ಆರೋಗ್ಯಆಹಾರಜೀವನ ಶೈಲಿ

ಬಾಯಾರಿಕೆ ನೀಗುವ ಕಲ್ಲಂಗಡಿಯ ಬಗ್ಗೆ ನಿಮಗೆಷ್ಟು ಗೊತ್ತು…?

ಬೆಂಗಳೂರು, ಮಾ.22:

ಕಲ್ಲಂಗಡಿಯಲ್ಲಿರುವಷ್ಟು ನೀರಿನ ಪ್ರಮಾಣ ಬೇರೆ ಯಾವ ಹಣ್ಣಿನಲ್ಲೂ ಇಲ್ಲ. ಬಳಲಿದ ದೇಹಕ್ಕೆ ಬರಿ ನೀರು ಮಾತ್ರವಲ್ಲ, ಹಲವಾರು ಪೋಷಕಾಂಶಗಳು ಈ ಕಲ್ಲಂಗಡಿಯಿಂದ ದೊರಕುತ್ತದೆ. ಕುಕರ್ಬಿಟೇಸಿಯಿ ಕುಟುಂಬಕ್ಕೆ ಸೇರಿದ ಕಲ್ಲಂಗಡಿಯ ಮೂಲ ಆಫ್ರಿಕಾ. ನೆಲದ ಮೇಲೆ ಅಗಲವಾಗಿ ಹರಡಿಕೊಂಡು ಬೆಳೆಯುವ ಈ ಹಣ್ಣನ್ನು ಇಷ್ಟಪಡದವರಾರು ಹೇಳಿ..?

ದಣಿದ ದೇಹಕ್ಕೆ ಹೊಸ ಉತ್ಸಾಹ ನೀಡುವ ಕಲ್ಲಂಗಡಿ ಹಣ್ಣನ್ನು ಹಲವು ಖಾಯಿಲೆಗಳಿಗೆ ಔಷಧವನ್ನಾಗಿ ಉಪಯೋಗಿಸುತ್ತಾರೆ. ಇದರಲ್ಲಿ 92% ನೀರಿನ ಅಂಶವಿದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಜೊತೆಗೆ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಹಲವಾರು ಪೌಷ್ಟಿಕಾಂಶಗಳಿಂದ ಕೂಡಿದ ಕಲ್ಲಂಗಡಿ ಹಣ್ಣು ಹಲವಾರು ಜೀವಸತ್ವಗಳನ್ನು ಒಳಗೊಂಡಿದೆ. ಕ್ಯಾಲ್ಸಿಯಂ, ಮ್ಯಾಂಗನೀಸ್, ಸಸಾರಜನಕ, ಕಬ್ಬಿಣ,  ವಿಟಮಿನ್ ಸಿ ಅಂಶವಿದೆ.

ಕಾಮಾಲೆ ರೋಗಕ್ಕೆ ರಾಮಬಾಣವಾಗಿರುವ ಕಲ್ಲಂಗಡಿಯನ್ನು ಕಣ್ಣು ಉರಿ, ಕಜ್ಜಿ, ತುರಿಕೆಗಳ ಶಮನಕ್ಕೂ ಉಪಯೋಗಿಸುತ್ತಾರೆ. ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ಮಲಬದ್ಧತೆಯನ್ನು ನಿವಾರಿಸಬಹುದು. ಅಷ್ಟೇ ಅಲ್ಲದೇ ದೇಹದಲ್ಲಿನ ಉರಿ ಕಡಿಮೆಗೊಳಿಸಲು, ಕಿಡ್ನಿಯನ್ನು ಆರೋಗ್ಯವಾಗಿಡಲು, ರಕ್ತದೊತ್ತಡ ನಿಯಂತ್ರಣದಲ್ಲಿಡಲು, ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಕಲ್ಲಂಗಡಿ ಪ್ರಮುಖ ಪಾತ್ರ ವಹಿಸುತ್ತದೆ.

ದೇಹದಲ್ಲಿ ಉಷ್ಣತೆ ಹೆಚ್ಚಾಗದಂತೆ ದೇಹವನ್ನು ಸದಾ ತಂಪಾಗಿಡುವ ಇದು ಗರ್ಭಿಣಿಯರಿಗೆ ಹೇಳಿ ಮಾಡಿಸಿದ ಹಣ್ಣು. ಯಾಕೆಂದರೆ ಗರ್ಭಿಣಿಯರಿಗೆ ಬೇಕಾದ ಫಾಲಿಕ್ ಆಸಿಡ್ ಇದರಲ್ಲಿ ಅಧಿಕ ಪ್ರಮಾಣದಲ್ಲಿದೆ. ಜೊತೆಗೆ ಖನಿಜಾಂಶಗಳು ಜಾಸ್ತಿ ಇರುವುದರಿಂದ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ. ಕಲ್ಲಂಗಡಿಯಲ್ಲಿ ಪ್ರತ್ಯಾಮ್ಲಗಳು ಅಧಿಕವಾಗಿರುವುದರಿಂದ ದೇಹಕ್ಕೆ ಹಾನಿಯುಂಟು ಮಾಡುವ ಬೇಡದ ರಾಸಾಯನಿಕಗಳನ್ನು ಹೊರಹಾಕುತ್ತದೆ.

ವಿಟಮಿನ್ ಎ ಇರುವುದರಿಂದ ಕಣ್ಣಿನ ಆರೋಗ್ಯಕ್ಕೂ ಈ ಕಣ್ಣಿನ ಸೇವನೆ ಒಳ್ಳೆಯದು. ಎಲ್ಲರೂ ತಿನ್ನಲೇ ಬೇಕಾದ ಈ ಹಣ್ಣು ದೇಹದ ಸುಸ್ತು ಮರೆಮಾಡಿ ಸದಾ ಕಾಲ ದೇಹ ಚೈತನ್ಯದಿಂದ ಇರುವಂತೆ ಮಾಡುತ್ತದೆ.

ಗುಲಾಬಿ ಟೀ ಕುಡಿಯಿರಿ, ತೂಕ ಇಳಿಸಿ..!

#watermelon #foods #watermelonjuice #balkaninews #watermelonjuiceforsummer

Tags