ಜೀವನ ಶೈಲಿಫ್ಯಾಷನ್ಸಂಬಂಧಗಳು

‘ಸೊಸೆ ಕುಟುಂಬ ಬೆಸೆಯುವ ಶಕ್ತಿ…!”

ಗಂಡನ ಅಥವಾ ತೌರಿನ ಸಂಬಂಧ ಎಂಬ ಬೇಧ ತೋರದೆ ಎಲ್ಲರನ್ನು ಆದರದಿಂದ ನೋಡುವ ಸೊಸೆ ಸಮಾಜಕ್ಕೆ ಆದರ್ಶ.

ಗಂಡನ ಅಥವಾ ತೌರಿನ ಸಂಬಂಧ ಎಂಬ ಬೇಧ ತೋರದೆ ಎಲ್ಲರನ್ನು ಆದರದಿಂದ ನೋಡುವ ಸೊಸೆ ಸಮಾಜಕ್ಕೆ ಆದರ್ಶ. ಆಕೆ ಎಂದೆಂದಿಗೂ ಗೌರವಕ್ಕೆ ಅರ್ಹಳು, ಆಕೆ ಕತ್ತೆಯಂತೆ ದುಡಿದು ಎಲ್ಲರನ್ನು ಸಂಭಾಳಿಸಬೇಕಿಲ್ಲಾ , ತನ್ನ ಮಿತಿಯಲ್ಲಿ ಕೆಲಸ ಮಾಡುತ್ತಲೆ ಎಲ್ಲರನ್ನು ಗೌರವಿಸಿ ವಿಶೇಷವಾಗಿ ಗಂಡನ ಸಂಬಂಧಗಳನ್ನು ಗೌರವಿಸುವುದು ಅವಳ ಮೊದಲ ಕರ್ತವ್ಯವೇ ಆಗಿದೆ.ಬೆಂಗಳೂರು, ಸೆ.03: ಸೊಸೆ ಕುಟುಂಬದ ಸಂಬಂಧಗಳನ್ನು ಉಳಿಸುವ ಸೇತುವೆ ಇದ್ದಂತೆ. ಅವಿಭಕ್ತ ಕುಟುಂಬವು ಮುನ್ನಡೆಯಲು ಆಕೆಯೇ ಪ್ರಮುಖ ಕೊಂಡಿ. ಮದುವೆಯಾದ ಹೊಸ ದಂಪತಿಗಳು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತೆ , ಅದರಲ್ಲಿ ಮದುವೆ ಹೆಣ್ಣು ಆ ಮನೆಗೆ ಹೊಂದಿಕೊಳ್ಳಬೇಕು ಮತ್ತು ಗಂಡನ ಎಲ್ಲ ಸಂಬಂಧಿಗಳನ್ನು ನಿಭಾಯಿಸಬೇಕು. ಹಾಗೇ ಮದುವೆಯಾದ ಗಂಡಿಗೆ ತನ್ನ ಹೆಂಡತಿ ಮತ್ತು ತನ್ನ  ಅಪ್ಪ ಅಮ್ಮ‌,ಅಣ್ಣ‌ ತಮ್ಮ , ಅಕ್ಕ‌ ತಂಗಿ ಅವರ ಜೊತೆ ಅವಳು ಹೊಂದಿಕೊಳ್ಳುವ ಹಾಗೇ ನೋಡಿಕೊಳ್ಳಬೇಕು.

ಒಂದು ವೇಳೆ ಅವನಿಗೆ  ಹೊಂದಿಕೊಳ್ಳುವುದಿಲ್ಲ ಎಂದಾದರೆ ಅವನಿಗೆ ಸಂಕಟ ಶುರು ಅಂತಾನೆ ಅರ್ಥ. ಇದನ್ನು ಮಿಕ್ಕಿ ಆಕೆ ಆತ  ಹೇಳಿದ ಮಾತುಗಳಲ್ಲಿ ಮೌಲ್ಯ ಇದ್ದರೆ ಒಪ್ಪಿ ಗಂಡನ ಸಂಬಂಧಗಳಿಗೆ ಗೌರವ ಕೊಟ್ಟು ಬಾಳು ನಡೆಸಿದರೆ  ಕೌಟುಂಬಿಕ ವ್ಯವಸ್ಥೆ ತನ್ನ ಮಹತ್ವ ಉಳಿಸಿಕೊಳ್ಳುತ್ತದೆ. ಇಲ್ಲವಾದಲ್ಲಿ ಸೊಸೆ ಗೌರವ ಕಳೆದುಕೊಳ್ಳುತ್ತಾಳೆ.ಇದು ಕೆಲವರನ್ನು ಬಿಟ್ಟು ಎಲ್ಲರಿಗೂ ಅನ್ವಯಿಸುತ್ತದೆ.

ಸೊಸೆ ಹೊಂದಿಕೊಳ್ಳುವ ವಿಚಾರದಲ್ಲಿ ಗಂಡಿನ ಮನೆಯವರ ಪಾತ್ರ ಬಹಳ ಮುಖ್ಯ

ಸೊಸೆ ಹೊಂದಿಕೊಳ್ಳುವ ವಿಚಾರದಲ್ಲಿ ಗಂಡಿನ ಮನೆಯವರ ಪಾತ್ರ ಬಹಳ ಮುಖ್ಯ ಆಗಿರುತ್ತೆ. ಆಕೆಗೆ ಹೊಂದುಕೊಳ್ಳಲು ಸಮಯ ಕೊಡಬೇಕಾಗುತ್ತೆ ,ಸಮಯ ಕೊಟ್ಟು ಹೊಂದಿಕೊಳ್ಳಲಿಲ್ಲ ಅಂದರೆ ಅದು ಮದುವೆಯಾದ ಗಂಡಿಗೆ ಹಿಂಸೆ…ನರಳಾಟ…ಸಂಕಟ… ಆಗುತ್ತದೆ. ಒಂದು ವರದಿಯ  ಪ್ರಕಾರ ಶೇಕಡಾ 80% ರಷ್ಟು ಸೊಸೆಯಾಗಿ ಬರುವ ಹೆಣ್ಣು ಮಕ್ಕಳು ಬರುತ್ತಲೇ ಪ್ರತ್ಯೇಕ ಕುಟುಂಬವನ್ನು ಇಷ್ಟ ಪಡುತ್ತಿದ್ದು , ಗಂಡನ ಮನೆಯವರ ಜೊತೆ ಜೀವನ ನಡೆಸಲು ಮನಸ್ಸು ಮಾಡುವುದಿಲ್ಲ ಇದು ಅವಿಭಕ್ತ ಕುಟುಂಬ ವ್ಯವಸ್ಥೆಗೆ ದೊಡ್ಡ ಪೆಟ್ಟು ಬಿಳುತ್ತಿದೆ.ನತದೃಷ್ಟ ಪೋಷಕರ ಗೋಳು

ಈ ಬಿರುಕುಗಳಲ್ಲಿ  ಓದಿರದ ಹೆಂಗಸಿಗಿಂತ , ಓದಿರುವ ಹೆಂಗಸರ ಪಾತ್ರವೇ ದೊಡ್ಡದಿದೆ. ಮಗ ಸೊಸೆ ಚೆನ್ನಾಗಿರಲಿ ಅನ್ನುವ ಪೋಷಕರ ಸಂಖ್ಯೆ ಜಾಸ್ತಿ ಇದ್ದು ತಮ್ಮ ಜೀವನದ ಕೊನೆ ದಿನಗಳನ್ನು ಬಹಳ  ಕಷ್ಟಪಟ್ಟು ದೂಡುತ್ತಿದ್ದಾರೆ. ಅಷ್ಟೇ ಅಲ್ಲ ಅನೇಕ ಹಳ್ಳಿಗಳಲ್ಲಿ ತಮ್ಮ ಒಬ್ಬನೇ ಮಗನನ್ನು  ಓದಿಸಿ ಕೆಲಸ ಕೊಡಿಸಿ ನಗರ ಅಥವಾ ಪಟ್ಟಣದಲ್ಲಿ ಚೆನ್ನಾಗಿ ಅಂತ ಆಶಿಸಿದರೆ ಆರೋಗ್ಯ ಕೆಟ್ಟಾಗ ಬಂದು ನೋಡುವುದು ಬೇಡವೆ ಇಂತಹ ಸಮಯದಲ್ಲಿ ಬಾರದಿದ್ದರೆ ಅಂತಹ ಮಕ್ಕಳು ಇದ್ದರೇಷ್ಟು ಇಲ್ಲದಿದ್ದರೇಷ್ಟು ಅನ್ನುವ ಹಾಗಿದೇ ಅನೇಕ ನತದೃಷ್ಟ ಪೋಷಕರದು.ಹೆಣ್ಣು ಶಕ್ತಿ ಸ್ವರೂಪಣಿ

ಒಂದು ಅವಿಭಕ್ತ ಕುಟುಂಬವನ್ನು ಹೊಡೆದು ಹಾಕುವ ಮಹಾ ಅಪರಾಧದ ಸಿಂಹ ಪಾಲು ಸೊಸೆಯದ್ದೇ ಆಗಿರುತ್ತದೆ ಎಂಬ ವರದಿಗಳು ಹೇರಳವಾಗಿವೆ. ಬೆರಳಿಕೆ ಅನ್ನುವಷ್ಟು ಮಾತ್ರ ಅತ್ತೆ ಸೊಸೆಯರು ಚೆನ್ನಾಗಿದ್ದರೆ , ಮಿಕ್ಕೆಲ್ಲ ಅತ್ತೆ- ಸೊಸೆಯರ ಸಂಬಂಧಗಳು ಹದಗೆಟ್ಟಿವೆ. ಒಂದು ವೇಳೆ ಸೊಸೆಯಾಗಿ ಬರುವ ಹೆಣ್ಣು ಮಗಳು ಗಂಡನ ಮನೆಯವರ ಜೊತೆಯಲ್ಲಿ ಇಲ್ಲದ್ದಿದ್ದರು ಪರವಾಗಿಲ್ಲಾ ಅವರೊಡನೆ ಮಾತು ಆಡದೆ ಇರುವವರ ಸಂಖ್ಯೆ ಹೆಚ್ಚುತ್ತಿದ್ದು ಇದು ಭಾರತೀಯ ಕೌಟುಂಬಿಕ ವ್ಯವಸ್ಥೆಯನ್ನೇ ಅಣಕಿಸುವ ಮಟ್ಟಿಗೆ ಹೋಗಿದೆ. ಹೆಣ್ಣು ಶಕ್ತಿ ಸ್ವರೂಪಣಿ ಅಂತ ಭಾವಿಸುವ ಭಾರತೀಯರಲ್ಲಿ ಸೊಸೆಯಾಗಿ ಬರುವ ಹೆಣ್ಣು ಶಕ್ತಿಯಾಗುವ ಬದಲು ಪೀಡೆಯಾಗಿ ಬದಲಾಗುತ್ತಿದ್ದಾಳೆ. ಸೊಸೆ ಹೇಳುವ ಪ್ರಕಾರ ನಾನು ಗಂಡನ ಮನೆಯವ ಚಾಕರಿ ಮಾಡುವುದಕ್ಕೆ ಬಂದಿಲ್ಲಾ ಅಂತ ಹೇಳುವುದರ ಜೊತೆಗೆ ಗಂಡನ ಸಂಬಂಧಗಳನ್ನು ನಿರ್ಲಕ್ಷ್ಯ ಮಾಡಿ ತೌರಿನ ಸಂಬಂಧಗಳನ್ನು ಇಷ್ಟ ಪಟ್ಟು ಕಂದಕಗಳನ್ನು ಸೃಷ್ಟಿಸುವಲ್ಲಿ ಈ ದಿನ ಮಾನಗಳಲ್ಲಿ ಸೊಸೆಯಂದಿರ ಪಾತ್ರ ದೊಡ್ಡದಿದೆ.ಗಂಡ ಹೆಂಡತಿಯನ್ನು ಪ್ರೀತಿಸುವ ಹಾಗೂ ನೋಡಿಕೊಳ್ಳುವ ಬಗೆ ತುಂಬಾ ಮುಖ್ಯ

ಗಂಡನ ಅಥವಾ ತೌರಿನ ಸಂಬಂಧ ಎಂಬ ಬೇಧ ತೋರದೆ ಎಲ್ಲರನ್ನು ಆದರದಿಂದ ನೋಡುವ ಸೊಸೆ ಸಮಾಜಕ್ಕೆ ಆದರ್ಶ. ಆಕೆ ಎಂದೆಂದಿಗೂ ಗೌರವಕ್ಕೆ ಅರ್ಹಳು, ಆಕೆ ಕತ್ತೆಯಂತೆ ದುಡಿದು ಎಲ್ಲರನ್ನು ಸಂಭಾಳಿಸಬೇಕಿಲ್ಲಾ , ತನ್ನ ಮಿತಿಯಲ್ಲಿ ಕೆಲಸ ಮಾಡುತ್ತಲೆ ಎಲ್ಲರನ್ನು ಗೌರವಿಸಿ ವಿಶೇಷವಾಗಿ ಗಂಡನ ಸಂಬಂಧಗಳನ್ನು ಗೌರವಿಸುವುದು ಅವಳ ಮೊದಲ ಕರ್ತವ್ಯವೇ ಆಗಿದೆ. ಇದಾದರೆ ಅನೇಕ ಕುಟುಂಬಗಳು ನೋವು ಮತ್ತು ಸಂಕಟಗಳಿಂದ ಹೊರಬರುತ್ತವೆ ಸಂಬಂಧಗಳು ಉಳಿಯುತ್ತವೆ. ವಿಶೇಷವಾಗಿ  ಇಲ್ಲಿ ಗಂಡ ಹೆಂಡತಿಯನ್ನು ಪ್ರೀತಿಸುವ ಹಾಗೂ ನೋಡಿಕೊಳ್ಳುವ ಬಗೆಯು ತುಂಬಾನೇ ಮುಖ್ಯ ಆಗಿರುತ್ತೆ.  ಸಮಯ, ಸನ್ನಿವೇಶ, ಸಂದರ್ಭಗಳನ್ನು ಸೇರಿದಂತೆ ಅನೇಕ ಸಂಕೀರ್ಣ ಪರಿಸ್ಥಿತಿಗಳು ಎಲ್ಲವನ್ನು ನೋಡಿ ಈ ಕಾಲಗಟ್ಟದ ಸೊಸೆಯಂದಿರು ವಿಶಾಲ ಮನಸ್ಸನೊಂದಿಗೆ ಚಿಂತಿಸಿ ಹೆಣ್ಣಿಗಿರುವ ಗೌರವ ಮತ್ತು ಮಹತ್ವವನ್ನು ಸಾರಿ ತಾನು ಶಕ್ತಿ ಸ್ವರೂಪಿಣಿ ಅನ್ನುವುದನ್ನು ಪ್ರಕಟಿಸಿ ರಕ್ತ ಸಂಬಂಧದ ಕೊಂಡಿಗಳನ್ನು ಗಟ್ಟಿಗೊಳಿಸಲಿ ಅನ್ನುವುದು ಎಲ್ಲರ ಆಶಯ.

ಸೂನಗಹಳ್ಳಿ ರಾಜು

Tags