ಆರೋಗ್ಯಜೀವನ ಶೈಲಿಫ್ಯಾಷನ್ಸೌಂದರ್ಯ

ಗೋಧಿ ಹಿಟ್ಟಿನ ಫೇಸ್ ಪ್ಯಾಕ್ ಬಗ್ಗೆ ನಿಮಗೆ ತಿಳಿದಿದೆಯಾ…?

ಭಾರತೀಯರ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದಾದ ಗೋಧಿ ಹಿಟ್ಟು ಸಾಕಷ್ಟು ಆರೋಗ್ಯಕರ ಗುಣಗಳನ್ನು ಒಳಗೊಂಡಿದೆ. ಚಪಾತಿ, ಪೂರಿಗೆ ಬಳಸಲ್ಪಡುವ ಗೋಧಿ ಹಿಟ್ಟನ್ನು ಸೌಂದರ್ಯಕ್ಕೂ ಬಳಸಬಹುದು ಎಂದರೆ ನಂಬಲು ಸಾಧ್ಯವೇ? ನಂಬಲೇ ಬೇಕು. ಇದರಲ್ಲಿ ಇರುವ ನಾರಿನಂಶ, ಜೀವಸತ್ವಗಳು ಹಾಗೂ ಪೋಷಕಾಂಶಗಳಿಂದ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು.

ಗೋಧಿ ಹಿಟ್ಟಿನ ಫೇಸ್ ಪ್ಯಾಕ್ ಮಾಡುವುದರಿಂದ ಚರ್ಮದಲ್ಲಿರುವ ಕೊಳೆಗಳ ನಿವಾರಣೆ ಮಾಡಬಹುದು. ತ್ವಚೆಗೆ ಅಗತ್ಯವಾದ ಹೊಳಪನ್ನು ಪಡೆದುಕೊಳ್ಳುವುದರ ಮೂಲಕ ಸೌಂದರ್ಯ ವೃದ್ಧಿಯಾಗುತ್ತದೆ. ನೈಸರ್ಗಿಕವಾದ ಫೇಸ್ ಪ್ಯಾಕ್ ನಿಂದ ಮುಖದ ಅಂದವನ್ನು ಹೆಚ್ಚಿಸಬಹುದು.

ಮುಖದಲ್ಲಿನ ಎಣ್ಣೆಯ ಅಂಶವನ್ನು ಹೀರಿಕೊಳ್ಳುವ ಗೋಧಿ ಹಿಟ್ಟಿನ  ಫೇಸ್ ಪ್ಯಾಕ್ ಅತ್ಯುತ್ತಮ ಪರಿಹಾರ. ಗೋಧಿ ಹಿಟ್ಟಿನ ಫೇಸ್ ಪ್ಯಾಕ್ ಮಾಡಲು ಕಷ್ಟವೇನಿಲ್ಲ. ನಾಲ್ಕು ಟೇಬಲ್ ಚಮಚದಷ್ಟು ಗೋಧಿ ಹಿಟ್ಟನ್ನು ಒಂದು ಬೌಲ್ ನಲ್ಲಿ ತೆಗೆದುಕೊಳ್ಳಿ. ನಂತರ ಅದಕ್ಕೆ  ಮೂರು ಟೀ ಚಮಚದಷ್ಟು ಹಾಲು ಮತ್ತು ಒಂದು ಟೇಬಲ್ ಚಮಚ ಗುಲಾಬಿ ನೀರನ್ನು ಸೇರಿಸಿ. ನಂತರ ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ತಣ್ಣೀರಿನಿಂದ ಸ್ವಚ್ಛಗೊಳಿಸಿ.

Related image

Image result for wheat flour face pack

ಹೂವು ಚೆಲುವೆಲ್ಲಾ ನಂದೆಂದಿತು

#balkaninews #facepack #wheatflour #wheatflourfacepack

 

Tags