ಆರೋಗ್ಯಆಹಾರಜೀವನ ಶೈಲಿ

ವಿಟಮಿನ್ ಬಿ5 ಬಗ್ಗೆ ನಿಮಗೆಷ್ಟು ಗೊತ್ತು…?

ನಮ್ಮ ದೇಹಕ್ಕೆ ರೋಗನಿರೋಧಕ ಶಕ್ತಿ ನೀಡಲು ಬಿ ಕಾಂಪ್ಲೆಕ್ಸ್ ಎಷ್ಟು ಮುಖ್ಯವೋ, ಉತ್ತಮ ಆರೋಗ್ಯಕ್ಕೂ ಬಿ ಕಾಂಪ್ಲೆಕ್ಸ್ ಅಷ್ಟೇ ಸಹಾಯಕಾರಿ. ಇನ್ನೂ ವಿಟಮಿನ್ ಬಿ5  ಕೆಂಪು ರಕ್ತಕಣಗಳ ವೃದ್ಧಿಗೆ ಸಹಕಾರಿ. ವಿಟಮಿನ್ ಬಿ5 ಇರುವ ಆಹಾರ ಪದಾರ್ಥಗಳನ್ನು ಸೇವಿಸಿದರೆ ಆರೋಗ್ಯವನ್ನು ಪಡೆಯಬಹುದು. ಆದರೆ ಗೊಂದಲ ಎಂದರೆ ಯಾವೆಲ್ಲಾ ಆಹಾರದಲ್ಲಿ ವಿಟಮಿನ್ ಬಿ5 ಇದೆ ಎಂಬುದನ್ನು ನಾವಿಂದು ತಿಳಿಯೋಣ.

ಒಣದ್ರಾಕ್ಷಿ, ಗೋಡಂಬಿ, ಬಾದಾಮಿ ಸೇವಿಸಿದರೆ ಒಳ್ಳೆಯದು. ಪ್ರತಿದಿನ ಸ್ವಲ್ಪ ನಟ್ಸ್ ಗಳನ್ನು ಸೇವಿಸಿದರೆ ವಿಟಮಿನ್ ಬಿ5 ನಮ್ಮ ದೇಹಕ್ಕೆ ಸೇರುತ್ತದೆ.

ಮಳೆಗಾಲದಲ್ಲಿ ದೊರೆಯುವ ಅಣಬೆಯಲ್ಲಿ ಬಿ5 ಜೀವಸತ್ವ ಹೇರಳವಾಗಿರುತ್ತದೆ. ಅಣಬೆಯನ್ನು ಆಹಾರವಾಗಿ ಸೇವಿಸಿದರೆ  ಜೀವ ಕ್ರಿಯೆಯ ಪ್ರಮಾಣ ಹೆಚ್ಚಾಗುತ್ತದೆ. ಇನ್ನೂ ರಕ್ತಹೀನತೆಯಿಂದ ತೊಂದರೆ ಎದುರಿಸುತ್ತಿರುವವರು ಹೆಚ್ಚು ಹೆಚ್ಚು ಅಣಬೆಯನ್ನು ಸೇವಿಸಿದರೆ ಒಳ್ಳೆಯದು.

ಮೆಕ್ಕೆಜೋಳದಲ್ಲಿ ಮಿನರಲ್, ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಬಿ5 ಹೇರಳವಾಗಿದ್ದು ಪ್ರತಿದಿನ ಬೇಯಿಸಿದ ಮುಸುಕಿನ ಜೋಳ ಒಂದು ಕಪ್ ಸೇವಿಸಿದರೆ ಉತ್ತಮ. ಹೀಗೆ ಸೇವಿಸುವುದರಿಂದ ದೇಹಕ್ಕೆ ತಕ್ಷಣ ಶಕ್ತಿ ದೊರಕುತ್ತದೆ. ಇದರ ಜೊತೆಗೆ ಕೆಂಪು ರಕ್ತಕಣಗಳು ವೃದ್ಧಿಯಾಗುತ್ತವೆ.

ಮಾಂಸಹಾರಿಗಳು ಸದಾ ಮೊಟ್ಟೆ, ಮೀನನ್ನು ಸೇವಿಸಬೇಕು. ಹೀಗೆ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಅವರು ಪಡೆಯಬಹುದು. ಅದರ ಹೊರತಾಗಿ ಶಾಖಾಹಾರಿಗಳು ಹಾಲು-ಮೊಸರು ಸೇವಿಸಬೇಕು. ಯಾಕೆಂದರೆ ಇದರಲ್ಲಿ ವಿಟಮಿನ್ ಬಿ5 ಹೇರಳವಾಗಿದೆ. ಇದು ನಮ್ಮ ದೇಹವನ್ನು ದೃಢವಾಗಿಡುತ್ತದೆ.

Related image

ಈರುಳ್ಳಿ ಬಳಸಿ, ತಲೆಹೊಟ್ಟು ನಿವಾರಿಸಿ

#balkaninews #vitamin5 #vitamin5benefits

Tags