ಆರೋಗ್ಯಜೀವನ ಶೈಲಿ

ಮರೆವಿನ ಖಾಯಿಲೆ: ಈ ಸರಳ ಮದ್ದುಗಳನ್ನು ಬಳಸಿ

ಮರೆವು ಎನ್ನುವುದು ಕೆಲವೊಂದು ಸಾರಿ ವರವಾದರೆ, ಒಮ್ಮೊಮ್ಮೆ ಶಾಪವೂ ಆಗಿ ಬಿಡುತ್ತದೆ. ಒಂದು ಹಂತದಲ್ಲಿ ಮರೆವು ಎನ್ನುವುದು ಪೇಚಿಗೆ ಸಿಲುಕಿಸಿರುತ್ತದೆ. ಕೆಲವರಲ್ಲಂತೂ ಇದು ವಿಪರೀತ ಹಂತಕ್ಕೆ ತಲುಪಿರುತ್ತದೆ.

ಈಗಿನ ವಿದ್ಯಮಾನದಲ್ಲಿ ಖಿನ್ನತೆ, ಟೆನ್ಶನ್, ನಿದ್ದೆ ಕಡಿಮೆ ಮಾಡುವುದು, ಮಧ್ಯಪಾನ ಇವೆಲ್ಲದರಿಂದ ಮರೆವಿನ ಖಾಯಿಲೆ ಬರುತ್ತದೆ. ಈ ಖಾಯಿಲೆಯು ಸಾಂಕ್ರಾಮಿಕವೂ ಅಲ್ಲ. ಆನುವಂಶಿಯವೂ ಅಲ್ಲ. ಆದರೂ ಇದು ಸರ್ವೇ ಸಾಮಾನ್ಯವಾದ ರೋಗವಾಗಿದೆ.

1 ಮರೆಗುಳಿತನದ ಸಮಸ್ಯೆ ಇರುವವರು ಮೊದಲೇ ಲಿಸ್ಟ್ ಮಾಡಿಕೊಳ್ಳುವುದು ಉತ್ತಮವಾದ ಪರಿಹಾರವಾಗಿದೆ. ಇದರಿಂದ ನಾವು ಮರೆತರೂ ಲಿಸ್ಟ್ ನೋಡಿದರೆ ಮತ್ತೆ ನೆನಪಾಗುತ್ತದೆ.

2 ಪಾಲಕ್ ಮತ್ತು ಹಸಿರು ಸೊಪ್ಪುಗಳು ಅಲ್ಜೈಮರ್ಸ್ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಎತ್ತಿದ ಕೈ ಆಗಿದ್ದು, ಪ್ರತಿದಿನ ನಾರಿನಂಶ ಅಧಿಕವಾಗಿರುವ ಆಹಾರವನ್ನು, ಆಂಟಿ ಆಕ್ಸಿಡೆಂಟ್ ಗಳನ್ನು, ಹಸಿರು ಸೊಪ್ಪುಗಳನ್ನು, ತರಕಾರಿಗಳನ್ನು ಸೇವಿಸಬೇಕು.

3 ದೈಹಿಕ ಚಟುವಟಿಕೆಯಿಂದ ಮಿದುಳು ಸೇರಿದಂತೆ ದೇಹದಲ್ಲಿ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಮಿದುಳಿಗೆ ರಕ್ತ ಸಂಚಾರ ಹೆಚ್ಚುವುದರಿಂದ ನೆನಪಿನ ಶಕ್ತಿ ಚುರುಕುಗೊಳ್ಳುತ್ತದೆ. ಹೀಗಾಗಿ ಕೆಲವು ಗಂಟೆಗಳ ಕಾಲ ವಾಕಿಂಗ್, ಜಾಗಿಂಗ್ ಮಾಡಿ.

4 ಮನಸ್ಸನ್ನು ಸಂತೋಷವಾಗಿರಿಸಿಕೊಳ್ಳುವುದೂ ಸಹ ಒಂದು ಕಲೆ. ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಕಾಲ ಕಳೆಯುವುದರಂದ ಮನಸ್ಸಿಗೆ ಹಿತ ಎನಿಸುತ್ತದೆ. ಇದರಂದ ಮರೆವಿನ ಖಾಯಿಲೆಯು ದೂರವಾಗುತ್ತದೆ.

ದೇಹದ ದುರ್ವಾಸನೆ ತೊಲಗಿಸಲು ಇಲ್ಲಿದೆ ಸರಳ ಮಾರ್ಗಗಳು

#Memory  #MemoryLoss #HealthTips #LifeStyle

Tags