ಜೀವನ ಶೈಲಿಸೌಂದರ್ಯ

‘ಕಲ್ಲಂಗಡಿ’ ಹಣ್ಣಿನಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದು ಹೇಗೆ?

ಬೆಂಗಳೂರು, ಆ.23: ಕಲ್ಲಂಗಡಿ ಹಣ್ಣು ಈಗ ಅಷ್ಟಾಗಿ ಸಿಗಲ್ಲ. ಆದರೂ ಇದಕ್ಕೆ ಸೀಸನ್ ಎಂಬುದೇನು ಇಲ್ಲ. ಬೇಸಿಯಲ್ಲಷ್ಟೇ ಅಲ್ಲದೆ ಬೇರೆ ಕಾಲದಲ್ಲೂ ಸಿಗುತ್ತದೆ. ಕಲ್ಲಂಗಡಿ ದಾಹ ನಿವಾರಕವಾಗಿ, ಬೇಸಿಗೆಯ ಬೇಗೆಯನ್ನು ನೀಡುವ ತಂಪಾದ ಹಣ್ಣು. ಇದರಲ್ಲಿ ಹಲವಾರು ಪೋಷಕಾಂಶಗಳಿವೆ. ಇದನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಅದು ಹೇಗೆ ಎಂಬುದನ್ನು ನೋಡೋಣ.

* ಬಿಸಿಲಿನಿಂದ ಚರ್ಮ ಕಪ್ಪಾಗಿದ್ದರೆ ಕಲ್ಲಂಗಡಿ ಹಣ್ಣಿನ ರಸವನ್ನು ಚರ್ಮಕ್ಕೆ ಲೇಪನ ಮಾಡಿದರೆ ಕಪ್ಪು ನಿವಾರಣೆಯಾಗುತ್ತದೆ.

* ಮೃದು ಚರ್ಮದವರು ಕಲ್ಲಂಗಡಿ ಹಣ್ಣಿನ ರಸಕ್ಕೆ ಜೇನುತುಪ್ಪ ಸೇರಿಸಿ ಮುಖಕ್ಕೆ ಲೇಪನ ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ.* ಕಲ್ಲಂಗಡಿ ಬೀಜವನ್ನು ಒಣಗಿಸಿ ಪುಡಿ ಮಾಡಿ. ಆ ಪುಡಿಗೆ ಬಿಸಿ ನೀರನ್ನು ಬೆರೆಸಿ ಮುಖದಲ್ಲಿರುವ ಮೊಡವೆಗಳ ಮೇಲೆ 10 ನಿಮಿಷ ಮಾಲಿಶ್‌ ಮಾಡಿದರೆ ಮೊಡವೆ ನಿವಾರಣೆಯಾಗುತ್ತದೆ.

* ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ಸೇವಿಸಿದರೆ ದೇಹದ ಮಾಂಸ ಖಂಡಗಳಲ್ಲಿ ಬಿಗಿಯುಂಟಾಗಿ ನೋವಿದ್ದರೆ ಗುಣವಾಗುತ್ತದೆ.

* ಕಲ್ಲಂಗಡಿ ಬೀಜವನ್ನು ನೀರಲ್ಲಿ ಕುದಿಸಿ ಕಷಾಯ ತಯಾರಿಸಿ. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿದರೆ ಹೊಟ್ಟೆ ಹುಳಗಳು ಬೀಳುತ್ತದೆ.* ಕಲ್ಲಂಗಡಿ ಹಣ್ಣಿನ ರಸಕ್ಕೆ ಸಕ್ಕರೆ ಬೆರೆಸಿ ಸೇವಿಸಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

* ಕಲ್ಲಂಗಡಿ ಬೀಜದ ಸಿಪ್ಪೆಯನ್ನು ತೆಗೆದು, ಅಕ್ಕಿ ತೊಳೆದ ನೀರಿನ ಜೊತೆ ಸೇವಿಸಿದರೆ ಕಟ್ಟಿಕೊಂಡಿರುವ ಮೂತ್ರ ಸಲೀಸಾಗಿ ಹೋಗುತ್ತದೆ.

* ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಬಿಳಿ ಭಾಗವನ್ನು ತೆಗೆದು ಹಣೆಗೆ ಹಾಕಿದರೆ ತಲೆನೋವು ಕಡಿಮೆಯಾಗುತ್ತದೆ.

Tags