ಆರೋಗ್ಯಆಹಾರಜೀವನ ಶೈಲಿ

ಸಾತ್ವಿಕ ಆಹಾರ ಸೇವನೆಯಲ್ಲಿದೆ ಆರೋಗ್ಯ ರಹಸ್ಯ

ಬೆಂಗಳೂರು, ಫೆ.20:

ಪ್ರಾಚೀನ ಋಷಿಮುನಿಗಳ ಕಾಲದಿಂದಲೂ ಸಾತ್ವಿಕ ಆಹಾರ ಸೇವನೆಯೇ ಭಾರತೀಯರ  ಬುದ್ದಿವಂತಿಕೆ ಮತ್ತು ಸನ್ನಡತೆಯ ರಹಸ್ಯ. ಸೊಪ್ಪು ಮತ್ತು ಹಣ್ಣು–ತರಕಾರಿಗಳು ಸಾತ್ವಿಕ ಆಹಾರದ ಪಟ್ಟಿಗೆ ಸೇರುತ್ತದೆ.

ಆಧುನಿಕತೆಯಲ್ಲಿ ಇದನ್ನೇ ಡಯಟಿಂಗ್ ಫುಡ್ ಎಂದು ಮರುನಾಮಕರಣ ಮಾಡಲಾಗಿದೆ. ತೂಕ ಕಡಿಮೆ ಮಾಡುವಲ್ಲಿ ಇವುಗಳ ಪಾತ್ರ ಮಹತ್ವದ್ದಾಗಿದೆ. ಸೊಪ್ಪು, ಹಣ್ಣು ತರಕಾರಿಗಳನ್ನು ತಾಜಾವಾಗಿಯೇ ಸೇವಿಸಿದಾಗ ಆಗುವ ಕೆಲವು ಪ್ರಯೋಜನಗಳು ಹೀಗಿವೆ:

ಸೊಪ್ಪು: ವೈದ್ಯರ ಪ್ರಕಾರ ತಾಜಾ ಸೊಪ್ಪಿನಲ್ಲಿರುವ ಹರಿತ್ತಿನಿಂದಾಗಿ ಮಕ್ಕಳ ಬುದ್ದಿಶಕ್ತಿ ಹೆಚ್ಚುವುದು ಮಾತ್ರವಲ್ಲದೇ ಕಣ್ಣಿನ ಕಾಂತಿಯೂ ಹೆಚ್ಚುತ್ತದೆ. ಆರೋಗ್ಯಕರ ಕೂದಲಿನ ಜೊತೆಗೆ ಚರ್ಮದ ತೊಂದರೆ ಮಾಯವಾಗುತ್ತದೆ. ಸೊಪ್ಪು ಸೌಂದರ್ಯವರ್ಧಕ ಮಾತ್ರವಲ್ಲದೇ ಉತ್ತಮ ಪಾಲಕವೂ ಹೌದು.

ತಾಜಾ ತರಕಾರಿ: ತರಕಾರಿಗಳು ಹಸಿರಾಗಿದ್ದಾಗಲೇ ತಿನ್ನುವುದು ಉತ್ತಮ. ಅಲ್ಲದೇ ಸೂಕ್ತ ಮಾರ್ಗ ಎಂದು ಆಹಾರ ತಜ್ಞರು ಹೇಳುತ್ತಾರೆ. ತರಕಾರಿ ಬಳಸುವಾಗ ಸಿಪ್ಪೆ ಸಮೇತ, ಸಲಾಡ್‌ ಮಾಡಿ ತಿನ್ನುವುದರಿಂದ ಹಲ್ಲುಗಳ ಆರೋಗ್ಯ ತೊಂದರೆ, ಚರ್ಮದ ತೊಂದರೆಗಳನ್ನು ನಿವಾರಣೆ ಮಾಡಿ ಸೌಂದರ್ಯ ವೃದ್ಧಿಗೆ ಕಾರಣವಾಗುತ್ತದೆ. ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು.

ಹಣ್ಣು: ಹಣ್ಣುಗಳನ್ನು ವಾರಕ್ಕಿಂತ ಹೆಚ್ಚು ದಿನಗಳ ಕಾಲ ಇರಿಸಿ ತಿನ್ನುವುದು ಯೋಗ್ಯವಲ್ಲ. ಹಣ್ಣುಗಳ ಜ್ಯೂಸ್‌ ಮಕ್ಕಳಿಗೆ ಮತ್ತು ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೂಕ್ತ. ಹೆಚ್ಚಾಗಿ ಹಣ್ಣುಗಳನ್ನು ಕಚ್ಚಿ ತಿನ್ನುವುದರಿಂದ ವಸಡಿನ ಸಮಸ್ಯೆ, ಬಾಯಿಹುಣ್ಣು, ಕೆನ್ನೆ ಊತದಂತಹ ಸಮಸ್ಯೆಗಳಿಂದ ಮುಕ್ತರಾಗಬಹುದು. ಸೀಸನ್‌ನಲ್ಲಿ ಸಿಗುವ ಹಣ್ಣುಗಳನ್ನು ತಿನ್ನುವುದು ಅತ್ಯುತ್ತಮ. ಪ್ರತಿನಿತ್ಯ ಊಟದ ನಂತರ ಯಾವುದಾದರೂ ಒಂದು ಹಣ್ಣನ್ನು ತೊಳೆದು ತಿನ್ನುವುದು ಒಳ್ಳೆಯದು.  ಇದರಿಂದ ರಕ್ತ ಶುದ್ಧಿಯಾಗಿ ಸೌಂದರ್ಯ ನಳನಳಿಸುತ್ತದೆ.

ಇಂದಿನ ಒತ್ತಡ ಜೀವನ ಶೈಲಿಗೆ ಹೇಳಿ ಮಾಡಿಸಿದಂತಿದೆ ಸೊಪ್ಪು ತರಕಾರಿ ಮತ್ತು ಹಣ್ಣುಗಳು. ಕಾರಣ, ಇವುಗಳನ್ನು ಕಚ್ಚಾ (ಹಸಿಯಾಗಿ) ಆಹಾರವಾಗಿ ಸೇವಿಸಬಹುದು. ಸುಲಭವಾಗಿ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು.

ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್ ಗೆ ಜೊತೆಯಾದ ಚೈತ್ರಾ ರೆಡ್ಡಿ

#balkaninews #salad #vegetables #foods #healthytips #balkaninews #beautytips #healthyfoods

Tags

Related Articles