ಜೀವನ ಶೈಲಿಫ್ಯಾಷನ್ಸೌಂದರ್ಯ

ಮುಖದ ಸೋಂಕು ನಿವಾರಿಸುವ ತುಳಸಿ ಫೇಸ್ ಪ್ಯಾಕ್

ಮನೆಯಂಗಳದಲ್ಲಿ ಬೆಳೆಯುವ ತುಳಸಿ ಗಿಡದಲ್ಲಿ ಹಲವಾರು ರೀತಿಯ ಔಷಧಿಯ ಗುಣಗಳಿವೆ. ಮನೆಗೆ ಶೋಭೆ ತರುವ ತುಳಸಿ ಕೇವಲ ರೋಗಗಳನ್ನು ಗುಣಪಡಿಸಲು ಮಾತ್ರವಲ್ಲ ತ್ವಚೆಯ ಅಂದವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಕೂದಲಿನ ಆರೋಗ್ಯ, ಚರ್ಮದ ಆರೋಗ್ಯಕ್ಕೂ ಇದು ಉತ್ತಮ.

ನಿಮ್ಮ ಮುಖದಲ್ಲಿ ಗುಳ್ಳೆಗಳು ಅಥವಾ ಸೋಂಕುಗಳು ಆಗಿದ್ದರೆ ಅದಕ್ಕೆ ತುಳಸಿ ಎಲೆಗಳಿಂದ ತಯಾರಿಸಿದ ಫೇಸ್ ಪ್ಯಾಕ್ ತುಂಬಾ ಒಳ್ಳೆಯದು. ತಾಜಾ ತುಳಸಿ ಎಲೆಗಳಿಂದ ಪೇಸ್ಟ್ ತಯಾರಿಸಿ ಅದಕ್ಕೆ ½ ಕಪ್ ಮೊಸರು ಹಾಕಬೇಕು. ನಂತರ ತಯಾರಿಸಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಬೇಕು. ಸ್ವಲ್ಪ ಸಮಯ ಬಿಟ್ಟು ತಂಪಾದ ನೀರಿನಿಂದ ತೊಳೆದರೆ ಯಾವುದೇ ರೀತಿಯ ಸೋಂಕುಗಳಿದ್ದರೂ ವಾಸಿಯಾಗುತ್ತದೆ.

ಇನ್ನು ತುಳಸಿ ರಸಕ್ಕೆ ಒಂದು ಚಿಟಿಕೆ ಅರಿಶಿನ ಹಾಕಿ ಮುಖಕ್ಕೆ ಹಚ್ಚಿ. ಪ್ರತಿದಿನ ಹೀಗೆ ಮಾಡುತ್ತಾ ಬಂದರೆ  ಯಾವುದೇ ಕಲೆಗಳಿದ್ದರೂ ಮಾಯವಾಗುತ್ತದೆ. ಮಾತ್ರವಲ್ಲ ಇದು ಮೊಡವೆಗಳ ನಿವಾರಣೆಗೆ ಸಹಕಾರಿ. ಇದರ ಜೊತೆಗೆ ತುಳಸಿ ರಸಕ್ಕೆ ಚಿಟಿಕೆ ಅರಿಶಿನ ಹಾಕಿ ಮುಖಕ್ಕೆ ಒರೆಸುವುದರಿಂದ ಚರ್ಮದ ಆರೋಗ್ಯವನ್ನು ಹೆಚ್ಚುತ್ತದೆ. ಇದರ ಜೊತೆಗೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಇನ್ನು ಮುಖದಲ್ಲಿರುವ ರಂಧ್ರಗಳಲ್ಲಿರುವ ಧೂಳು,ಕೊಳೆಗಳನ್ನು ಹೊರಹಾಕುತ್ತದೆ.

Related image

Related image

ಸಾಯಂಕಾಲದ ಕುರುಕಲಿಗೆ ಚೀಸ್ ಮಿರ್ಚಿ ಬಜ್ಜಿ

#balkaninews #facepack #tulsifacepack

Tags