ಆರೋಗ್ಯಜೀವನ ಶೈಲಿ

ನಿಮ್ಮ ಟೂತ್‍ ಬ್ರಶ್ ಕೀಟಾಣುಗಳ ಗೆಸ್ಟ್ ಹೌಸ್!!

ಡೇಂಜರ್...ಭಾರೀ ಡೇಂಜರ್!!!

ನೀವು ಉಪಯೋಗಿಸುವ ಟೂತ್‍ಪೇಸ್ಟ್ ನಲ್ಲಿ ಉಪ್ಪು ಇದೆಯೆ? ಹೀಗೆ ಕೇಳುವ ಕಾಲ ಮುಗಿಯಿತು. ಈಗೇನಿದ್ದರೂ ನೀವು ಉಪಯೋಗಿಸುವ ಟೂತ್‍ಬ್ರಷ್‍ನಲ್ಲಿ ಎಷ್ಟು ಕೀಟಾಣುಗಳಿವೆ? ಎಂದು ಕೇಳೋ ಟೈಮ್ ಬಂದಿದೆ. ಹೌದು. ‘ಬಾಯಿ ಕಾಯಿಲೆಗಳ ಹೆಬ್ಬಾಗಿಲು’ ಎನ್ನುತ್ತಾರೆ. ಇದಕ್ಕೆ ಪೂರಕವಾಗಿ ಬಾಯಿಯನ್ನು ಸ್ವಚ್ಛಗೊಳಿಸುವ ಟೂತ್‍ಬ್ರಷ್ ಕಾಯಿಲೆಗಳನ್ನು ತಂದೊಡ್ಡುತ್ತಿದೆ. ಹಾಗೆಂದು ಇದು ಟೂತ್‍ಬ್ರಷ್ ತಪ್ಪಲ್ಲ. ಜನರ ಸ್ವಯಂಕೃತ ಅಪರಾಧ. ಅಂದರೆ ಟೂತ್‍ಬ್ರಷ್‍ಗಳನ್ನು ಹೇಗೆ ಸಂರಕ್ಷಿಸಿಡಬೇಕೆಂಬ ಬಗ್ಗೆ ತಿಳಿವಳಿಕೆಯ ಕೊರತೆ ಇರುವುದೇ ಇಷ್ಟಕ್ಕೆಲ್ಲಾ ಕಾರಣ.ಬಣ್ಣ ಬಣ್ಣದ, ದುಬಾರಿ ಬೆಲೆಯ, ವಿವಿಧ ವಿನ್ಯಾಸಗಳ ಬ್ರಷ್‍ಗಳನ್ನು ಖರೀದಿಸುವ ನಾವುಗಳು ಅದನ್ನು ಸಂರಕ್ಷಿಸುವ ಗೋಜಿಗೆ ಹೋಗುವುದೇ ಇಲ್ಲ. ಸಿಂಕ್ ಹತ್ತಿರವಿರುವ ಗಾಜಿನ, ಪ್ಲಾಸ್ಟಿಕ್ ಸ್ಟ್ಯಾಂಡ್‍ಗಳಲ್ಲಿ ಬ್ರಷ್‍ಗಳನ್ನು ಹಾಕಿಟ್ಟರೆ ಮುಗಿಯಿತು. ಮತ್ತದನ್ನ ನೋಡುವುದು ಬೆಳಗ್ಗೆ ಬ್ರಷ್ ಮಾಡುವಾಗಲೇ. ಹಲ್ಲುಗಳನ್ನು ಸ್ವಚ್ಛವಾಗಿರಿಸಿ, ಬಾಯಿ ಕೆಟ್ಟ ವಾಸನೆ ಬಾರದಂತೆ ನೋಡಿಕೊಳ್ಳುವ ಬ್ರಷ್‍ಗಳನ್ನು ಜೋಪಾನವಾಗಿಡದಿದ್ದರೆ ಎಂತೆಂಥ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಗೊತ್ತಾ?

ಬಹುತೇಕ ಅಧ್ಯಯನಗಳ ಪ್ರಕಾರ ಟೂತ್‍ ಬ್ರಷ್‍ಗಳ ಸ್ವಚ್ಛತೆ ಕಡೆ ಗಮನಹರಿಸದಿದ್ದರೆ, ನಾವು ಕೀಟಾಣುಗಳಿಗೆ ಆಹಾರವಾಗುವ ಸಾಧ್ಯತೆ ಹೆಚ್ಚಿದೆ! ಹಾಗಾದರೆ ಬ್ರಷ್‍ಗಳ ಸುರಕ್ಷಿತ ತಾಣವಾದರೂ ಯಾವುದು? ಸ್ವಚ್ಛವಾಗಿಡುವುದು ಹೇಗೆ? ಇತ್ಯಾದಿ ಮಾಹಿತಿಯನ್ನು ಇಲ್ಲಿ ವಿವರವಾಗಿ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಬ್ರಷ್‍ಗಳು ಕೀಟಗಳ ಸಖ್ಯ ಬೆಳೆಸದಂತೆ ಎಚ್ಚರವಹಿಸುವ ಜವಬ್ದಾರಿ ನಿಮ್ಮದು.

Related image

ಬ್ಯಾಕ್ಟೀರಿಯಾಗಳು ಎಷ್ಟಿರುತ್ತವೆ?
‘ನ್ಯೂಯಾರ್ಕ್ ಸ್ಟೇಟ್ ಡೆಂಟಲ್ ಜರ್ನಲ್’ ಸಂಶೋಧಕರ ಪ್ರಕಾರ ಒಂದು ಟೂತ್‍ಬ್ರಷ್‍ನಲ್ಲಿ ಕನಿಷ್ಠ ಏನಿಲ್ಲವೆಂದರೂ 10 ಮಿಲಿಯನ್ ಕೀಟಾಣುಗಳು ಸಿಗುತ್ತವೆ. ಇವು ಸೂಕ್ಷ್ಮಾಣುಜೀವಿಗಳಾದ್ದರಿಂದ ಕಣ್ಣಿಗೆ ಗೋಚರಿಸುವುದಿಲ್ಲವಷ್ಟೇ. ಶೇ.70ರಷ್ಟು ಟೂತ್‍ಬ್ರಷ್‍ನಲ್ಲಿ ಹೀಗೆ ಕೀಟಾಣುಗಳು ಅಡಗಿ ಕುಳಿತಿದ್ದು, ಕಲುಷಿತಗೊಂಡಿರುತ್ತವೆ. ಫ್ಲೂ, ವೈರಸ್, ಸ್ಟ್ಯಾಫ್ ಬ್ಯಾಕ್ಟೀರಿಯಾ, ಇ.ಕೊಲಿ, ಈಸ್ಟ್ ಫಂಗಸ್ ಹಾಗೂ ಸ್ಟ್ರೆಪ್ಟಕಾಕಸ್ ಸೋಂಕಿಗೊಳಗಾದ ವೈರಸ್‍ಗಳಿಗೆ ಟೂತ್‍ಬ್ರಷ್ ಒಂದಲ್ಲಾ ಒಂದು ವಿಧದಲ್ಲಿ ಅಡಗುದಾಣವಾಗಿದೆ. ಶುಚಿತ್ವವಿಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣವೆನ್ನುತ್ತಾರೆ ವೈದ್ಯರು. ಸಾಮಾನ್ಯವಾಗಿ ಎಲ್ಲರೂ ಟೂತ್‍ಬ್ರಷ್‍ಗಳನ್ನಿಡುವುದು ಬಾತ್‍ರೂಮ್‍ನಲ್ಲಿ ಅಲ್ಲವೇ? ಡೇಂಜರ್ ಇರುವುದೇ ಅಲ್ಲಿ! ಈ ಬಾತ್‍ರೂಮ್ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪರ್‍ಫೆಕ್ಟ್ ಪ್ಲೇಸ್. ಇಲ್ಲಿ ಆದ್ರ್ರತೆ ಮತ್ತು ಬಿಸಿ ನೀರಿನ ಹಬೆ ಸಂಪೂರ್ಣವಾಗಿ ಪಸರಿಸುವುದರಿಂದ ಕೀಟಾಣುಗಳು ಬಹುಬೇಗ ಅಂಟಿಕೊಳ್ಳುತ್ತವೆ. ಅಟ್ಯಾಚ್ ಬಾತ್‍ರೂಮ್ ಇದ್ದರಂತೂ ಟೂತ್‍ಬ್ರಷ್‍ಗಳು ಕೀಟಾಣುಮಯವಾಗಿಬಿಡುತ್ತವೆ. ಆದ್ದರಿಂದ ಆದಷ್ಟು ಬೇಗ ಈ ಜರ್ಮ್ ಟೂತ್‍ಬ್ರಷ್‍ಗಳ ಬಳಕೆಯಿಂದ ಹೊರಬನ್ನಿ…

Image result for toothbrush

ಟೂತ್‍ಬ್ರಷ್ ಫ್ರೆಶ್ ಇರಬೇಕೆಂದರೆ…
• ಟಾಯ್ಲೆಟ್‍ಗೂ, ಟೂತ್‍ಬ್ರಷ್ ಇಡುವ ಸ್ಥಳಕ್ಕೂ 9 ಅಡಿ ಅಂತರವಿರಲಿ. ಟಾಯ್ಲೆಟ್ ಫ್ಲಶ್ ಮಾಡುವ ಹತ್ತಿರದಲ್ಲಿ ಬ್ರಷ್ ಮಾಡಬೇಡಿ. ಕೆಲವು ಮನೆಗಳಲ್ಲಿ ಟಾಯ್ಲೆಟ್ ಬ್ರಷ್ ಮಾಡುವ ಸಿಂಕ್ ಹತ್ತಿರವೇ ಇರುತ್ತದೆ. ಅಂತಹ ಜಾಗದಲ್ಲಿ ಪ್ರತಿ ಬಾರಿ ಫ್ಲಶ್ ಮಾಡಿದಾಗಲೂ, ನೀರಿನ ತುಂತುರು ಹನಿ ಬಂದು ಟೂತ್ ಬ್ರಷ್ ಮೇಲೆ ಬೀಳುವ ಸಂಭವ ಇರುತ್ತದೆ. ನೆನಪಿರಲಿ ಫ್ಲಶ್ ನೀರು ಬ್ಯಾಕ್ಟೀರಿಯಾಗಳ ಆಗರ!
• ಟೂತ್‍ಬ್ರಷ್‍ಗಳನ್ನು ಮುಚ್ಚಲು ಪ್ಲಾಸ್ಟಿಕ್ ಕ್ಯಾಪ್‍ಗಳನ್ನ ಬಳಸಲೇಬೇಡಿ. ಕ್ಯಾಪ್‍ಗಳ ಒಳಭಾಗದಲ್ಲಿ ಪೆಟ್ರಿ ಡಿಶ್ ಮತ್ತು ವೈರಸ್‍ಗಳ ಬೆಳವಣಿಗೆ ಹೆಚ್ಚಿರುವುದರಿಂದ ಇದು ಸಖತ್ ಡೇಂಜರ್. ಅಟ್ಲಾಂಟದ ‘ಸೆಂಟರ್ಸ್ ಫಾರ್ ಡೀಸಿಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್’ ಪ್ಲಾಸ್ಟಿಕ್ ಬಳಕೆಯನ್ನು ವಿರೋಧಿಸುತ್ತಲೇ ಬಂದಿದ್ದು, ಪ್ಲಾಸ್ಟಿಕ್ ವಸ್ತುಗಳಿಂದ ದೂರವಿರಲು ಸೂಚಿಸಿದೆ. ಹಾಗೆಯೇ ಮೊಯಿಶ್ಚರೈಸರ್‍ನಿಂದ ತಪ್ಪಿಸಿಕೊಳ್ಳಲು ‘ಫ್ಯಾಬ್ರಿಕ್ ಟೂತ್‍ಬ್ರಷ್ ಶೀಲ್ಡ್’ ಬಳಸಿ ಎಂದು ಸೂಚಿಸಿದೆ.
• ಮೂರು ತಿಂಗಳಿಗೆ ಒಮ್ಮೆ ಟೂತ್‍ಬ್ರಷ್‍ಗಳನ್ನು ಬದಲಿಸಿ. ರೋಗ ಮರುಕಳಿಸುವ ಸಾಧ್ಯತೆ ಇರುವುದರಿಂದ ಕಫ ಅಥವಾ ಜ್ವರ ಬಂದ ಸಮಯದಲ್ಲಿ ಉಪಯೋಗಿಸಿದ ಬ್ರಷ್‍ಗಳನ್ನು ಗುಣವಾದ ಮೇಲೆ ಬಳಸಬೇಡಿ. ಹೊಸ ಬ್ರಷ್ ತೆಗೆದುಕೊಳ್ಳಿ.
• ಪ್ರತಿ ಸಾರಿ ಬ್ರಷ್ ಮಾಡುವ ಮುನ್ನ, ಆ ನಂತರ ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆಯಿರಿ. ಕೈ ತೊಳೆಯಲು ಲಿಕ್ವಿಡ್ ಸೋಪನ್ನು ಉಪಯೋಗಿಸಿದರೆ ಒಳ್ಳೆಯದು. ಕೈಗಳನ್ನು ತೊಳೆದ ನಂತರ ಒಣ ಬಟ್ಟೆಯಲ್ಲಿಯೇ ಒರೆಸಿ. ಈ ವಿಧಾನವನ್ನು ಮಕ್ಕಳಿಗೂ ಹೇಳಿಕೊಡಿ.
• ಸೋಂಕು ಹರಡುವ ಲಕ್ಷಣಗಳು ನಿಚ್ಚಳವಾಗಿ ಕಾಣುವುದರಿಂದ, ಎಷ್ಟೇ ಆತ್ಮೀಯರಾದರೂ ಒಬ್ಬರು ಬಳಸಿದ ಟೂತ್‍ಬ್ರಷ್‍ಗಳನ್ನು ಉಪಯೋಗಿಸಲೇಬೇಡಿ. ಅದೇ ರೀತಿ ನಿಮ್ಮ ಬ್ರಷ್‍ಗಳನ್ನು ಬೇರೆಯವರು ಬಳಸದಂತೆ ತಿಳಿಹೇಳಿ. ಸೂಕ್ಷ್ಮ ಜೀವಿಗಳು ವರ್ಗಾವಣೆಯಾಗುವುದರಿಂದ ಬ್ರಷ್‍ಗಳನ್ನು ಜೋಡಿಸಿಡುವಾಗ ಒಂದಕ್ಕೊಂದು ತಾಕದಂತೆ ನೋಡಿಕೊಳ್ಳಿ.

Image result for toothbrush

ಬ್ರಷ್ ಕ್ಲೀನ್ ಮಾಡುವುದು ಹೇಗೆ?
ದಿನ ನಿತ್ಯ ಬ್ರಷ್ ಮಾಡಿದ ನಂತರ ಮತ್ತು ಮೊದಲು ಟೂತ್‍ಬ್ರಷ್ ಅನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಕೀಟಾಣುಗಳು ನಾಶವಾಗುತ್ತವೆ. ವಾರಕ್ಕೆ ಒಂದು ಸಾರಿಯಾದರೂ ಗ್ಲಾಸ್‍ನಲ್ಲಿ ಶೇ.3ರಷ್ಟು ಹೈಡ್ರೋಜನ್ ಪೆರಾಕ್ಸೈಡ್‍ಗೆ ಶೇ.97ರಷ್ಟು ನೀರು ಹಾಕಿ ಕಲಕಿ ನಂತರ ಟೂತ್‍ಬ್ರಷ್‍ನ ತಲೆಯ ಭಾಗವನ್ನು ಮಾತ್ರ 10 ನಿಮಿಷಗಳ ಕಾಲ ನೆನೆಸಿ. ನಂತರ ಗಾಳಿಯಲ್ಲಿ ಒಣಗಿಸಿ ಟೂತ್‍ಬ್ರಷ್ ಹೋಲ್ಡರ್‍ನಲ್ಲಿಡಿ. ಹೈಡ್ರೋಜನ್ ಪೆರಾಕ್ಸೈಡ್‍ಗೆ ಹೆಚ್ಚು ಖರ್ಚು ಮಾಡಬೇಕಿಲ್ಲ. ಯಾವುದೇ ಫಾರ್ಮಸಿ ಶಾಪ್‍ಗೆ ಹೋದರೂ ಲಭ್ಯ. ಪ್ರತಿ ಸಾರಿ ಬ್ರಷ್ ಮಾಡುವ ಮುನ್ನ ಬ್ರಷ್ ಅನ್ನು ಹರಿಯುವ ನಲ್ಲಿ ನೀರಿನಲ್ಲಿ ತೊಳೆಯಿರಿ.

https://balkaninews.com/lifestyle/skin-care-tips/
#balkaninews #toothbrush #health #healthtips #healthawareness
Tags