ಆರೋಗ್ಯಜೀವನ ಶೈಲಿ

ಆಮ್ಲೀಯ ಪಾನೀಯ ಸೇವನೆಯಿಂದ ದಂತಪಂಕ್ತಿಗೆ ಆಪತ್ತು

ಆಮ್ಲೀಯ ಪಾನೀಯ ಸೇವನೆಯಿಂದ ದಂತಪಂಕ್ತಿಗೆ ಆಪತ್ತು

ಈಗೀಗ ದಂತಸಮಸ್ಯೆಗಳು ಹೆಚ್ಚಾಗುತ್ತಿವೆ. ಗುಟ್ಕಾ, ಪಾನ್ ಬೀಡಾ ಜಗಿಯವರ ಹಲ್ಲುಗಳ ಬಗ್ಗೆ ಮಾತನಾಡುವುದೇ ಬೇಡ. ಆ ರೀತಿಯ ಯಾವುದೇ ದುರಭ್ಯಾಸಗಳು ಇಲ್ಲದವರ ಹಲ್ಲುಗಳೂ ಹಾಳಾಗುತ್ತಿವೆ. ಇದಕ್ಕೆ ಕಾರಣ .. ನಾವು ತಿನ್ನುವ ಆಹಾರ. ಅದರಲ್ಲೂ ಆಮ್ಲೀಯ ಪಾನೀಯಗಳ ಹೆಚ್ಚು ಸೇವನೆ. ಇದರಿಂದ ಹಲ್ಲುಗಳು ಹೊಳಪು ಕಳೆದುಕೊಳ್ಳುವ, ಹಾಳಾಗುವ ಸಾಧ್ಯತೆಗಳು ಹೆಚ್ಚಿವೆ ಎನ್ನುತ್ತಿದ್ದಾರೆ ತಜ್ಞರು.

ಪಾನೀಯಗಳನ್ನು ಸಿಪ್‌ ಮಾಡುವಾಗ ಎಚ್ಚರವಹಿಸಿ. ಏಕೆಂದರೆ ಇದು ನಿಮ್ಮ ದಂತ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ಚೂರೇ ಚೂರಾಗಿ ಸಿಪ್‌ ಮಾಡುತ್ತಾ ಕುಡಿಯುವುದು ಕೆಲವರಿಗೆ ಅಭ್ಯಾಸ. ಆದರೆ ಆಮ್ಲೀಯ ಗುಣ ಇರುವ ಪಾನೀಯಗಳು ಹಲ್ಲಿನ ಸವೆತವನ್ನು ಉಂಟು ಮಾಡಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆಮ್ಲೀಯ ಆಹಾರಗಳು ಮತ್ತು ಪಾನೀಯಗಳು ಹಲ್ಲಿನ ಸವೆತಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ.

ಸೋ ಇನ್ನು ಮುಂದೆ ಹೆಚ್ಚು ಹುಳಿಯಾಗಿರುವ ಪಾನೀಯ, ಜ್ಯೂಸ್‍ ಗಳ ತಂಟೆಗೆ ಹೋಗದಿರುವುದೇ ಉತ್ತಮ. ಪಾನೀಯರು ಹುಳಿಯಾಗಿರಲು ಆಮ್ಲಗಳನ್ನು ಸೇರಿಸುತ್ತಾರೆ. ಇವು ಹಲ್ಲಿನ ಎನಾಮಿಲನ್ನು ಹಾಳು ಮಾಡುತ್ತವೆ. ಹಲ್ಲುಗಳ ಸವೆತಕ್ಕೂ ಕಾರಣವಾಗುತ್ತದೆ. ಹಲ್ಲು ತನ್ನ ಹೊಳಪನ್ನು ಕಳೆದುಕೊಳ್ಳುವ, ದಂಪಕುಳಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಪಾನೀಯಗಳ ಸೇವನೆಯಲ್ಲಿ ಎಚ್ಚರ ವಹಿಸಿ.

 

Tags

Related Articles