ಆರೋಗ್ಯಜೀವನ ಶೈಲಿ

ಗೊರಕೆ ಹೊಡೆಯುತ್ತಿರಾ..? ನಿಯಂತ್ರಣಕ್ಕೆ ಇಲ್ಲಿವೆ ಮನೆ ಮದ್ದುಗಳು

ನೀವು ಸಿಕ್ಕಾಪಟ್ಟೆ ಗೊರಕೆ ಹೊಡೆಯುತ್ತಿರಾ.. ನಿಮ್ಮಿಂದ ಬಹಳ ತೊಂದರೆಯಾಗುತ್ತಿದೆ.. ಹೀಗೆ ಕೆಲವರನ್ನು ನಾವೆಲ್ಲರೂ ಸಾಮಾನ್ಯವಾಗಿ ಅಣಕಿಸಿರುತ್ತೇವೆ. ಹಾಗಂತಾ, ಗೊರಕೆ ದೊಡ್ಡ ಸಮಸ್ಯೆಯಲ್ಲ, ಅದನ್ನು ತಡೆಗಟ್ಟಲು ಅನೇಕ ಮನೆಮದ್ದುಗಳಿವೆ.

ಸಾಮಾನ್ಯವಾಗಿ 100ರಲ್ಲಿ 45 ಜನರಿಗೆ ಸಾಮಾನ್ಯವಾಗಿ ಈ ಗೊರಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗೊರಕೆ ಹೊಡೆಯುವವರು ಆರಾಮವಾಗಿ ಸುಖವಾಗಿ ನಿದ್ರೆ ಮಾಡುತ್ತಾರೆ. ಆದರೆ ಹತ್ತಿರ ಮಲಗಿದವರು ಹಿಡಿಶಾಪ ಹಾಕುತ್ತಿರುತ್ತಾರೆ.

ಅಚ್ಚರಿಯೆಂದರೆ, ಕೆಲವರು ಮಲಗಿ 5 ನಿಮಿಷದಲ್ಲೇ ಜೋರಾಗಿ ಗೊರಕೆ ಹೊಡೆಯಲಾರಂಭಿಸುತ್ತಾರೆ. ಅವರ ಗೊರಕೆ ಸದ್ದಿನಿಂದಾಗಿ ಅವರು ಮಾತ್ರ ನಿದ್ದೆ ಮಾಡುತ್ತಾರೆ, ಅವರ ಪಕ್ಕ ಮಲಗಿದವರು ನಿದ್ದೆಯಿಲ್ಲದೆ ಒದ್ದಾಡಬೇಕಾಗುತ್ತದೆ.

ಸಾಮಾನ್ಯವಾಗಿ ಗೊರಕೆ ಸಮಸ್ಯೆ ವಯಸ್ಸಾದವರಲ್ಲಿ, ದಪ್ಪಗೆ ಇರುವವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇನ್ನು ಅಧಿಕ ರಕ್ತದೊತ್ತಡ ಇರುವವರು ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಾರೆ.

ಮನೆಮದ್ದುಗಳು

ಏಲಕ್ಕಿಯ ಪರಿಮಳವನ್ನು ಹೀರುವುದರಿಂದ ಮೂಗಿನ ಹೊಳ್ಳೆ ಕಟ್ಟಿಕೊಂಡಿರುವುದು, ಉಸಿರಾಟವನ್ನು ಸರಾಗಗೊಳಿಸುವುದು ಸಾಧ್ಯವಾಗುತ್ತದೆ. ಇದಕ್ಕಾಗಿ ಅರ್ಧ ಚಿಕ್ಕ ಚಮಚ ಏಲಕ್ಕಿಯನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ತಣಿಸಿ ರಾತ್ರಿ ಮಲಗುವ ಮುನ್ನ ಗಟಗಟನೇ ಕುಡಿದು ಮಲಗಿ.

ಮಲಗುವ ಮುನ್ನ ಹಾಲು ಕುಡಿಯಬಾರದು. ಏಕೆಂದರೆ ಹಾಲಿನ ಉತ್ಪನ್ನಗಳು ದೇಹದಲ್ಲಿ ಕಫ ಜಾಸ್ತಿ ಉತ್ಪತ್ತಿ ಮಾಡುತ್ತದೆ, ಇದರಿಂದ ಗೊರಕೆ ಹೆಚ್ಚಾಗುವುದು.

ಮದ್ಯಪಾನಿಗಳಲ್ಲಿ ಗೊರಕೆ ಸಮಸ್ಯೆ ಸರ್ವೇ ಸಾಮಾನ್ಯ. ಮದ್ಯ ಗಂಟಲಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದರಿಂದಾಗಿ ಗೊರಕೆ ಶಬ್ದ ಹೆಚ್ಚಾಗುವುದು. ಅಂದ ಹಾಗೆ ಉಸಿರಾಟವನ್ನು ನಿಯಂತ್ರಿಸುವ ಯೋಗಾಸನ ಪ್ರಾಣಾಯಾಮ ಮಾಡಿದರೆ ಕಡಿಮೆಯಾಗುತ್ತದೆ.

ದಿನನಿತ್ಯ ಹಸಿಬೆಳ್ಳುಳ್ಳಿಗಳನ್ನು ರಾತ್ರಿಯ ಊಟದ ಅನ್ನದೊಡನೆ ಕಲಸಿ ಸೇವಿಸಿದರೆ, ಕಾಲಕ್ರಮೇಣ ಗೊರಕೆಯ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ನಿಂಬೆ ನೀರು ದೇಹದ ತೂಕ ಕಡಿಮೆ ಮಾಡುತ್ತಾ?

#Snoring #Helath #HealthTips  #Lifestyle

Tags