ಆರೋಗ್ಯಜೀವನ ಶೈಲಿ

ಮುಖದ ಅಂದ ಚಂದಕ್ಕೆ ಅರಶಿನ !

ಅರಶಿನದಲ್ಲಿ ಹಲಾವರು ಪ್ರಮುಖ ಗುಣಗಳಿವೆ. ಅರಿಶಿನದಲ್ಲಿ ಆ್ಯಂಟಿಬಯಾಟಿಕ್ ಅಂಶ ಇರುವುದರಿಂದ ಇದನ್ನು ಅಡುಗೆಗೆ ಮಾತ್ರವಲ್ಲ ಇನ್ನಿತರ ಬಳೆಕೆಗೂ ಬಳಸುತ್ತಾರೆ.

ಅರಿಶಿನವನ್ನು ಆಯುರ್ವೇದ ಚಿಕಿತ್ಸಕ ಎಂದು ಹಿಂದಿನ ಕಾಲದಲ್ಲಿ ಕರೆದಿದ್ದಾರೆ. ಅರಿಶಿನದಲ್ಲಿರುವ ಎಲ್ಲಾ ಆರೋಗ್ಯಕಾರಿ ಅಂಶಗಳು ಹಲವಾರು ರೋಗಗಳಿಗೆ ರಾಮಬಾಣವಾಗಿದೆ ಮತ್ತು ಸರಳವಾದ ಪರಿಹಾರವೂ ಆಗಿದೆ.

ಮುಖದ ಮೊಡವೆ, ಕಪ್ಪು ಕಲೆಗಳನ್ನು ಹೋಗಲಾಡಿಸಲು, ಸೂರ್ಯನ ಶಾಖದ ಹಾನಿಯಿಂದ ತಪ್ಪಿಸಲು, ವಯಸ್ಸಾಗುವಿಕೆಯನ್ನು ತಡೆಯಲು ಹೀಗೆ ಹತ್ತು ಹಲವು ಪ್ರಯೋಜನಗಳ ಸರಮಾಲೆಯನ್ನೇ ಅರಿಶಿನ ನಮಗೆ ಒದಗಿಸುತ್ತದೆ.

ಎಣ್ಣೆ ಚರ್ಮ ಹೊಂದಿರುವವರಿಗೆ ಅರಿಶಿನ ಉಪಕಾರಿ. ಅರಿಶಿನದ ಫೇಸ್ ಪ್ಯಾಕ್ ಅಂದರೆ ಅರಿಶಿನವನ್ನು ಒಂದು ಸ್ಪೂನ್ ಶ್ರೀಗಂಧದ ಪೇಸ್ಟ್‌ ಜೊತೆ ಬೆರೆಸಿ ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದ ನಿಮ್ಮ ತ್ವಚೆಯಲ್ಲಿರುವ ಜಿಡ್ಡನ್ನು ತೊಲಗಿಸಬಹುದು. ಅರಿಶಿನ ಮತ್ತು ಗಂಧದ ಪುಡಿಯನ್ನು ಬೆರೆಸಿ ಮುಖಕ್ಕೆ ಹಚ್ಚಿದರೆ ಚರ್ಮದ ಹೊಳಪು ಹೆಚ್ಚುತ್ತದೆ.

ಸೌತೆಕಾಯಿ ಮತ್ತು ಅರಿಶಿನವನ್ನು ಪೇಸ್ಟ್ ರೀತಿ ಮಾಡಿ ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಮುಖಕ್ಕೆ ಹಚ್ಚಬಹುದು. ಈ ಮಿಶ್ರಣವನ್ನು ಪ್ರತಿನಿತ್ಯ ಹಚ್ಚಿದರೆ ತ್ವಚೆ ನುಣುಪು ಮತ್ತು ಬೆಳ್ಳಗೆ ಆಗುವುದು.

ನಶೆ ಏರಿಸುವ ದಿಶಾ ಪಟಾನಿ ಸೆಲ್ಫಿ ನೋಡಿದ್ರಾ?

#haldi #arashina #lifestyle #arogya

Tags