ಆರೋಗ್ಯಆಹಾರಜೀವನ ಶೈಲಿ

ವಿಟಮಿನ್ ಸೊಪ್ಪು ತಂಬುಳಿ ತಿನ್ನಿ, ಆರೋಗ್ಯ ಪಡೆಯಿರಿ.

ವಿಟಮಿನ್ ಸೊಪ್ಪು ಹೆಸರೇ ಸೂಚಿಸುವಂತೆ ಹೇರಳ ಪೋಷಕಾಂಶಗಳನ್ನು ತನ್ನೊಳಗೆ ಹುದುಗಿಕೊಂಡಿರುವ ಸೊಪ್ಪು. ಚಕ್ರಮುನಿ ಎಂದು ಕರೆಯಲ್ಪಡುವ ಇದು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಹೆಚ್ಚಿನ ಆರೈಕೆಯಿಲ್ಲದೆ ಬೆಳೆಯುವ ಈ ಸಸ್ಯವನ್ನು ಮನೆಯ ಹಿತ್ತಲಲ್ಲಿ ಬೆಳೆಸಬಹುದು. ಅಲ್ಲದೇ ಇದರ ಎಲೆ, ಚಿಗುರು, ಕಾಂಡವನ್ನು ಅಡುಗೆಯಲ್ಲಿ ಬಳಸುತ್ತಾರೆ. ಆರೋಗ್ಯ ವೃದ್ಧಿಸುವ ವಿಟಮಿನ್ ಸೊಪ್ಪಿನ ಸೇವನೆ ಗರ್ಭಿಣಿ, ಬಾಣಂತಿ ಮತ್ತು ಮಕ್ಕಳ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಇಂತಿಪ್ಪ ವಿಟಮಿನ್ ಸೊಪ್ಪಿನಿಂದ ತಂಬುಳಿ ತಯಾರಿಸಲು ಸಾಧ್ಯ.

ಬೇಕಾಗುವ ಸಾಮಗ್ರಿ: ವಿಟಮಿನ್ ಸೊಪ್ಪು 2 ಕಪ್, ಕಾಯಿತುರಿ 1/2 ಕಪ್, ಸಿಹಿಮಜ್ಜಿಗೆ 1 ಕಪ್, ತುಪ್ಪ 1 ಚಮಚ, ಜೀರಿಗೆ 1/2 ಚಮಚ, ಕಾಳುಮೆಣಸು 5, ಉಪ್ಪು ರುಚಿಗೆ ತಕ್ಕಷ್ಟು.

ಮೊದಲಿಗೆ ವಿಟಮಿನ್ ಸೊಪ್ಪನ್ನು ತುಪ್ಪದಲ್ಲಿ ಹುರಿಯಿರಿ. ನಂತರ ಕಾಳುಮೆಣಸು ಮತ್ತು ಜೀರಿಗೆಯನ್ನೂ ಹುರಿದು ಕಾಯಿತುರಿಯೊಂದಿಗೆ ಉಪ್ಪು ಹಾಕಿ ಎಲ್ಲವನ್ನು ನುಣ್ಣಗೆ ರುಬ್ಬಿ. ನಂತರ ಮಜ್ಜಿಗೆ ಬೆರೆಸಿ ತೆಳ್ಳಗೆ ಮಾಡಿದರೆ ಸಾಕು, ರುಚಿರುಚಿಯಾದ ವಿಟಮಿನ್ ಸೊಪ್ಪು ತಂಬುಳಿ ಸವಿಯಲು ಸಿದ್ಧ. ಇದನ್ನು  ಊಟದ ಜೊತೆಗೆ ಬಳಸಬಹುದು.

Image result for what are the advantages of chakramuni soppu

ನಿಂಬೆ ಕಷಾಯ ಕುಡಿದಿದ್ದೀರಾ?

#balkaninews #vitaminsoppu #vitamins #soppu

Tags