ಆರೋಗ್ಯಆಹಾರಜೀವನ ಶೈಲಿ

ಯೋಗರ್ಟ್ ಮೊಸರಿಗಿಂತ ಹೇಗೆ ಭಿನ್ನವಾಗಿದೆ…?

ಬೆಂಗಳೂರು, ಜ.10: ಮೊಸರಿನ ಬದಲಾಗಿ ಯೋಗರ್ಟ್‍ ಡಯಟ್‍ ನ ಒಂದು ಭಾಗವಾಗಿ ನೋಡುತ್ತಿರುವುದನ್ನು ಗಮನಿಸಿದರೆ ಆಶ್ಚರ್ಯವನ್ನುಂಟು ಮಾಡಬಹುದು.

ಆರಂಭದಲ್ಲಿ ಯೋಗರ್ಟ್‍ ಬಗ್ಗೆ ಸಾಮಾನ್ಯವಾಗಿ ಮೂಗು ಮುರಿಯುತ್ತಿದ್ದರು. ಭಾರತದಲ್ಲಿ ಮೊಸರು ಎಷ್ಟು ಚಿರಪರಿಚಿತವೂ ಪಾಶ್ಚಿಮಾತ್ಯ ದೇಶಗಳಲ್ಲಿ ಯೋಗರ್ಟ್‍ ಅಷ್ಟೇ ಪ್ರಚಲಿತವಾಗಿದೆ. ಎರಡೂ ಉತ್ಪನ್ನಗಳು ಸೂಕ್ಷ್ಮ ರೇಖೆಯಿಂದ ಮಾತ್ರವೇ ಭಿನ್ನವಾಗಿರುತ್ತವೆ. ಆದರೆ ಮೂಲಭೂತವಾಗಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಅದರ ತಯಾರಿಕೆಯ ವಿಧಾನ ಮತ್ತು ಹಾಲಿನ ಹುದುಗಿಸುವಿಕೆಯಲ್ಲಿ ಮಾತ್ರ ಒಂದಷ್ಟು ವ್ಯತ್ಯಾಸಗಳನ್ನು ಗುರುತಿಸಲಾಗುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಯೋಗರ್ಟ್‍ ಗೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ಸಾಕಷ್ಟು ಪ್ರಯೋಜನಗಳೂ ಇವೆ. ಇದೇ ಕಾರಣಕ್ಕೆ ಯೋಗರ್ಟ್‍ ನ ಬಳಕೆ ದಿನದಿನಕ್ಕೆ ಹೆಚ್ಚಾಗುತ್ತಿದೆ. ದೇಸಿ ಮೊಸರಿನ ಬದಲಾಗಿ ಯೋಗರ್ಟ್‍ ಅನ್ನು ಯಾವುದೇ ಸಂಶಯವಿಲ್ಲದೇ ಬದಲಾಯಿಸಬಹುದು ಮತ್ತು ಅಷ್ಟೇ ಸುರಕ್ಷಿತವಾಗಿದೆ.ಮಾರುಕಟ್ಟೆಯಲ್ಲಿ ನಾನಾ ಬಗೆಯ ಯೋಗರ್ಟ್‍ ಗಳು ಲಭ್ಯವಿದೆ. ಇದನ್ನು ಅತಿಯಾಗಿ ಬಳಸಲಾಗುತ್ತಿದ್ದು, ಆಹಾರ ತಜ್ಞರು ಕೂಡ ಇದನ್ನು ಶಿಫಾರಸ್ಸು ಮಾಡುತ್ತಾರೆ. ಮೊಸರಿಗಿಂತ ಎರಡು ಪಟ್ಟು ಹೆಚ್ಚು ಪ್ರೋಟೀನ್ ನೀಡುತ್ತದೆ. ಉದಾಹರಣೆಗೆ, ಒಂದು ಮಧ್ಯಮ ಗಾತ್ರದ ಬೌಲ್ ಮೊಸರು ಸುಮಾರು 3 – 4 ಗ್ರಾಂ ಪ್ರೋಟೀನ್ ‍ಹೊಂದಿರುತ್ತದೆ. ಅದೇ ಪ್ರಮಾಣದ ಯೋಗರ್ಟ್‍ ಸುಮಾರು 8 -10 ಗ್ರಾಂಗಳಷ್ಟು ಹೆಚ್ಚಾಗಿರುತ್ತದೆ.

ಯೋಗರ್ಟ್‍ ಅನ್ನು ಪ್ರತಿದಿನವೂ ಸೇವಿಸಿದರೆ, ದೇಹದ ಟಿ-ಕೋಶಗಳ ಕಾರ್ಯಚಟುವಟಿಕೆಯನ್ನು ಸುಲಭಗೊಳಿಸುತ್ತದೆ (ದೇಹದ ರೋಗ ನಿರೋಧಕ ಶಕ್ತಿಯನ್ನು ಕಾಪಾಡುವ ಕೋಶಗಳು). ಜಿಮ್ ‍ನಲ್ಲಿ ದೇಹ ದಂಡಿಸಿದ ನಂತರ ಯೋಗರ್ಟ್‍ ಅನ್ನು ಸೇವಿಸಿದರೆ ಸ್ನಾಯುಗಳಿಗೆ ಬಲವನ್ನು ಕೊಡುತ್ತದೆ.

ಡಾ. ಮನ್ಸಿ ಚಟ್ರಥ್ ಹೇಳುವಂತೆ, ದೇಹದಲ್ಲಿ ಲ್ಯಾಕ್ಟೋಸ್ ಕೊರತೆ ಹೊಂದಿರುವವರು ಕೂಡ ಇದನ್ನು ಸೇವಿಸಬಹುದು. ಮೊಸರಿಗೆ ಇದು ಪರ್ಯಾಯವಾಗಿದೆ. ಇದು ಲ್ಯಾಕ್ಟೋಸ್ ಅನ್ನು ಹಾಲು ಲ್ಯಾಕ್ಟಿಕ್ ಆಮ್ಲವಾಗಿ ಮಾರ್ಪಡಿಸುತ್ತದೆ. ಅಲ್ಲದೇ, ಸುಲಭವಾದ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ.

#yogurt #yogurtimages #yogurtfruitcup #balkaninews #healthyfoods

Tags