ಆಹಾರಜೀವನ ಶೈಲಿಫ್ಯಾಷನ್ಸೌಂದರ್ಯ

ಸೌಂದರ್ಯವರ್ಧಕ ಕಿವಿ ಹಣ್ಣು

ಮೂಲತಃ ವಿದೇಶದ ಹಣ್ಣು ಎಂದೇ ಕರೆಸಿಕೊಳ್ಳುವ ಕಿವಿ ಹಣ್ಣು ಖನಿಜಾಂಶಗಳ ಆಗರವೇ ಹೌದು. ಪೋಷಕಾಂಶಗಳು ಹೇರಳವಾಗಿರುವ ಕಿವಿ ಹಣ್ಣು ಸೌಂದರ್ಯವರ್ಧಕವೂ ಹೌದು. ಇದರಿಂದಲೂ ಫೇಸ್ ಮಾಸ್ಕ್ ತಯಾರಿಸಬಹುದು. ಕಿವಿ ಹಣ್ಣಿನಲ್ಲಿ ಅಗಾಧ ಪ್ರಮಾಣದಲ್ಲಿರುವ ವಿಟಮಿನ್ನುಗಳು ಮತ್ತು ಪ್ರೋಟೀನುಗಳು ಚರ್ಮವನ್ನು ಮೃದುವಾಗಿಡುತ್ತದೆ. ಜೊತೆಗೆ ಚರ್ಮದ ಕಾಂತಿಯನ್ನು ಕೂಡಾ ಇದು ಹೆಚ್ಚಿಸುತ್ತದೆ.

Image result for ಕಿವಿ ಹಣ್ಣುಇದೀಗ ಕಿವಿ ಹಣ್ಣಿನ ಫೇಸ್ ಮಾಸ್ಕ್ ತಯಾರಿಸುವ ಬಗೆಯನ್ನು ತಿಳಿಯೋಣ.

ಕಿವಿ ಹಣ್ಣು ಮತ್ತು ಬಾದಾಮಿಯ ಸಹಾಯದಿಂದ ಅದ್ಭುತವಾದ ಫೇಸ್ ಮಾಸ್ಕ್ ತಯಾರಿಸಬಹುದು. ಯಾಕೆಂದರೆ ಕಿವಿ ಮತ್ತು ಬಾದಾಮಿಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದೆ. ಇದು ಚರ್ಮ ಮೃದುವಾಗಲು ಸಹಕಾರಿ.

ಆರರಿಂದ ಎಂಟು ಬಾದಾಮಿಗಳನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಅರ್ಧ ಕಿವಿಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ ಲೇಪ ತಯಾರಿಸಿಟ್ಟುಕೊಳ್ಳಬೇಕು. ನಂತರ ಕಿವಿ ಮತ್ತು  ನೆನೆಸಿದ ಬಾದಾಮಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಕಡೆಯಿರಿ. ನಂತರ ಇದಕ್ಕೆ ಮೂರರಿಂದ ನಾಲ್ಕು ಚಿಕ್ಕ ಚಮಚ ಕಿವಿಹಣ್ಣಿನ ಲೇಪವನ್ನು ಮಿಶ್ರಣ ಮಾಡಬೇಕು.

ಹೀಗೆ ತಯಾರಿಸಿದ ಮಿಶ್ರಣವನ್ನು ಮುಖಕ್ಕೆ ತೆಳುವಾಗಿ ಹಚ್ಚಿಕೊಂಡರೆ ಆಯಿತು. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

Image result for ಕಿವಿ ಹಣ್ಣು

ಬಹುಬೇಗನೇ ಮದರಂಗಿ ತೆಗೆಯುವುದು ಹೇಗೆ?

#balkaninews #kiwifruit #kiwifruitimages #kiwifruitplant #kiwifruitadvantages #kiwifruitbeautybenefits #facepack #facemask

Tags