ಆರೋಗ್ಯಆಹಾರಜೀವನ ಶೈಲಿ

ಕೂದಲಿನ ಪೋಷಣೆಗೆ ಬಳಸಿ ಸೀಗೆಕಾಯಿ

ಪ್ರಾಚೀನ ಕಾಲದಿಂದಲೂ ಕೇಶದ ಆರೋಗ್ಯಕ್ಕೆ ಬಳಸುವ ಸೀಗೆಕಾಯಿಯನ್ನು ತಿಳಿಯದರವರಿಲ್ಲ. ಹಳ್ಳಿಯ ಕಡೆಗಳಲ್ಲಿ ಸೀಗೆಕಾಯಿ ಇಲ್ಲದೇ ತಲೆಗೆ ಸ್ನಾನ ಮಾಡುತ್ತಲೇ ಇರಲಿಲ್ಲ. ತಲೆಗೆ ಸ್ನಾನ ಮಾಡುತ್ತಾರೆ ಎಂದರೆ ಅಲ್ಲಿ ಸೀಗೆಕಾಯಿ ರೆಡಿ ಬೇಕು.

Image result for shikakai

ಕೂದಲಿನ ಶುದ್ಧತೆಯನ್ನು ಹೆಚ್ಚಿಸುವ ಸೀಗೆಕಾಯಿಯು ಕೋಮಲವಾದ ಕೂದಲಿಗೆ ಅಗತ್ಯವಿರುವಂತಹ ಪೋಷಕಾಂಶಗಳನ್ನು ನೀಡುತ್ತದೆ.

ಕೂದಲು ಉದುರುವ ಸಮಸ್ಯೆ ಇರುವವರು ನಿಶ್ಚಿಂತೆಯಿಂದ ಸೀಗೆಕಾಯಿಯನ್ನು ಬಳಸಬಹುದು. ಸೀಗೆಕಾಯಿ ಬಳಸುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಇದರ ಜೊತೆಗೆ ನಿಮ್ಮ ಕೂದಲನ್ನು ಸದೃಢಗೊಳಿಸುವ ಶಕ್ತಿ ಸೀಗೆಕಾಯಿಗಿದೆ.

ಸೀಗೆಕಾಯಿಯನ್ನು ಯಾರು ಬೇಕಾದರೂ ಬಳಸಬಹುದು. ಯಾಕಂತೀರಾ? ಸೀಗೆಕಾಯಿಯಲ್ಲಿ ಕಡಿಮೆ ಪ್ರಮಾಣದ ಆಮ್ಲೀಯತೆ ಇದೆ. ಆದ ಕಾರಣ ಇದನ್ನು ಬಳಸುವಾಗ ಭಯಪಡಬೇಕು ಎಂದೇನಿಲ್ಲ.

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನು ಕಾಡುವ ಬಹುದೊಡ್ಡ ಸಮಸ್ಯೆ ಎಂದರೆ ತಲೆಹೊಟ್ಟು. ಆದರೆ ಸೀಗೆಕಾಯಿಯಲ್ಲಿ ತಲೆಹೊಟ್ಟು ನಿವಾರಿಸುವ ಶಕ್ತಿ ಇದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಸೀಗೆಕಾಯಿಯಲ್ಲಿ ಸಿ ಮತ್ತು ಡಿ ಜೀವಸತ್ವಗಳು ಹೇರಳವಾಗಿದ್ದು  ಕೂದಲಿಗೆ ಅಗತ್ಯವಿರುವಂತಹ ಪೋಷಣೆಯನ್ನು ಇದು ನೀಡುತ್ತದೆ.

Image result for shikakai

ಕೈರಾಳನ್ನು ಈ ಡ್ರೆಸ್ ನಲ್ಲಿ ಕಂಡು ಬೋಲ್ಡ್ ಆದ ಅಭಿಮಾನಿಗಳು!

#shikakai #shikakaiadvantages #shikakaitree #shikakaibenefits #shikakaiforhair #balkaninews

Tags