ಆರೋಗ್ಯಆಹಾರಜೀವನ ಶೈಲಿ

ತೂಕ ಇಳಿಸುವ ಪಾಲಾಕ್ ಸೊಪ್ಪಿನ ಆರೋಗ್ಯ ಪುರಾಣ

ಸಸ್ಯಾಹಾರಿಗಳ ಸಂಜೀವಿನಿ ಎಂದು ಕರೆಯಲ್ಪಡುವ ಪಾಲಾಕ್ ಸೊಪ್ಪಿನಲ್ಲಿ ಬಹಳಷ್ಟು ಉಪಯೋಗಕಾರಿ ಅಂಶಗಳಿವೆ. ನಮ್ಮ ದೇಹದ ಆರೋಗ್ಯವನ್ನು ಸಧೃಡವಾಗಿಟ್ಟುಕೊಳ್ಳಲು ಪಾಲಾಕ್ ಸೊಪ್ಪು ಬಹಳ ಪ್ರಯೋಜನಕಾರಿ ಎನ್ನಲಾಗಿದೆ. ಇಂತಹ ಬಹುಉಪಯೋಗಿ ಪಾಲಾಕ್ ಸೊಪ್ಪಿನ ಬಗ್ಗೆ ಕೆಲವೊಂದಿಷ್ಟು ಮಾಹಿತಿ ನಿಮಗಾಗಿ.Image result for ಪಾಲಕ್ ಸೊಪ್ಪಿನಇತ್ತೀಚಿನ ಪೀಳಿಗೆಯಲ್ಲಿ ತಲೆನೋವಿನ ಸಮಸ್ಯೆಯಾಗಿರುವ ತೂಕ ಇಳಿಸುವಿಕೆಗೆ  ಉತ್ತಮ ಪರಿಹಾರ ಪಾಲಾಕ್ ಸೊಪ್ಪಾಗಿದೆ. ಹೌದು, ಪಾಲಾಕ್ ಸೇವನೆಯಿಂದ ನಿಮ್ಮ ಚಯಾಪಚಯ ಕ್ರಿಯೆ ಸುಲಭವಾಗಿ ಆಗಲು ಸಹಾಯಕಾರಿಯಾಗಿದ್ದು, ನಿಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸುತ್ತದೆ. ಪಾಲಾಕ್ ಸೊಪ್ಪಿನ ಸೇವನೆಯ ಜೊತೆಗೆ ವ್ಯಾಯಾಮ ಮಾಡುವುದನ್ನು ಮಾತ್ರ ಮರೆಯಬೇಡಿ.

ಪಾಲಾಕನನ್ನು ತಿನ್ನುವುದರಿಂದ ಹೃದಯಾಘಾತವಾಗುವ ಸಾಧ್ಯತೆಗಳನ್ನು ಬಹುತೇಕ ಕಡಿಮೆ ಮಾಡಬಹುದು ಎಂದು ವೈಜ್ಞಾನಿಕ ಸಂಶೋಧನೆ ತಿಳಿಸುತ್ತದೆ.

ಮಧುಮೇಹದಿಂದ ಬಳಲುತ್ತಿರುವವರಿಗೆ ಪಾಲಾಕ್ ಉತ್ತಮ ಮನೆಮದ್ದು ಎಂದು ತಿಳಿದುಬಂದಿದೆ.

Image result for Weight Loss best solutions Palak Greens

ಮಲಬದ್ದತೆಯಿಂದ ಬಳಲುತ್ತಿರುವವರು ಹಾಗೂ ಮಲಬದ್ಧತೆಯ ಚಿಕಿತ್ಸೆಯಲ್ಲಿರುವವರು ಪಾಲಾಕ್ ಸೇವನೆ ಮಾಡುವುದು ಬಹಳ ಉತ್ತಮ ಎನ್ನಲಾಗಿದೆ.

ಪಾಲಾಕ್ ನಮ್ಮ ಚರ್ಮದಲ್ಲಿನ ಸುಕ್ಕುಗಳನ್ನು ತಡೆಗಟ್ಟುತ್ತದೆ. ಸುಂದರವಾದ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಇಚ್ಛಿಸುವ ಜನರು ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಪಾಲಕ್ ರಸವನ್ನು ಕುಡಿಯಲು ತಿಳಿಸಬೇಕು.

ನಮ್ಮ ಬಾಯಿಯ ಹಲ್ಲುಗಳನ್ನು ಬಲಪಡಿಸುವ ಕ್ಯಾಲ್ಸಿಯಂ ಅಂಶ ಪಾಲಾಕ್ ಸೊಪ್ಪಿನಲ್ಲಿದೆ. ಆದ್ದರಿಂದ ಆರೋಗ್ಯಕರ ಮತ್ತು ಬಿಳಿ ಹಲ್ಲುಗಳನ್ನು ಪಡೆಯುವಲ್ಲಿ ನಿಮ್ಮ ದೈನ ದಿನ ಆಹಾರದಲ್ಲಿ ಪಾಲಾಕ್ ಸೇರಿಸಿ.

ಪಾಲಾಕ್ ಸೊಪ್ಪು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಪಾಲಾಕ್ ಸೊಪ್ಪು ಸೇವನೆ ಮಾಡುತ್ತಾ ಹೋದರೆ, ಕ್ಯಾನ್ಸರ್ ಉತ್ತೇಜಿಸುವ ಅಣುಗಳ ಪ್ರಮಾಣವನ್ನು ಕಡಿಮೆ ಮಾಡಿ, ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.

ಪಾಲಾಕ್ ತಿನ್ನುವುದರಿಂದ ನಮ್ಮ ಕಣ್ಣುಗಳ ಆರೋಗ್ಯಕ್ಕೂ ಹಾಗೂ ನಮ್ಮ ಮೆದುಳಿನ ಚಟುವಟಿಕೆಗೆ ಸಹಕಾರಿಯಾಗಿದೆ.

 

ಹಳದಿ ಬಣ್ಣದ ಉಡುಪುಗಳಿಗೆ ಈಗ ಭಾರೀ ಡಿಮ್ಯಾಂಡ್…!!!

ಮೊದಲ ಚಿತ್ರದಲ್ಲೇ ಹವಾ ಸೃಷ್ಟಿಸಿದ ಕ್ರೇಜಿಸ್ಟಾರ್ ಕಿರಿಯ ಪುತ್ರ…!!!

 

#balkaninews #food #palak #palaksoppu #palaksamber #palakplant #healthybenefits

Tags