ಜೀವನ ಶೈಲಿಫ್ಯಾಷನ್ಸೌಂದರ್ಯ

ಕೂದಲಿನ ರಕ್ಷಣೆಗೆ ಒಂದಿಷ್ಟು ಟಿಪ್ಸ್!

ಸೌಂದರ್ಯ ಪ್ರಿಯರಾಗಿರುವ ಹೆಣ್ಣು ಮಕ್ಕಳಿಗೆ ತ್ವಚೆಯ ರಕ್ಷಣೆ ಅದೆಷ್ಟು ಮುಖ್ಯವೋ ಅಷ್ಟೇ ಕೂದಲಿನ ರಕ್ಷಣೆಯೂ ಮುಖ್ಯ. ಉದ್ದವಾದ ಕೂದಲು ಪಡೆಯಲು ಅದೆಷ್ಟು ಹರಸಾಹಸ ಮಾಡುತ್ತೇವೆಯೋ ತಿಳಿಯದು. ಅದರಲ್ಲೂ ತಲೆ ಹೊಟ್ಟಿಲ್ಲದ ಕೂದಲು ಪಡೆಯವುದು ಸಾಹಸವೇ ಸರಿ!

ಬೇಸರದ ಸಂಗತಿಯೆಂದರೆ ಕೂದಲಿನ ರಕ್ಷಣೆಯ ನೆಪದಲ್ಲಿ  ಗೊತ್ತಿಲ್ಲದೆ ನಾವು ಕೆಲವು ತಪ್ಪುಗಳನ್ನು ಮಾಡಿಬಿಡುತ್ತೇವೆ. ದಯವಿಟ್ಟು ಅದರ ಬಗ್ಗೆ ಗಮನವಿರಿಸಲು ಮರೆಯದಿರಿ.

ಹೆಚ್ಚಿನವರು ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ ಬೆಳಗ್ಗೆ ಎದ್ದು ಸ್ನಾನ ಮಾಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಕೂದಲಿಗೆ ಎಣ್ಣೆ ಹಚ್ಚಿ ರಾತ್ರಿ ಪೂರ್ತಿ ಬಿಡಬೇಡಿ. ಯಾಕೆಂದರೆ ಹೀಗೆ ಮಾಡುವುದರಿಂದ ಕೂದಲು ಉದುರುವುದು ಜಾಸ್ತಿಯಾಗುತ್ತದೆ ಮಾತ್ತವಲ್ಲ ಕೂದಲಿಗೆ ಧೂಳು ಅಂಟಿಕೊಳ್ಳುತ್ತದೆ. ಬದಲಿಗೆ ತಲೆ ಸ್ನಾನ ಮಾಡುವ ಒಂದು ಗಂಟೆ ಮೊದಲು ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಒಳ್ಳೆಯದು.

ಆದಷ್ಟು ಕಡಿಮೆ ಪ್ರಮಾಣದಲ್ಲಿ ಶ್ಯಾಂಪೂ ಬಳಸಿದರೆ ಒಳ್ಳೆಯದು. ಸಾಧ್ಯವಾದರೆ ಶಾಂಪೂ ಬಳಕೆಯಿಂದ ದೂರವಿದ್ದರೆ ಮತ್ತೂ ಒಳ್ಳೆಯದು. ಆದರೆ ಅದು ಸಾಧ್ಯವಾಗದು. ಅದರ ಬದಲಿಗೆ ಶಾಂಪೂ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಿ. ಯಾಕೆಂದರೆ ಶಾಂಪೂವಿನಲ್ಲಿ ಇರುವ ಕೆಮಿಕಲ್ ಕೂದಲನ್ನು ದುರ್ಬಲಗೊಳಿಸುತ್ತದೆ. ಇದರಿಂದ ಕೂದಲು ಉದುರಲು ಕಾರಣವಾಗುತ್ತದೆ.

ಸ್ನಾನದ ನಂತರ ಒದ್ದೆಯಾಗಿರುವ ಕೂದಲನ್ನು ಟವೆಲ್ ನಿಂದ ಗಟ್ಟಿಯಾಗಿ ಉಜ್ಜಬಾರದು. ಗಟ್ಟಿಯಾಗಿ ಉಜ್ಜುವುದರಿಂದ ಕೂದಲು ಉದುರುವ ಸಮಸ್ಯೆ ಎದುರಾಗಬಹುದು. ಬದಲಿಗೆ ಮೊದಲು ಗಾಳಿಗೆ ಕೂದಲು ಒಣಗಲು ಬಿಡಿ. ನಂತರ ಕೈಯಿಂದ ಮೆಲ್ಲನೆ ಸಿಕ್ಕನ್ನು ಬಿಡಿಸಿ.

ಇದರ ಜೊತೆಗೆ ಕೂದಲು ಒದ್ದೆಯಾಗಿದ್ದಾಗ ಕೂದಲನ್ನು ಕಟ್ಟಬಾರದು. ಒದ್ದೆ ಕೂದಲನ್ನು ಜಡೆ ಹಾಕುವುದರಿಂದ ಕೂದಲು ಉದುರುವ ಸಮಸ್ಯೆ ಜಾಸ್ತಿಯಾಗುತ್ತದೆ. ಇದರ ಜೊತೆಗೆ ಹೀಗೆ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಇನ್ನು ಎಲ್ಲದಕ್ಕಿಂತಲೂ ಮುಖ್ಯವಾಗಿ ಕೂದಲನ್ನು ಆಗಾಗ ಕತ್ತರಿಸುತ್ತಿರಬೇಕು. ಇಲ್ಲವಾದರೆ ಕೂದಲು ಕವಲೊಡೆಯಲು ಶುರುವಾಗುತ್ತದೆ. ಅದೇ ಕಾರಣದಿಂದ ಆಗಾಗ ಕೂದಲು ಕತ್ತರಿಸಿದರೆ ಒಳ್ಳೆಯದು.

ಕಡಿಮೆ ಸಮಯದಲ್ಲಿ ಮಾಡಿ ಸವಿಯಿರಿ ರುಚಿ ರುಚಿ ಖರ್ಜೂರ ಲಡ್ಡು

#balkaninews #hairprotection #hairproblems

Tags