ಆರೋಗ್ಯಆಹಾರಜೀವನ ಶೈಲಿ

ಪ್ಲಾಸ್ಟಿಕ್ ಕಪ್ ನಲ್ಲಿ ಕುಡಿಯುವ ಮೊದಲು ಇದನ್ನು ಓದಿ!

ಬೆಳಿಗ್ಗಿನ ದಿನಚರಿ ಆರಂಭವಾಗುವುದು ಒಂದು ಲೋಟ ಬಿಸಿಬಿಸಿ ಕಾಫಿ ಅಥವಾ ಚಹಾ ಕುಡಿದ ಮೇಲೆಯೇ! ಮನಸ್ಸಿಗೆ ಹಾಯ್ ಎನಿಸುವ ಕಾಫಿ, ಚಹಾವನ್ನು ಬೆಳಗ್ಗೆ ಮಾತ್ರವಲ್ಲದ ಕೆಲಸದ ಒತ್ತಡದ ನಡುವೆ ರಿಲ್ಯಾಕ್ಸ್ ಆಗಲು ಕುಡಿಯುತ್ತಾರೆ. ಅಂದರೆ ಒತ್ತಡವನ್ನು ಕಡಿಮೆ ಮಾಡಲು ಪದೇ ಪದೇ ಕಾಫಿ, ಟೀ ಕುಡಿಯುತ್ತಿರುತ್ತಾರೆ.

ಆದರೆ ಆಫೀಸ್ ನಲ್ಲಿ ಕಾಫಿ, ಚಹಾ ಕುಡಿಯುವುದು ಪೇಪರ್ ಕಪ್ ನಲ್ಲಿ! ಪೇಪರ್ ನಂತೆ ಕಾಣುವ ಕಪ್ ಗಳನ್ನು  ಪಾಲಿಯೆಸ್ಟರ್‌ ಗಳಿಂದ ತಯಾರಿಸಲಾಗುತ್ತದೆ. ಇವು ಅತ್ಯಂತ ಹಾನಿಕಾರಕ. ಅದು ಹೇಗೆಂದರೆ ಈ ಕಪ್ ಗೆ ಬಿಸಿ ಚಹಾವನ್ನು ಹಾಕಿದಾಗ ಅದರಲ್ಲಿನ ಕೆಲವು ಹಾನಿಕಾರಕ ಅಂಶಗಳು ಚಹಾಕ್ಕೆ ಸೇರುವ ಸಾಧ್ಯತೆ ಅಧಿಕವಾಗಿದೆ. ಅವುಗಳಿಂದ ಹಾಯಾಸ, ಹಾರ್ಮೋನುಗಳ ಏರುಪೇರು ಮುಂತಾದ ಸಮಸ್ಯೆ ಬರುತ್ತದೆ.

Image result for plastic cups for tea and coffee

ಅಲ್ಲದ ಥರ್ಮೋಕೋಲ್ ಕಪ್ ನಲ್ಲಿ ಚಹಾವನ್ನು ಕುಡಿಯುತ್ತಿದ್ದರೆ, ಚರ್ಮದ ಸೋಂಕು ಕಾಡುವ ಸಂಭವ ಹೆಚ್ಚು! ಅಂದರೆ ಇದರಿಂದ ಚರ್ಮದ ಮೇಲೆ ಕೆಂಪು ಕಲೆಗಳು, ತುರಿಕೆ ಕಾಣಿಸಿಕೊಳ್ಳುತ್ತದೆ. ಮಾತ್ರವಲ್ಲ, ಥರ್ಮೋಕೋಲ್ ಕಪ್ ನಿಯಮಿತವಾಗಿ ಬಳಸುವುದರಿಂದ ಹೊಟ್ಟೆಯ ಸಮಸ್ಯೆಯೂ ಬರಬಹುದು.

ಪ್ಲಾಸ್ಟಿಕ್ ಕಪ್ ನಲ್ಲಿ ಬಿಸಿ ಬಿಸಿ ಕಾಫಿ ಅಥವಾ ಟೀ ಕುಡಿಯುವುದರಿಂದ ಕರಳು ಸೋಂಕು ಹರಡುವ ಸಾಧ್ಯತೆ ಇರುತ್ತದೆ.

ಇಷ್ಟೇ ಅಲ್ಲದೇ ಕಪ್ ಗಳಲ್ಲಿ ಟೀ ಸೇವನೆ ಮಾಡುವುದರಿಂದ ನಮ್ಮ ಚರ್ಮದ ಮೇಲೆ ಕಲೆಗಳು ಮೂಡುವ ಸಾಧ್ಯತೆ ಇರುತ್ತದೆ.

Image result for plastic cups for tea and coffee

ಪಾದಗಳ ಸೌಂದರ್ಯಕ್ಕೆ ‘ಐಸ್‍ಕ್ರೀಮ್ ಪೆಡಿಕ್ಯೂರ್’

#balkaninews #teacups #plasticcups #plasticcupsdisadvantages

Tags