ಜೀವನ ಶೈಲಿಸೌಂದರ್ಯ

ಅನವಶ್ಯಕ ರೋಮ ನಿವಾರಣೆಗೆ ಇಲ್ಲಿದೆ ಪರಿಹಾರ

ಹೆಣ್ಣುಮಕ್ಕಳಿಗೆ ಮುಟ್ಟು ನಿಂತ ಮೇಲೆ ಮುಖ, ಗದ್ದದಲ್ಲಿ ರೋಮಗಳು ಬೆಳೆಯುತ್ತವೆ. ರೋಮ ನಿವಾರಕ ಕ್ರೀಂ ಹಚ್ಚಿದಾಗ ಕಡಿಮೆಯಾಗಿ ನಂತರ ಹೆಚ್ಚಾಗುತ್ತದೆ. ಆಗಾಗ ಪ್ಲಕ್ಕರ್ ಮೂಲಕ ಕೀಳುತ್ತಿದ್ದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಋತುಬಂಧದ ನಂತರ ಕೆಲವು ಮಹಿಳೆಯರಲ್ಲಿ ರಸದೂತಗಳ ಸ್ರವಿಸುವಿಕೆ ಕಡಿಮೆ ಆಗುವುದರಿಂದ ಈ ರೀತಿ ಆಗುವುದುಂಟು.

ರೋಮ ನಿವಾರಕ ಕ್ರೀಂ ಬಳಸುವುದರಿಂದ ತಾತ್ಕಾಲಿಕ ಸಹಾಯವಾದರೂ ನಂತರ ಅಲ್ಲಿ ಇನ್ನಷ್ಟು ಬಿರುಸಾಗಿ ರೋಮಗಳು ಬೆಳೆಯಲಾರಂಭಿಸುತ್ತವೆ.

ಪರಿಹಾರವೇನು?

*ರಾಸಾಯನಿಕ ಕ್ರೀಂ ಬಳಕೆ ಬೇಡ. ದಿನಕ್ಕೊಮ್ಮೆ ಅರಿಶಿಣ ಪುಡಿ ಹಚ್ಚಿ ರೋಮಗಳ ಬೆಳವಣಿಗೆಯ ವಿರುದ್ಧ ದಿಕ್ಕಿಗೆ 5-8 ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಿ.

*ಬನ್ನಿ ಮರದ ಕಾಯಿಯನ್ನು ನೀರಿನಲ್ಲಿ ತೇಯ್ದು ಲೇಪಿಸಿಕೊಳ್ಳಿ. ಒಂದು ಗಂಟೆ ಬಿಟ್ಟು ತೊಳೆಯಿರಿ. ಇದನ್ನು ದೀರ್ಘ ಕಾಲ ಅನುಸರಿಸುವುದರಿಂದ ರೋಮಗಳ ಬೆಳವಣಿಗೆ ಕಡಿಮೆಯಾಗುವುದಲ್ಲದೇ, ಬಣ್ಣವು ಬದಲಾಗಿ ಕೆಂಚಾಗುತ್ತದೆ. ಈ ಚಿಕಿತ್ಸೆ ರೋಮ ನಿವಾರಕ ಕ್ರೀಂನಂತೆ ತಕ್ಷಣ ಫಲ ನೀಡದಿದ್ದರೂ ದೀರ್ಘಕಾಲದ ಬಳಕೆಯಿಂದ ಖಂಡಿತ ಪ್ರಯೋಜನವಿದೆ. ಬೇರೆಲ್ಲ ದಿನನಿತ್ಯದ ಕೆಲಸಗಳಲ್ಲಿ ಇದು ಕೂಡ ಒಂದಾಗಬೇಕು.

*ರೋಮದ ಬೆಳವಣಿಗೆ ಬಗ್ಗೆ ಚಿಂತಿಸಬೇಡಿ. ವಯಸ್ಸಿಗನುಗುಣವಾಗಿ ಕೆಲವು ಬದಲಾವಣೆಗಳು ಸಹಜ. ಅದನ್ನು ಬಂದಂತೆಯೇ ಬೇಸರ ಪಟ್ಟುಕೊಳ್ಳದೇ ಸ್ವೀಕರಿಸುತ್ತಾ ಹೋಗಬೇಕು ಎಂಬುದು ವೈದ್ಯರ ಸಲಹೆ.

ಸ್ಟೀಮ್ ತೆಗೆದುಕೊಂಡರೆ ಚರ್ಮಕ್ಕೆ ಒಳ್ಳೆಯದೇ?

#balkaninews #unwantedhairremove #beauty #skin #herbal

Tags