ಜೀವನ ಶೈಲಿಫ್ಯಾಷನ್ಸುದ್ದಿಗಳುಸೌಂದರ್ಯ

ಮದುವೆಯಾಗುವ ಪ್ರತಿ ದಂಪತಿಯೂ ಕೂಡ ಈ ಆರು ರೀತಿಯಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲೇಬೇಕು…!!?!!

ಮದುವೆ ಎನ್ನುವುದು ಪ್ರತಿಯೊಬ್ಬ ಹುಡುಗ ಹುಡುಗಿಯ ಕನಸ್ಸು ಎಂದರೇ ತಪ್ಪಾಗುವುದಿಲ್ಲ. ಏಕೆಂದರೇ, ಮದುವೆ ಎಂದಾಕ್ಷಣ ಸಾವಿರಾರು ಕನಸ್ಸುಗಳು ಕಣ್ಣ ಮುಂದೆ ಬರುತ್ತದೆ. ನಮ್ಮ ಜೀವನದ ಅದ್ಭುತಗಳಲ್ಲಿ ಮದುವೆ ಎನ್ನುವುದು ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಅದರಂತೆ ಮದುವೆ ಎಂದಾಕ್ಷಣ ನಮಗೆ ಮುಖ್ಯವಾಗಿ ನೆನಪಾಗುವುದು ಫೋಟೊ.Related imageನಮ್ಮ ಬದುಕಿನ ಹಿಂದಿನ ಪುಟಗಳನ್ನು ತೆಗೆದು ನೋಡಿದಾಗ ನಮಗೆ ಮದುವೆ ಫೋಟೊಗಳು ಸುಂದರ ಕಥೆಯನ್ನು ಹೇಳುತ್ತವೆ. ಅದರಂತೆ  ನಾವು ಮದುವೆಗೆಂದೇ ಗೊತ್ತುಪಡಿಸಿದ ಫೋಟೋಗ್ರಾಫರ್ ದಿನವಿಡೀ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಅವರು ನಿಮಗೆ ಬೇಕಾದ ಎಲ್ಲಾ ವಿಶೇಷ ಕ್ಷಣಗಳನ್ನು ಸೆರೆಹಿಡಿಯುತ್ತಾರೆ ಎಂದು ನೀವು ತಿಳಿದುಕೊಳ್ಳಬೇಕು. ಆದರೆ, ಕೆಲವೊಮ್ಮೆ ನೀವು ಅಂದುಕೊಂಡಂತೆ ಆ ಫೋಟೊ ಬರದಿದ್ದಾಗ ಆ ಘಟನೆಯನ್ನು ಮರುಸೃಷ್ಟಿಸಲು ನಮಗೆ ಎರಡನೇ ಅವಕಾಶಗಳು ಸಿಗುವುದಿಲ್ಲ. ಆದ್ದರಿಂದ ನೀವು “ಫೋಟೊಗಳ ಪರಿಶೀಲನೆ ಮಾಡಿ ನಿಮಗೆ ಬೇಕಾದಂತೆ ಫೋಟೊಗಳು ಕ್ಲಿಕ್ಕಿಸಿಕೊಳ್ಳಿ. ಆದರೆ ನಾವಿಂದು ನಿಮಗೆ ಸಲಹೆಯೊಂದನ್ನು ನೀಡುತ್ತಿದ್ದೇವೆ. ಅದೇನೇಂದರೇ, ನಿಮ್ಮ ಮದುವೆಯಲ್ಲಿ ಈ ಆರು ರೀತಿಯಲ್ಲಿ ವಿವಾಹದ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳಲೇಬೇಕು. ಹಾಗಾದರೆ ಯಾವುದು ಆ ಆರು ರೀತಿ ಎಂಬುದುನ್ನು ನಾವಿಂದು ನಿಮಗೆ ತಿಳಿಸುತ್ತೇವೆ.ಮೊದಲ ನೋಟ

ಸಾಂಪ್ರದಾಯಿಕವಾಗಿ ತಯಾರಾದ ದಂಪತಿಗಳು ಮಂಟಪದಲ್ಲಿ ಕುಳಿತಾದ ಈ ರೀತಿಯ ಫೋಟೊಗಳನ್ನು ತೆಗೆಯಬಹುದು. ನಿಮ್ಮ ವಿವಾಹದ ಬೆಳಿಗ್ಗೆ ನೀವು ಮೊದಲ ಬಾರಿಗೆ ಒಬ್ಬರನ್ನೊಬ್ಬರು ಕದ್ದು ಮುಚ್ಚಿ ನೋಡಿದಾಗ ಅದನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯಿರಿ. ಈ ಫೋಟೊದಲ್ಲಿ ಹೇಳಲಾಗದ ಭಾವನೆಗಳು, ಉತ್ಸಾಹ ಹಾಗೂ ಪ್ರೀತಿಯನ್ನು ಕಾಣಬಹುದಾಗಿದೆ.Image result for samantha wedding

ರೊಮ್ಯಾಂಟಿಕ್ ಶಾಟ್

ಮದುವೆಯಲ್ಲಿ ವರ ಮತ್ತು ವಧು ಕದ್ದ ನೋಟಗಳು, ಕೈಗಳನ್ನು ಹಿಡಿದುಕೊಳ್ಳುವುದು, ಕಣ್ಣುಗಳೊಂದಿಗೆ ಮಾತನಾಡುವುದು ಇತ್ಯಾದಿಗಳನ್ನು ರೊಮ್ಯಾಂಟಿಕ್ ಆಗಿ ಶಾಟ್ ತೆಗೆಯಲು ಪ್ರಯತ್ನಿಸಿ. ಇದನ್ನು ಒಮ್ಮೆ ನೋಡಿದಾಗ ನಿಮ್ಮಲ್ಲೇ ನೀವು ಹೇಳಲಾಗದಷ್ಟು ಭಾವನೆಗಳನ್ನು ಕಾಣಬಹುದಾಗಿದೆ. ಅಂತಹ ಚಿತ್ರಗಳನ್ನು ಕ್ಯಾಂಡಿಡ್‌ ಗಳಂತೆ ಅತ್ಯುತ್ತಮವಾಗಿ ಕ್ಲಿಕ್ಕಿಸಬಹುದು.

Image result for samantha and naga chaitanya wedding

ನಿಮ್ಮ ಕನಸಿನ ಸ್ಥಳವನ್ನು ಆಯ್ಕೆಮಾಡಿ

ಮದುವೆಯೆಂಬುದು ಎಂದು ಮರೆಯಾಗದ ಕ್ಷಣ. ಅದನ್ನು ಇನ್ನಷ್ಟು ಸುಂದರವಾಗಿ ಮಾಡಲು ನಿಮ್ಮ ಕನಸಿನ ಸ್ಥಳವನ್ನು ಆಯ್ಕೆಮಾಡಿಕೊಳ್ಳಿ. ಏಕೆಂದರೆ ಮದುವೆಯಾಗುವ ಪ್ರತಿಯೊಬ್ಬ ಹುಡುಗ ಹುಡುಗಿಯರು ನಮ್ಮ ಮದುವೆ ಅಲ್ಲಿ ನಡೆಯಬೇಕು, ಇಲ್ಲಿ ನಡೆಯಬೇಕು ಎಂಬ ಕನಸ್ಸನ್ನು ಹೊತ್ತಿಕೊಂಡಿರುತ್ತಾರೆ ಅದರಂತೆ ನಿಮ್ಮ ನೆಚ್ಚಿನ ಸ್ಥಳಗಳಲ್ಲಿ ನಿಮ್ಮ ಭಾವಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳಿ.Image result for samantha and naga chaitanya wedding

ಖಾಸಗಿ ಕ್ಷಣಗಳು

ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುಂಚೆಯೇ ಫೋಟೊಶೂಟ್ ಮಾಡಿಸುವುದು ಹಾಗೂ ಮದುವೆಯಾದ ಮೇಲೆ ಫೋಟೊಶೂಟ್ ಮಾಡಿಸುವುದು ಸಾಮಾನ್ಯವಾಗಿದೆ. ಅದರಲ್ಲೂ ದಂಪತಿ ತಮ್ಮ ಏಕಾಂತದ ಸಮಯವನ್ನು ಒಟ್ಟಾಗಿ ಕಳೆಯುವ ಅವಕಾಶವಿರುತ್ತದೆ. ಆಗ ಫೋಟೊಗ್ರಾಪರ್, ನೀವು ಪರಸ್ಪರ ಸ್ವಲ್ಪ ದೂರ ಓಡಾಡುವುದು, ಪರಸ್ಪರ ಕೈಯನ್ನು ಹಿಡಿದುಕೊಂಡು ಓಡಾಡುವುದನ್ನು ಕ್ಯಾಮೆರಾ ಕಣ್ಣಲ್ಲಿ ಕ್ಲಿಕ್ಕಿಸಿಬೇಕು.Related image

ವಿಶೇಷ ಶಾಟ್

ಮದುವೆ ಎಂದರೇ ಅದು ವಿಶೇಷ. ಅದರಲ್ಲಿ ಪತಿ ತನ್ನ ಹೆಂಡತಿಗೆ ಮೊದಲ ಬಾರಿಗೆ ಹಣೆಗೆ ಸಿಂಧೂರ ಇಡುವ ಕ್ಷಣವನ್ನು ಬಣ್ಣಿಸಲು ಸಾಧ್ಯವಿರುವುದಿಲ್ಲ. ಆ ವಿಶೇಷ ಕ್ಷಣವನ್ನು ಕಣ್ತುಂಬಿಕೊಳ್ಳುವುದೇ ಒಂದು ಸುಂದರ. ಈ ಕ್ಷಣದಲ್ಲಿಯೇ ಇವರು ನನ್ನ ಪತ್ನಿ, ಇವರು ನನ್ನ ಪತಿಯೆಂದು ಎಂದು ಮನಸ್ಸಿನಲ್ಲಿ ಗುರುತಿಸಿಕೊಳ್ಳುತ್ತಾಳೆ. ಆದ ಕಾರಣ ಮದುವೆಯಲ್ಲಿ ಇಂತಹ ವಿಶೇಷ ಕ್ಷಣವನ್ನು ಸೆರೆಹಿಡಿಯಲು ನಿಮ್ಮ ಫೋಟೊಗ್ರಾಫರ್ ಗೆ ಸಲಹೆಯನ್ನು ನೀಡಿರಿ.Image result for samantha and naga chaitanya wedding

ಭಾವನಾತ್ಮಕ ಶಾಟ್

ಇನ್ನೇನು ಮದುವೆ ಮುಗಿಯುತ್ತಿದೆ ಎನ್ನುವಷ್ಟರಲ್ಲಿ ವಧು ತನ್ನ ತಂದೆ ತಾಯಿ ಕುಟುಂಬದವರನ್ನು ಬಿಟ್ಟು ಗಂಡನ ಮನೆಗೆ ಹೋಗುವ ಸಮಯ. ಆಗ ನಡೆಯುವ ಸಂದರ್ಭವನ್ನು ಬಣ್ಣಿಸಲು ಸಾಧ್ಯವಾಗುವುದಿಲ್ಲ. ಎಲ್ಲರ ಕಣ್ಣಿನ ತುದಿಯಲ್ಲಿ ಕಣ್ಣೀರು. ಹೇಳಲಾಗದಷ್ಟು ಮಾತುಗಳು. ಎಲ್ಲವೂ ಭಾವನಾತ್ಮಕ ಭಾವನೆಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಲು ಪ್ರಯತ್ನಿಸಿರಿ. Image result for samantha crying in her wedding

ಹಳದಿ ಬಣ್ಣದ ಉಡುಪುಗಳಿಗೆ ಈಗ ಭಾರೀ ಡಿಮ್ಯಾಂಡ್…!!!

ಸಮಂತಾ ಬಗ್ಗೆ ಈ ರೂಮರ್ ಮತ್ತೆ ಕೇಳಿ ಬಂತು!

#marriagephotography #wedding #weddingphotography #weddingtheme

Tags