ಜೀವನ ಶೈಲಿಫ್ಯಾಷನ್ಸೌಂದರ್ಯ

ಕೋಮಲವಾದ ತುಟಿಗಳ ಅಂದಕ್ಕೆ ಮಾಡಿ ನೋಡಿ ಸಕ್ಕರೆ ಸ್ಕ್ರಬ್

ಸಿಹಿ ಸ್ವಾದದ ವಿಶೇಷ ಗುಣ ಹೊಂದಿರುವ ಸಕ್ಕರೆ ಇಲ್ಲದೇ ನಾವಿರಲು ಸಾಧ್ಯವೇ ಇಲ್ಲ. ಒಂದರ್ಥದಲ್ಲಿ ನಮ್ಮ ಬೆಳಗ್ಗೆ ಶುರುವಾಗುವುದು ಸಕ್ಕರೆಯಿಂದಲೇ ಎಂದು ಹೇಳಬಹುದು. ಹೇಗಂತೀರಾ? ಬೆಳ್ಳಂ ಬೆಳಗ್ಗೆ ನಾವು ಕುಡಿಯುವ ಬಿಸಿ ಬಿಸಿಯಾದ ಚಹಾ ಅಥವಾ ಕಾಫಿಗೆ ಒಂದು ಚಮಚ ಸಕ್ಕರೆ ಬಿದ್ದರೇನೆ ಅದರ ಚೆಂದ… ಸಕ್ಕರೆ ಹಾಕಿದ ರುಚಿರುಚಿಯಾದ ಕಾಫಿ ಅಥವಾ ಚಹಾ ಕುಡಿಯುತ್ತಿದ್ದರೆ ಆಗುವ ಆನಂದವೇ ಬೇರೆ!

ಇಂತಿಪ್ಪ ಸಕ್ಕರೆಯನ್ನು ಸೌಂದರ್ಯವರ್ಧಕ ವನ್ನಾಗಿ ಬಳಸಬಹುದು ಎಂಬುದನ್ನು ನಾವು ಈಗಾಗಲೇ ತಿಳಿದಿದ್ದೇವೆ. ಅಂತೆಯೇ ಸೌಂದರ್ಯದ ಜೊತೆಗೆ ತುಟಿಗಳ ಆರೋಗ್ಯಕ್ಕೂ ಕೂಡಾ ಸಕ್ಕರೆಯನ್ನು ಬಳಸಬಹುದು. ಹೌದು, ತುಟಿಗಳ ಆರೋಗ್ಯ ಕಾಪಾಡುವ ಸಲುವಾಗಿ ನೀವು ಸಕ್ಕರೆಯ ಸ್ಕ್ರಬ್ ಬಳಸಬಹುದು. Related imageಸಕ್ಕರೆಯಿಂದ ತಯಾರಿಸಿದ ಸ್ಕ್ರಬ್ ತುಟಿಯಲಿರುವ ನಿರ್ಜೀವ ಕೋಶಗಳನ್ನು ನಿರ್ಮೂಲನೆ ಮಾಡಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಆರೋಗ್ಯಕರ ತುಟಿಯನ್ನು ಕೂಡಾ ನೀವು ಪಡೆಯಲು ಸಾಧ್ಯ.

ಒಂದು ಚಮಚ ಸಕ್ಕರೆಗೆ ಒಂದು ಚಮಚ ಆಲೀವ್ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ನಿಮ್ಮ ತುಟಿಗಳ ಮೇಲೆ ಹಚ್ಚಿಕೊಳ್ಳಬೇಕು. ನಂತರ ಟೂತ್ ಪೇಸ್ಟ್ ಸಹಾಯದಿಂದ ಇದನ್ನು ಸ್ಕ್ರಬ್ ಮಾಡಿ. ಕೋಮಲವಾದ ತುಟಿ ಪಡೆಯಿರಿ.

ಹೆಣ್ಮಕ್ಕಳ ಅಂದವನ್ನು ದ್ವಿಗುಣಗೊಳಿಸುತ್ತದೆ ಈ ಬಟ್ಟೆ ಆಭರಣ

#balkaninews #beautytips #healthytips #lipscrub #scrub #sugarscrub

Tags