ಆರೋಗ್ಯಆಹಾರಜೀವನ ಶೈಲಿ

ಕ್ಯಾನ್ಸರ್..! ಆಹ್ವಾನಕ್ಕೆ ಹೆಚ್ಚು ಹೊತ್ತು ಟಿವಿ ನೋಡುವುದೂ ಕಾರಣ, ಎಚ್ಚರ…..

ಬೆಂಗಳೂರು, ಫೆ.18:

ಯಾರಾದರು ಟಿವಿ ಹೆಚ್ಚು ನೋಡಬಾರದು ಎಂದು ಹೇಳಿದರೆ ಸಾಕು, ಅವರೂ ಎಷ್ಟೆ ಆತ್ಮೀಯರಾಗಿದ್ದರೂ ಸರಿ ಅವರು ಶತ್ರುಗಳ ಪಟ್ಟಿಗೆ ಸೇರುವುದ್ದಂತೂ ಸತ್ಯ. ಆದರೆ …… ಈ ಸುದ್ದಿ ಕೇಳಿದರೆ ನೀವೇ ಟಿವಿ ನೋಡಲು ಕೂರುವ ಮುನ್ನ ಯೋಚಿಸುತ್ತೀರಿ.

ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ ಹಾಗೂ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ಸಂಶೋಧನೆಯ ವರದಿಯು, ಹೆಚ್ಚು ಹೊತ್ತು ಟಿವಿ ನೋಡುವುದರಿಂದ ಕರುಳಿನ ಕ್ಯಾನ್ಸರ್‌ ಬರುವ ಸಾಧ್ಯತೆಗಳಿವೆ,  ಪ್ರತಿ ದಿನ ನಿರಂತರ 2 ಗಂಟೆಗೂ ಹೆಚ್ಚು ಕಾಲ ಟಿವಿ ಮುಂದೆ ಕೂರುವುದರಿಂದ ಕರುಳಿನ ಕ್ಯಾನ್ಸರ್‌ ಗೆ ತುತ್ತಾಗುವ ಸಾಧ್ಯತೆ ಶೇ.70ರಷ್ಟಿದೆ ಎಂದು ತಿಳಿಸಿದೆ.

ಅಮೆರಿಕದ 89,278 ಮಹಿಳೆಯರನ್ನು ಕ್ಯಾನ್ಸರ್‌ ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ 118 ಯುವತಿಯರಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್‌ ಪತ್ತೆಯಾಗಿದೆ. ಇವರೆಲ್ಲರೂ ದಿನದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಟಿವಿ ನೋಡುತ್ತಿರುವುದು ಸಮೀಕ್ಷೆಯಲ್ಲಿ ತಿಳಿಯಲಾಗಿದೆ. ಪ್ರತಿ ದಿನ 2 ಗಂಟೆಗೂ ಅಧಿಕ ಕಾಲ ಟಿವಿಯಲ್ಲಿ ತೊಡಗುವವರಲ್ಲಿ ಕ್ಯಾನ್ಸರ್‌ ಪತ್ತೆಯ ಸಾಧ್ಯತೆ ಶೇ.70ರಷ್ಟಿರುವುದಾಗಿ ಹೇಳಲಾಗಿದೆ. ಸಂಶೋಧನೆ ವೇಳೆ ಅನೇಕರಲ್ಲಿ ಕುಟುಂಬದಲ್ಲಿ ಯಾರಲ್ಲೂ ಇಲ್ಲದಿದ್ದರೂ ಕ್ಯಾನ್ಸರ್‌ ಪತ್ತೆಯಾಗಿದೆ. 20-30 ವರ್ಷದೊಳಗಿನವರಲ್ಲಿ ಕರುಳಿನ ಕ್ಯಾನ್ಸರ್‌ ಪತ್ತೆಯಾಗುತ್ತಿದೆ. ಅಲ್ಲದೆ ಆರಂಭಿಕ ಹಂತದಲ್ಲಿ ಇವುಗಳ ಪತ್ತೆಯಿಂದ ತಡೆಗಟ್ಟಲು ಸಾಧ್ಯವಿದೆ. ಇದಕ್ಕೆ ಸ್ಪಷ್ಟ ಕಾರಣಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲಾಗುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ .

40ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಡೆದ ಸಂಶೋಧನೆಯ ಬಳಿಕ ಈ ಫಲಿತಾಂಶಕ್ಕೆ ಬರಲಾಗಿದೆ. ಈ ಕುರಿತು ಮಾಸ ಪತ್ರಿಕೆಯಲ್ಲೂ ಮುದ್ರಿಸಲಾಗಿದೆ ಎಂದು ಗೊತ್ತಾಗಿದೆ.

ಈ ಲೇಖನ ಓದಿದ ನಂತರ ನಿಮ್ಮಲ್ಲಿ ಬದಲಾವಣೆ ಕಂಡುಬರುತ್ತದೆ ಎಂಬುದು ನಮ್ಮ ಆಶಯ.

ನಮ್ಮೊಳಗಿದೆ ಅಪರಿಮಿತ ವಿಶ್ವಾಸ, ಅದನ್ನು ಜಾಗೃತಗೊಳಿಸಬೇಕಷ್ಟೆ

#cancertreatments #watchingtv #watchingtvproblems #balkaninews

Tags

Related Articles