ಆರೋಗ್ಯಆಹಾರಜೀವನ ಶೈಲಿಸೌಂದರ್ಯ

ತೂಕ ನಷ್ಟಕ್ಕೆ ಬೆಸ್ಟ್ ಬೆಳ್ಳುಳ್ಳಿ ಹಾಗೂ ಜೇನುತುಪ್ಪ

ಇತ್ತೀಚಿನ ದಿನಗಳಲ್ಲಿ ತೂಕವನ್ನು ಕಳೆದುಕೊಳ್ಳುವುದು ಬಹಳ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತೂಕ ನಷ್ಟಕ್ಕಾಗಿ ಬಹಳಷ್ಟು ಕಸರತ್ತುಗಳನ್ನು ಮಾಡಬೇಕಾಗುತ್ತದೆ. ಇದರ ಸಲುವಾಗಿ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿಯೇ ನಾವಿಂದು ಕೆಲವು ಮನೆಮದ್ದುಗಳ ಸಲಹೆಯನ್ನು ನೀಡುತ್ತಿದ್ದೇವೆ.

ನಿಮ್ಮ  ಮನೆಯಲ್ಲಿರುವ ಜೇನುತುಪ್ಪ ಮತ್ತು ಬೆಳ್ಳುಳ್ಳಿಯಿಂದ ನಿಮ್ಮ ತೂಕವನ್ನು ಬಹಳ ಬೇಗ ಕಡಿಮೆ ಮಾಡಿಕೊಳ್ಳಬಹುದು.

ಹೌದು, ಜೇನುತುಪ್ಪ ಮತ್ತು ಬೆಳ್ಳುಳ್ಳಿಯ ಸೇವನೆ ಮಾಡುವುದರಿಂದ ಹೆಚ್ಚಾಗಿ ಹಸಿವನ್ನುಂಟು ಮಾಡುವುದಿಲ್ಲ. ಆದರೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಿದರೆ ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.ಸ್ವಲ್ಪ ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಹಾಕಿಕೊಳ್ಳಿ. ಬಳಿಕ ಈ ಮಿಶ್ರಣವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಒಂದು ಡಬ್ಬಿಯಲ್ಲಿ ಶೇಖರಣೆ ಮಾಡಿಟ್ಟುಕೊಳ್ಳಿ. ಇದನ್ನು ನೀವು ಫ್ರಿಡ್ಜ್ ನಲ್ಲಿಯೂ ಸಹ ಇಟ್ಟು ಸೇವಿಸಬಹುದಾಗಿದೆ.

ಪ್ರತಿನಿತ್ಯ ಬೆಳ್ಳಿಗ್ಗೆ ಎದ್ದ ತಕ್ಷಣ ನೀವು ಜೇನುತುಪ್ಪ ಹಾಗೂ ಬೆಳ್ಳುಳ್ಳಿಯ ಮಿಶ್ರಣವನ್ನು ದಿನಕೊಂದು ಎಂಬತೆ ಒಂದೊಂದು ತಿನ್ನುತ್ತಾ ಬಂದರೆ, ಶೀಘ್ರದಲ್ಲಿಯೇ ನಿಮ್ಮ ದೇಹದಲ್ಲಾಗುವ ಚಮತ್ಕಾರಿಯನ್ನು ಕಾಣಬಹುದಾಗಿದೆ.

ಮನೆಯಲ್ಲಿಯೇ ಪೆಡಿಕ್ಯೂರ್ ಮಾಡುವುದು ಹೇಗೆ ಗೊತ್ತೆ…?

 

Tags