ಆರೋಗ್ಯಜೀವನ ಶೈಲಿಸೌಂದರ್ಯ

ಮಂಡಿಯ ಆರೋಗ್ಯಕ್ಕೆ ಯೋಗದ ಪರಿಹಾರ

ಮಂಡಿಗಳಲ್ಲಿ ನೋವು ಉಂಟಾಗಿದೆ ಎಂದು ನೋವು ಪಡುತ್ತಾ ಇರುವ ಬದಲಿಗೆ ಕೆಲವೊಂದು ಟಿಪ್ಸ್ ಬಳಸಿದರೆ ಈ ನೋವಿನಿಂದ ಮುಕ್ತಿ ಪಡೆಯಬಹುದು. ಇನ್ನು ಮಂಡಿಗಳಲ್ಲಿನ ಬಿಗಿತ ಕಡಿಮೆಯಾದರೆ ರಕ್ತಸಂಚಾರ ಸುಗಮವಾಗಿ ನೋವು ಶಮನವಾಗುತ್ತದೆ. ಹೀಗಾಗಿ ಈ ಸಲಹೆಗಳನ್ನು ಮಾಡಿ.

1 ಈ ಎರಡು ಚಿತ್ರಗಳಿರುವಂತೆ ಮಣಿಕಟ್ಟುಗಳು ಜಮಖಾನದ ಮೇಲೆ ಬರುವಂತೆ ಇರಿಸಿ ಕಾಲುಗಳನ್ನು ಹಿಂದಕ್ಕೆ ಹಾಕಿ ಅರ್ಧ ಕುಳಿತುಕೊಳ್ಳಿ. ಒಂದು ದಿಂಬನ್ನು ತೊಡೆ ಮತ್ತು ಮೀನಖಂಡಗಳ ನಡುವೆ ಇಟ್ಟು ದಿಂಬಿನ ಮೇಲೆ ಪೂರ್ಣವಾಗಿ ಕುಳಿತುಕೊಳ್ಳಿ. ಪೃಷ್ಠಭಾಗವನ್ನು ದಿಂಬಿಗೆ ಒತ್ತಿ ಬೆನ್ನನ್ನು ನೇರಗೊಳಿಸಿ. ಸುಮಾರು ನಾಲ್ಕೈದು ನಿಮಿಷಗಳ ಕಾಲ ಹೀಗೆ ಮಾಡಿ ನಂತರ ಎದ್ದೇಳಿ.

2 ಬೆನ್ನ ಮೇಲೆ ಮಲಗಿರುವ ಈ ಸ್ಥಿತಿಯಲ್ಲಿ ನಾಲ್ಕೈದು ನಿಮಿಷಗಳ ಕಾಲ ವಿಶ್ರಾಂತಿ ಪಡೆಯಬೇಕು. ನಂತರ ಕಾಲುಗಳನ್ನು ಮೇಲಕ್ಕೆ ತೆಗೆದುಕೊಂಡು ಸುತ್ತಿರುವ ಕಾಲನ್ನು ಬಿಡಿಸಿ ಮುಂದೆ ಚಾಚಿ ವಿಶ್ರಾಂತಿ ಪಡೆಯಬೇಕು. ಈ ಆಸನ ಮಾಡುವುದರಿಂದ ಮೀನಖಂಡ, ತೊಡೆಯ ಸ್ನಾಯುಗಳು ಹಿಗ್ಗಲ್ಪಡುವವು ಮತ್ತು ಆ ಭಾಗದ ಕೊಬ್ಬಿನಂಶ ಕರಗುವುದು ಮತ್ತು ಮಂಡಿ ಮತ್ತು ಕಾಲಿನ ಮಣಿಗಂಟಿನ ಬಿಗಿತ ದೂರವಾಗುವುದು.

ಕುಂಬಳಕಾಯಿ ಸೇವನೆಯಿಂದಾಗುವ ಲಾಭಗಳು

#Yoga #YogaRelief #Healthyoga  #KneeHealthyoga #HealthTips #LifeStyle

Tags