ಆರೋಗ್ಯಆಹಾರಜೀವನ ಶೈಲಿ

ಕೈ ಕಾಲು ಕಪ್ಪಾಗಿದ್ದರೆ ಇದನ್ನು ಒಮ್ಮೆ ಬಳಸಿ ವ್ಯತ್ಯಾಸ ನೋಡಿ

ಬೇಸಿಗೆಯ ಬಿಸಿಲು ನಮ್ಮ ತ್ವಚೆಯ ಮೇಲೆ ಅನೇಕ ದುಷ್ಪರಿಣಾಮ ಉಂಟು ಮಾಡುತ್ತದೆ. ಅದರಲ್ಲಿ ಸರ್ವೇಸಾಮಾನ್ಯ ಸಮಸ್ಯೆ ಎಂದರೆ ಸ್ಕಿನ್ ಟ್ಯಾನ್ ಆಗುವುದು ಅಥವಾ ಕಪ್ಪುಕಲೆ. ಇದರಿಂದ ಮುಕ್ತಿ ಪಡೆಯಲು ಪಾರ್ಲರ್‍ ನಲ್ಲಿ ಹೇಳುವ ದುಬಾರಿ ಉಪಚಾರದ ಹಿಂದೆ ಬಿದ್ದು, ತ್ವಚೆ ಮತ್ತು ಹಣವನ್ನು ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದು ವಿಷಾದನೀಯವೇ ಸರಿ.

ಈಗ ನಾವು ತಿಳಿಸುವ ಮನೆಮದ್ದು ಸ್ಕಿನ್ ಟ್ಯಾನ್ ಗೆ ರಾಮಬಾಣ.

ಅಗತ್ಯ ಪದಾರ್ಥಗಳು:

ಶುದ್ಧ ಗಟ್ಟಿ ಮೊಸರು

ಶುದ್ಧ ಜೇನುತುಪ್ಪ

ಮಾಡುವ ವಿಧಾನ:

ಒಂದು ಬಟ್ಟಲಿಗೆ ಒಂದು ಚಮಚ ಮೊಸರು ಮತ್ತು ಜೇನುತುಪ್ಪವನ್ನು ಹಾಕಿ, ಮಿಕ್ಸ್‍ ಮಾಡಿಟ್ಟುಕೊಳ್ಳಿ.

ಕೈ, ಕಾಲು, ಮುಖ, ಕುತ್ತಿಗೆ, ಬೆನ್ನು ಹೀಗೆ ದೇಹದ ಯಾವ ಭಾಗ ಕಪ್ಪಾಗಿರುತ್ತೋ, ಆ ಭಾಗವನ್ನು ನೀರಿನಿಂದ ತೊಳೆದು ಆ ಭಾಗಕ್ಕೆ ಹಚ್ಚಿ, 10 -15 ನಿಮಿಷ, ಉಗುರು ಬೆಚ್ಚಗಿನ ನೀರಿನಿಂದ ತೊಳೆದರೆ ಕಲೆ ಕಡಿಮೆ ಆಗುತ್ತದೆ. ಹೀಗೆ ವಾರಕ್ಕೆ 2 ಬಾರಿ ಮಾಡಿದರೆ, ಕಲೆಯಿಂದ ಪೂರ್ಣ ಮುಕ್ತಿ ದೊರೆಯುತ್ತದೆ.

ಆದಷ್ಟು ಮನೆಯಲ್ಲೇ ಹೆಪ್ಪು ಹಾಕಿದ ಮೊಸರು ಮತ್ತು ನೈಸರ್ಗಿಕವಾದ ಜೇನುತುಪ್ಪ ಬಳಸಿದರೆ, ಇನ್ನೂ ಉತ್ತಮ ಪರಿಣಾಮ ನಿಮ್ಮದಾಗುತ್ತದೆ.

Image result for The hand is darkening

ಅಕಾಲಿಕ ನೆರಿಗೆಗೆ ಮನೆ ಮದ್ದು ಈ ತೆಂಗಿನೆಣ್ಣೆ

#balkaninews #healthytips #beautytips

 

Tags