ಆರೋಗ್ಯಆಹಾರಜೀವನ ಶೈಲಿ

ತುಪ್ಪ ಸೇವನೆಯಿಂದ ಬುದ್ಧಿ ಚುರುಕಾಗುತ್ತದೆ, ಚರ್ಮದ ಕಾಂತಿ ಹೆಚ್ಚುತ್ತದೆ

ತುಪ್ಪ ಸೇವನೆಯಿಂದ ಬುದ್ಧಿ ಚುರುಕಾಗುತ್ತದೆ, ಚರ್ಮದ ಕಾಂತಿ ಹೆಚ್ಚುತ್ತದೆ

ಬಹಳಷ್ಟು ಮಂದಿ ತುಪ್ಪ ಎಂದರೆ ಮೂಗು ಮುರಿಯುತ್ತಾರೆ. ಅದರಲ್ಲಿ ಕೊಬ್ಬಿನ ಅಂಶ ಜಾಸ್ತಿ ಎಂದೋ, ಅದರ ಬಗ್ಗೆ ಅಷ್ಟಾಗಿ ತಿಳಿವಳಿಗೆ ಇಲ್ಲದೆಯೋ, ನಾನಾ ಕಾರಣಗಳಿಂದ ತುಪ್ಪವನ್ನು ದೂರ ಇಡುತ್ತಾರೆ. ಆದರೆ ತುಪ್ಪದಲ್ಲಿ ಅನೇಕ ರೀತಿಯ ಆರೋಗ್ಯ ಲಾಭಗಳಿವೆ. ತುಪ್ಪ ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಎಂಬುದನ್ನು ಈಗ ನೋಡೋಣ.

* ಹಸುವಿನ ತುಪ್ಪ ಹಲವಾರು ಔಷಧೀಯ ಗುಣಗಳ ಆಗರವಾಗಿದೆ. ಇದರ ನಿಯಮಿತ ಸೇವನೆಯಿಂದ ಬುದ್ಧಿ ಚುರುಕಾಗುತ್ತದೆ ಮತ್ತು ಚರ್ಮದ ಕಾಂತಿ ಹೆಚ್ಚುತ್ತದೆ.

* ತುಪ್ಪದ ಸೇವನೆಯಿಂದ ಎಲ್ಲಾ ಇಂದ್ರಿಯಗಳು ಚೆನ್ನಾಗಿ ಕೆಲಸ ಮಾಡುತ್ತವೆ, ಜಠರಾಗ್ನಿ ಹೆಚ್ಚುತ್ತದೆ ಮತ್ತು ಜೀರ್ಣ ಶಕ್ತಿ ಹೆಚ್ಚುತ್ತದೆ.

* ಅನ್ನಕ್ಕೆ ಒಂದು ಚಮಚ ತುಪ್ಪ ಮತ್ತು ಉಪ್ಪು ಹಾಕಿ ಸೇವಿದರೆ ಜೀರ್ಣ ಕ್ರಿಯೆ ಸರಾಗವಾಗುತ್ತದೆ ಮತ್ತು ಚೆನ್ನಾಗಿ ಹಸಿವಾಗುತ್ತದೆ.

* ಒಂದು ಚಮಚ ತುಪ್ಪಕ್ಕೆ ಐದು ಗ್ರಾಂ ಕರಿಮೆಣಸಿನ ಪುಡಿ ಹಾಕಿ ಕಲಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

* ಹತ್ತು ಕರಿಬೇವಿನ ಸೊಪ್ಪು ಹಾಗೂ ಎರಡು ಕಾಳುಮೆಣಸುಗಳನ್ನು ಎರಡು ಚಮಚ ತುಪ್ಪದಲ್ಲಿ ಹುರಿದು ಪುಡಿ ಮಾಡಿ. ಈ ಪುಡಿಯನ್ನು ಕಾಲು ಚಮಚ ಬೆಚ್ಚನೆಯ ನೀರಿಗೆ ಹಾಕಿ ಮಕ್ಕಳಿಗೆ ಪ್ರತಿದಿನ ಸ್ನಾನದ ನಂತರ ಕೊಟ್ಟರೆ ಹಸಿವು ಹೆಚ್ಚುತ್ತದೆ.

* ದಾಸವಾಳದ ಹೂವನ್ನು ತುಪ್ಪದಲ್ಲಿ ಹುರಿದು ಸೇವಿಸಿದರೆ ರಕ್ತಸ್ರಾವ ನಿಲ್ಲುತ್ತದೆ.

* ಅರ್ಧ ಚಮಚ ಮೆಂತ್ಯೆ ಕಾಳನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿ ಮಜ್ಜಿಗೆಗೆ ಹಾಕಿ ಕುಡಿದರೆ ಪಿತ್ತದಿಂದ ಉಂಟಾದ ಹೊಟ್ಟೆ ನೋವು ಕಡಿಮೆಯಾಗುತ್ತದೆ.

 

 

Tags