ಆರೋಗ್ಯಆಹಾರಜೀವನ ಶೈಲಿ

ಸೌತೆಕಾಯಿ ಲಸ್ಸಿ ಬಗ್ಗೆ ನಿಮಗೆ ಗೊತ್ತೇ?

ಆರೋಗ್ಯ ವೃದ್ಧಿಸುವ ಸೌತೆಕಾಯಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಸೌತೆಕಾಯಿಯಿಂದ ಲಸ್ಸಿಯನ್ನು ತಯಾರಿಸಬಹುದೇ? ಹೌದು, ಒಂದು ಕ್ಷಣ ಕೇಳುವಾಗ ವಿಚಿತ್ರ ಎಂದೇನಿಸಿದರೂ ನಿಮಗೆ ದೊರಕುವ ಉತ್ತರ ಹೌದು. ಯಾಕೆಂದರೆ ಸೌತೆಕಾಯಿಯಿಂದಲೂ ಲಸ್ಸಿ ತಯಾರಿಸಲು ಸಾಧ್ಯ‌.

ಸೌತೆಕಾಯಿ ಲಸ್ಸಿ ತಯಾರಿಸಲು ಬೇಕಾಗುವ ಸಾಮಗ್ರಿಗಳು:

ಒಂದು ಸೌತೆಕಾಯಿ ತುರಿದಿದ್ದು

ಒಂದು ಬಟ್ಟಲು ಮೊಸರು

ಹಸಿಮೆಣಸಿನಕಾಯಿ – ಒಂದು

ಕೊತ್ತಂಬರಿ ಸೊಪ್ಪು ಹೆಚ್ಚಿದ್ದು ಸ್ವಲ್ಪ

ಜೀರಿಗೆ ಕಾಲು ಚಮಚ

ಉಪ್ಪು ರುಚಿಗೆ ತಕ್ಕಷ್ಟು

ಮೇಲೆ ತಿಳಿಸಿರುವಂತಹ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿದರೆ ಆಯಿತು, ರುಚಿರುಚಿಯಾದ ಸೌತೆಕಾಯಿ ಸವಿಯಲು ಸಿದ್ಧ. ಜೊತೆಗೆ ಇದು ಉತ್ತಮ ಆರೋಗ್ಯಕ್ಕೂ ಒಳ್ಳೆಯದು.

ಲಲನೆಯರ ಮೇಕಪ್ ಕಿಟ್ ನಲ್ಲಿ ಏನೇನಿದ್ದರೆ ಚಂದ

#balkaninews #cucumber #cucumberlassi #lassi #images

Tags