ಆರೋಗ್ಯಜೀವನ ಶೈಲಿ

ಅರಿಶಿನ ಕ್ಯಾನ್ಸರ್ ನಿರೋಧಕ

ನಿಮಗೆ ಗೊತ್ತಾ, ಅರಿಶಿನ ಕ್ಯಾನ್ಸರ್ ನಿರೋಧಕವಾಗಿ ಕೆಲಸ ಮಾಡುತ್ತದೆ. ಹೌದು, ಪ್ರಕೃತಿ ಮಾತೆ ನಮಗೆ ನೀಡಿರುವ ಈ ಅದ್ಭುತವಾದ ಕೊಡುಗೆಯನ್ನು ದಿನಕ್ಕೆ ಕೇವಲ ಒಂದು ಚಿಟಿಕೆಯಷ್ಟು ಬಳಸುವುದರಿಂದ ಏನೇನು ಲಾಭಗಳಿವೆ ಎಂಬುದು ಗೊತ್ತಾದರೆ ನಿಮಗೆ ಆಶ್ಚರ್ಯವಾಗುತ್ತದೆ.

Image result for turmeric cancer success stories

ಅರಿಶಿನದಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ ಕುರ್ಕ್ಯುಮಿನ್ ಎಂಬ ಸಂಯುಕ್ತವಿದೆ ಎಂಬುದು ಇತ್ತೀಚಿನ ಸಂಶೋಧನೆಗಳಲ್ಲಿಬೆಳಕಿಗೆ ಬಂದಿದ್ದು, ಕ್ಯಾನ್ಸರ್ ನಿರೋಧಕವಾಗಿ ಅರಿಶಿನ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಲಾಗಿದೆ.

ಕ್ಯಾನ್ಸರ್ ಒಂದು ಖಾಯಿಲೆಯಲ್ಲ. ಕ್ಯಾನ್ಸರ್ ಎಂದರೆ ನಿಮ್ಮ ಶರೀರ ನಿಮ್ಮ ವಿರುದ್ಧವೇ ಕೆಲಸ ಮಾಡುತ್ತಿದೆ ಎಂದರ್ಥ; ಕೆಲವು ಜೀವಕೋಶಗಳು ನಿಮ್ಮ ವಿರುದ್ಧ ತಿರುಗಿಬಿದ್ದಿವೆ. ಇದನ್ನು ತಡೆಗಟ್ಟಲು ಶರೀರವನ್ನು ನಿಯಮಿತವಾಗಿ ಶುದ್ಧೀಕರಿಸುವುದು ಒಳ್ಳೆಯದು. ಬರೀ ಹೊಟ್ಟೆಗೆ ಅರಿಶಿನವನ್ನು ಸೇವಿಸುವುದು ಒಂದು ಪರಿಣಾಮಕಾರಿ ಶುದ್ಧೀಕರಣದ ವಿಧಾನ. ಕ್ಯಾನ್ಸರ್ ಬಂದ ನಂತರ ಇದು ಅಷ್ಟು ಪರಿಣಾಮಕಾರಿ ಇಲ್ಲದಿರಬಹುದು. ಆದರೆ ಒಂದು ಗೋಲಿ ಗಾತ್ರದ ಅರಿಶಿನದ ಉಂಡೆ ಮತ್ತು ಬೇವಿನ ಪುಡಿಯ ಉಂಡೆಯನ್ನು ಮುಂಜಾನೆ ಬರೀ ಹೊಟ್ಟೆಯಲ್ಲಿ ಸೇವಿಸುವುದರಿಂದ ನಿಮ್ಮ ಶರೀರ ಶುದ್ಧೀಕರಣಗೊಂಡು, ಕ್ಯಾನ್ಸರ್ ಜೀವಕೋಶಗಳನ್ನು ನಾಶ ಮಾಡುತ್ತದೆ.

ಪುದಿನಾ ಎಲೆಯಿಂದ ಆಗುವ ಹತ್ತು ಹಲವು ಉಪಯೋಗಗಳು

#balkaninews #turmeric #cancer #health

Tags