ಆರೋಗ್ಯಜೀವನ ಶೈಲಿ

ಜ್ವರ ಬಂದಾಗ ಮಾಡಬಹುದಾದ ಮನೆ ಔಷಧಿಗಳು

ಅನೇಕ ಬಾರಿ ಅಧಿಕ ಶ್ರಮದ ಕೆಲಸ, ಮಾನಸಿಕ ಒತ್ತಡ ಹೆಚ್ಚಾಗುವುದರಿಂದ ಅಜೀರ್ಣದಿಂದ, ಭಯದಿಂದ ಜ್ವರ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು. ಜ್ವರ ಕೆಲವು ಕಾಯಿಲೆಗಳ ಲಕ್ಷಣವಾಗಿರಬಹುದು. ಏಕೆಂದರೆ ಜ್ವರ ದೇಹದಲ್ಲಿ ಉಂಟಾಗಿರುವ ಸೋಂಕಿನ ವಿರುದ್ಧ ಹೋರಾಡುವ ರಕ್ಷಣಾ ವ್ಯವಸ್ಥೆಯ ವಿಧಾನವೂ ಆಗಿರುತ್ತದೆ. ಇಲ್ಲಿ ಜ್ವರ ಬಂದಾಗ ಯಾವ ರೀತಿಯ ಮನೆ ಔಷಧಿಗಳನ್ನು ಉಪಯೋಗಿಸಬಹುದು? ಹೇಗಿರಬೇಕೆಂದು ವಿವರವನ್ನು ಕೊಡಲಾಗಿದೆ. ನಿಮಗೆ ಇದರಿಂದ ಖಂಡಿತ ಅನುಕೂಲವಾಗುತ್ತದೆ, ಇದನ್ನು ಇತರರಿಗೂ ತಿಳಿಸಿ…

Image result for fever home remedies

*ಜ್ವರವಿರುವಾಗ ಗಟ್ಟಿ ಆಹಾರಕ್ಕಿಂತ ದ್ರವಾಹಾರ ಸೇವನೆ ಒಳ್ಳೆಯದು.

* ಕರಿಮೆಣಸು, ಜೀರಿಗೆ, ಶುಂಠಿ ಧನಿಯಾಗಳನ್ನು ಕುಟ್ಟಿ ಪುಡಿ ಮಾಡಿ ಕಷಾಯ ತಯಾರಿಸಿ ಕುಡಿಯಬೇಕು. ಜ್ವರವಿದ್ದಾಗ ಇದನ್ನು ಕುಡಿದರೆ ದೇಹ ಬೆವರಿ ತಂಪಾಗುತ್ತದೆ,

*ತುಳಸಿಬೀಜ, ನಿಂಬೆಹಣ್ಣನ್ನು ಹಾಕಿ ತಯಾರಿಸಿದ ಟೀ ಕುಡಿಯಬೇಕು.

*ಹಣೆಯ ಮೇಲೆ ತಣ್ಣೀರಿನಲ್ಲಿ ಅದ್ದಿದ ದಪ್ಪನೆಯ ಬಟ್ಟೆಯ ಪಟ್ಟಿಯನ್ನು ಹಾಕಬೇಕು. ಹೆಚ್ಚು ಜ್ವರವಿದ್ದಲ್ಲಿ ಬಟ್ಟೆಯನ್ನು ತಣ್ಣೀರಿನಲ್ಲಿ ಅದ್ದಿ ಮೈಯನ್ನೆಲಲ್ಲ ಒರಸಬೇಕು.

*ಒಂದು ಹಿಡಿ ತುಳಸಿಯನ್ನು ತೊಳೆದು ಸ್ವಚ್ಛಗೊಳಿಸಿ ಒಂದು ಲೋಟ ನೀರಿನಲ್ಲಿ ಹಾಕಿ ಅರ್ಧ ಲೋಟ ಆಗುವವರೆಗೂ ಸಣ್ಣಗಿನ ಉರಿಯಲ್ಲಿ ಕುದಿಸಿ ಬೆಲ್ಲ ಹಾಕಿ ನಾಲ್ಕು ಚಮಚೆಯಷ್ಟನ್ನು ದಿನಕ್ಕೆ ನಾಲ್ಕು ಬಾರಿ ಕುಡಿಯಬೇಕು. ಚಿಕ್ಕಮಕ್ಕಳಿಗೆ ಎರಡು ಚಮಚೆ ಕುಡಿಸಬೇಕು.

*ವೈರಸ್ ಜ್ವರವಿದ್ದಾಗ ನುಗ್ಗೆ ಸೊಪ್ಪಿನಿಂದ ಸಾರು ತಯಾರಿಸಿ ಅದಕ್ಕೆ ಸ್ವಲ್ಪ ಬೆಳ್ಳುಳ್ಳಿ ರಸ ಬೆರೆಸಿ ಕುಡಿಯಬೇಕು.

*ಒಂದು ಲೋಟ ಬಿಸಿ ನೀರಿಗೆ ಅರ್ಧ ಚಮಚೆಅರಿಶಿನ, 5 ಕಾಳುಮೆಣಸಿನ ಪುಡಿ ಸೇರಿಸಿ ದಿನಕ್ಕೆರೆಡು ಬಾರಿ ಖಾಲಿ ಹೊಟ್ಟೆಗೆ ಕುಡಿಯಬೇಕು.

ನಿಂಬೆ ಹಣ್ಣಿನಿಂದ ಇಷ್ಟಲ್ಲಾ ಲಾಭಗಳಿದೆಯಾ?

#balkaninews #homeremedies #fever #health

Tags