗೆ ದಿನಕ್ಕೆ ಎಷ್ಟು ಕಪ್ ಕುಡಿಯಬಹುದು, ಯಾವ ಟೀ ಕುಡಿಯಬಾರದು ಎಂಬ ಸಂಗತಿಗಳ ಬಗ್ಗೆಯೂ ಗಮನಹರಿಸೋಣ.

ಯಾವಾಗ ಟೀ ಕುಡಿಯಬಾರದು 

* ಬೆಳಗ್ಗೆ ಎದ್ದ ತಕ್ಷಣ

* ಮಲಗುವ ಸ್ವಲ್ಪ ಹೊತ್ತು ಮುಂಚೆ

* ಊಟದ ಜತೆ

ದಿನಕ್ಕೆ ಎಷ್ಟು ಲೋಟ ಟೀ ಒಳ್ಳೆಯದು

2-3 ಕಪ್‌ ಟೀ ಕುಡಿಯಬಹುದು.

ಗ್ರೀನ್‌ ಟೀ ಹಾಗೂ ಗ್ರೀನ್‌ ಕಾಫಿಯಲ್ಲಿ ಯಾವುದು ಒಳ್ಳೆಯದು? 

ಇವೆಲ್ಲಾ ಕಂಪನಿ ಲಾಭದ ತಂತ್ರಗಳಷ್ಟೇ. ಆದರೆ ಭಾರತೀಯರು ಮಾಡುವ ಮಸಾಲ ಟೀಯಲ್ಲಿ ಕೂಡ ಆ್ಯಂಟಿಆಕ್ಸಿಡೆಂಟ್‌ ಅಂಶವಿದೆ.

ಸಕ್ಕರೆ ಹಾಕಿದ ಟೀ ಒಳ್ಳೆಯದಾ? 

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ದಿನದಲ್ಲಿ 6-9 ಚಮಚ ಸಕ್ಕರೆ ದೇಹವನ್ನು ಸೇರಿದರೆ ಏನೂ ತೊಂದರೆಯಿಲ್ಲ. ಆದರೆ ಪ್ಯಾಕ್‌ ಮಾಡಿದ ಸಿಹಿ ಪದಾರ್ಥಗಳು ಒಳ್ಳೆಯದಲ್ಲ. ಆದ್ದರಿಂದ ಟೀ ಪ್ರಿಯರೇ ದಿನಕ್ಕೆ 2-3 ಲೋಟ ಟೀಯನ್ನು ಎಂಜಾಯ್‌ ಮಾಡಿ.

 

Tags

Related Articles