ಜೀವನ ಶೈಲಿಫ್ಯಾಷನ್ಸುದ್ದಿಗಳುಸೌಂದರ್ಯ

ಫೋಟೋಗ್ರಫಿಯನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ‘ವಿಶ್ವ ಫೋಟೊಗ್ರಫಿ’ ದಿನದ ಶುಭಾಷಯಗಳು

ಇತ್ತೀಚಿನ ಯುವಪೀಳಿಗೆಯು ಹೆಚ್ಚಾಗಿ ಇಷ್ಟಪಡುತ್ತಿರುವ ಕ್ಷೇತ್ರವೆಂದರೇ ಅದು ಫೋಟೊಗ್ರಫಿ. ಸೃಜನಶೀಲತೆ, ಜೀವನೋತ್ಸಾಹ, ತಮ್ಮ ಜೀವನದಲ್ಲಿ ಯಾವುದಕ್ಕೂ ಎಲ್ಲೆ ಹಾಕಿಕೊಳ್ಳದೇ ನಮಗೆ ಇಷ್ಟಬಂದಂತೆ ನಾವಾಯ್ತು, ನಮ್ಮ ಕ್ಯಾಮೆರಾ ಆಯ್ತು ಎನ್ನುವಷ್ಟು ಕ್ರೇಜ್ ಹುಟ್ಟು ಹಾಕಿಸಿದೆ ಈ ಫೋಟೊಗ್ರಫಿ.Image result for world photography day 2019ಅದ್ಭುತ, ವಿಸ್ಮಯಗಳನ್ನು ಸೃಷ್ಟಿಸುವ ಫೋಟೋಗ್ರಫರ್ಸ್ ಹೆಚ್ಚು ಪ್ರಾಮುಖ್ಯತೆಯಿರುವ ಹಿನ್ನೆಲೆಯಲ್ಲಿ ಪ್ರತಿ ಆಗಸ್ಟ್ 19ರಂದು ವಿಶ್ವದಾದ್ಯಂತ ವಿಶ್ವ ಛಾಯಾಗ್ರಹಣ ದಿನವನ್ನು ಆಚರಣೆ ಮಾಡುತ್ತಾರೆ. ಈಗೀನ ಕಾಲದಲ್ಲಿ ಹೆಚ್ಚಾಗಿ ಪ್ರಾಮುಖ್ಯತೆ ಪಡೆದುಕೊಂಡಿರುವುದೆಂದರೇ, ಅದು ಫೋಟೊಗ್ರಫಿ.

ನಮ್ಮ ದೈನOದಿನ ಹಾಗೂ ಹೋಗುಗಳು, ವಿಸ್ಮಯಗಳು, ಜಾದುಗಳನ್ನು ಕ್ಲಿಕ್ಕಿಸುವ ಛಾಯಾಗ್ರಣನ ಜವಾಬ್ದಾರಿ ಸುಲಭವಾದುದಲ್ಲ. ಅಡ್ಡ ದಿಡ್ಡಿ, ಓಡಾಡಲು ಆಗದಿರುವ ಸ್ಥಳಗಳಿಗೆ ಭೇಟಿ ನೀಡಿ ಅದ್ಭುತವಾದ ಅಚ್ಚರಿಯುಂಟು ಮಾಡುವ ಫೋಟೊಗಳನ್ನು ಫೋಟೊ ಪ್ರಿಯರಿಗೆ ನೀಡುತ್ತಾರೆ.  Image result for world photography day 2019ಫೋಟೊ ಎಷ್ಟು ಮುಖ್ಯವೆಂದರೇ, ವಿಶ್ವದಾದ್ಯಂತ ಜನರು ತಮ್ಮ ಭಾವನೆಗಳನ್ನು ಸಂವಹನ ಮಾಡಬಹುದು ಮತ್ತು ನಮ್ಮ  ಭಾವನೆಯನ್ನು ವ್ಯಕ್ತಪಡಿಸಿಕೊಳ್ಳಬಹುದು. ಈಗೀನ ಪೀಳಿಗೆಯಲ್ಲಿ ಪ್ರತಿಯೊಬ್ಬರೂ ಕೂಡ ಫೋಟೊಗ್ರಫಿಯನ್ನು ಇಷ್ಟಪಡುತ್ತಾರೆ. ಇಷ್ಟೇ ಅಲ್ಲದೇ ಫೋಟೊಗ್ರಫಿಯನ್ನೇ ಜೀವನವನ್ನಾಗಿಸಿದವರು ಕೂಡ ನಮ್ಮಲ್ಲಿದ್ದಾರೆ. Image result for world photography day 2019ಫೋಟೊಗ್ರಫಿ ಮಾಡಲು ಕೆಲವರು ಅತ್ಯುತ್ತಮ ತಾಣಗಳು, ನಮ್ಮ ವಾಸಿಸುವ ಪ್ರದೇಶಗಳು, ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಫೋಟೊಗ್ರಫಿಯನ್ನು ಮಾಡಿ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ. ಛಾಯಾಗ್ರಹಣದ ಬಗ್ಗೆ ಇಚ್ಛಿಸುವವರು ಫೋಟೊಗ್ರಫಿ ಕೋರ್ಸ್ ಗಳನ್ನು ತೆಗೆದುಕೊಳ್ಳಿ. ಇದರಲ್ಲಿ ನಿಮ್ಮ ಭವಿಷ್ಯವನ್ನು ಸುಂದರವಾಗಿ ಯೋಜಿಸಿಕೊಳ್ಳಬಹುದು.  Image result for world photography day 2019

 

ಮದುವೆಯಾಗುವ ಪ್ರತಿ ದಂಪತಿಯೂ ಕೂಡ ಈ ಆರು ರೀತಿಯಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲೇಬೇಕು…!!?!!

#worldphotographyday2019 #photographyday #worldphotographyday #photographers #photos #photomoment

Tags