ಆರೋಗ್ಯಆಹಾರಜೀವನ ಶೈಲಿ

ಕಲ್ಲಂಗಡಿ ಹಣ್ಣಿನ ಪುಟ್ಟ ಬೀಜವೂ ಆರೋಗ್ಯಕರ!

ಬೆಂಗಳೂರು, ಮೇ.13:

ರುಚಿರುಚಿಯಾದ ಕಲ್ಲಂಗಡಿ ಹಣ್ಣನ್ನು ಸವಿದು ಪುಟ್ಟದಾದ ಕಪ್ಪು ಬೀಜವನ್ನು ಬಿಸಾಡುವುದು ಸರ್ವೇ ಸಾಮಾನ್ಯ. ಆದರೆ ಈ ವಿಷಯ ಕೇಳಿದರೆ ನೀವು ಖಂಡಿತಾ ಶಾಕ್ ಆಗುತ್ತೀರಾ! ಅದೇನಂತೀರಾ? ಇಷ್ಟು ದಿನ ನೀವು, ನಾವು ಬಿಸಾಡುತ್ತಿದ್ದ ಆ ಪುಟ್ಟ ಕಪ್ಪು ಬೀಜವೂ ಆರೋಗ್ಯಕರ! ಅದು ಕೂಡಾ ಪೋಷಕಾಂಶಗಳ ಆಗರ ಎಂಬುದು ಯಾರಿಗೂ ತಿಳಿದಿಲ್ಲ!

ತುಂಬಾ ಕಡಿಮೆ ಪ್ರಮಾಣದ ಕ್ಯಾಲೊರಿ ಇರುವ ಕಲ್ಲಂಗಡಿ ಬೀಜದಲ್ಲಿ ಸತು, ತಾಮ್ರ, ಪೊಟಾಷಿಯಂ, ಮೆಗ್ನೀಷಿಯಂ, ಕಬ್ಬಿಣ, ಫಾರೆಲ್‌ ಮುಂತಾದ ಪೋಷಕಾಂಶಗಳಿವೆ. ಕಲ್ಲಂಗಡಿ ಬೀಜದ ಆರೋಗ್ಯ ಪುರಾಣವನ್ನು ನಾವಿಂದು ತಿಳಿಯೋಣ.

Related image

ಕಲ್ಲಂಗಡಿ ಬೀಜದಲ್ಲಿ ಮೆಗ್ನೇಷಿಯಂ ಪ್ರಮಾಣ ಅಧಿಕವಾಗಿರುವುದರಿಂದ ಈ ಬೀಜದ ಸೇವನೆಯಿಂದ ಹೈಪರ್‌ ಟೈನ್ಷನ್‌ ದೂರವಾಗುತ್ತದೆ. ಜೊತೆಗೆ ಹೃದಯ ಆರೋಗ್ಯವಾಗಿರುತ್ತದೆ. ಕಲ್ಲಂಗಡಿ ಬೀಜದ ಸೇವನೆಯಿಂದ  ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಜೊತೆಗೆ ಈ ಬೀಜದಲ್ಲಿ ತಾಮ್ರ, ಮ್ಯಾಂಗನೀಸ್‌ ಮತ್ತು ಪೊಟಾಷಿಯಂ ಅಂಶವು ಹೇರಳವಾಗಿದೆ. ಇದರಿಂದ ಮೂಳೆಗಳ ಆರೋಗ್ಯವು ಹೆಚ್ಚುತ್ತದೆ. ಮಾತ್ರವಲ್ಲ ಮೂಳೆಯ ಸಾಂದ್ರತೆಯನ್ನು ವರ್ಧಿಸುತ್ತದೆ.

ಮುಖ್ಯವಾದ ವಿಚಾರವೆಂದರೆ ಕಲ್ಲಂಗಡಿ ಬೀಜದಲ್ಲಿ ಆರೋಗ್ಯಕರವಾದ ಕೊಬ್ಬು ಇದೆ!  ಒಲೈಕ್‌ ಆಮ್ಲ, ಲಿನೊಲಿಯಂ ಆಮ್ಲದ ಮೂಲವಾಗಿರುವ ಕಲ್ಲಂಗಡಿ ಬೀಜ ದೇಹದ ಕಾರ್ಯಕ್ಷಮತೆಯನ್ನು ಜಾಸ್ತಿ ಮಾಡುತ್ತದೆ. ಅಲ್ಲದೇ ಇದು ಮಧುಮೇಹಿಗಳಿಗೆ ಹೇಳಿ ಮಾಡಿಸಿದ್ದು. ಯಾಕಂತೀರಾ? ರಕ್ತದಲ್ಲಿ ಹೆಚ್ಚಿದ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವ ಗುಣ ಇದಕ್ಕಿದೆ.

ಇದರಲ್ಲಿ ಪ್ರೊಟೀನ್‌ ಮತ್ತು ಕಬ್ಬಿಣ ಹೆಚ್ಚಿರುವುದರಿಂದ ಇದರ ಸೇವನೆಯಿಂದ ಕೂದಲಿನ ಆರೋಗ್ಯಕ್ಕೆ ಇದು ಸಹಕಾರಿ. ಅದೇ ಕಾರಣದಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ. ಜೊತೆಗೆ ಇದು ಕೂದಲಿನ ಬುಡವನ್ನು ಗಟ್ಟಿಗೊಳಿಸುತ್ತದೆ. ಇದರಲ್ಲಿ ಮೆಗ್ನೇಷಿಯಂ ಹೇರಳವಾಗಿ ಇರುವ ಕಾರಣ ಇದು ಕೂದಲು ಉದುರುವ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ.

Image result for watermelon seeds

ಮೂರನೇ ಬಾರಿಗೆ ರೊಮ್ಯಾನ್ಸ್ ಮಾಡಲಿದ್ದಾರೆಯೇ ಈ ಜೋಡಿ!!?!!

#watermelon #balkaninews #foods #benifitsofwatermelon

Tags