ಆರೋಗ್ಯಜೀವನ ಶೈಲಿಸಂಬಂಧಗಳು

ಯೋನಿ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯಗಳು.

ಯೋನಿ ಬಗ್ಗೆ ನಾಚಿಕೆ ಬೀಳುವಂತಹದ್ದೇನಿದೆ…???

ಯೋನಿ ಬಗ್ಗೆ ಮಾತನಾಡುವುದು ತಪ್ಪೇನು ಅಲ್ಲಾ. ದೇಹದಲ್ಲಿ ಇದೊಂದು ಭಾಗ ಅಷ್ಟೆ. ಯೋನಿ ಬಗ್ಗೆ ಮಾತನಾಡುವುದರಿಂದ ಬಹಳಷ್ಟು ಸಂಗತಿಗಳು ಗೊತ್ತಾಗುತ್ತವೆ.

ಬೆಂಗಳೂರು, ಆ. 24: ಯೋನಿ ಬಗ್ಗೆ ಯಾರು ಮಾತನಾಡುತ್ತಾರೆ? ಯಾರೂ ಅಷ್ಟಾಗಿ ಮಾತನಾಡಲ್ಲ. ಇದರ ಬಗ್ಗೆ ಯಾರೂ ಸಹ ಚರ್ಚಿಸಲ್ಲ. ಇದರಲ್ಲಿ ನಾಚಿಕೆ ಬೀಳುವಂತಹದ್ದೇನಿದೆ. ಇದರ ಬಗ್ಗೆ ಮಾತನಾಡುವುದು ತಪ್ಪೇನು ಅಲ್ಲ. ದೇಹದಲ್ಲಿ ಇದೊಂದು ಭಾಗವಷ್ಟೇ. ಇದರ ಬಗ್ಗೆ ಮಾತನಾಡುವುದರಿಂದ ಬಹಳಷ್ಟು ಸಂಗತಿಗಳು ಗೊತ್ತಾಗುತ್ತವೆ. ಆದರೆ ಬಹಳಷ್ಟು ಮಂದಿಗೆ ಯೋನಿ ಬಗ್ಗೆ ಅಷ್ಟಾಗಿ ಗೊತ್ತಿಲ್ಲ.

ಭಗಾಂಕುರ (ಕ್ಲಿಟೋರಿಸ್)

ಕ್ಲಿಟೋರಿಸ್ ಎನ್ನುವುದು ಸ್ವಲ್ಪ ಕಾಣಿಸುವ ಯೋನಿ ಕೆಳ ಭಾಗದಲ್ಲಿ ಇರುವ ಚರ್ಮ, ಜನನಾಂಗಗಳಿಗೆ ಎರಡೂ ಕಡೆ ಇದ್ದು ಶಾಖೆಗಳಂತೆ ವಿಸ್ತರಿಸಿ, ವಿಷ್ಬೋನ್ ಆಕಾರದಲ್ಲಿ ಇರುತ್ತದೆ ಎಂಬುದು ಒಂದು ದುರಭಿಪ್ರಾಯ ಮಾತ್ರ. ಸಂಶೋಧನೆಗಳ ಪ್ರಕಾರ, ಕಾಮೋದ್ರೇಕಗೊಳ್ಳುವ ಸ್ತ್ರೀ ಮರ್ಮಾಂಗದ ಭಾಗ.

ಯೋನಿ ಒಂದು ಜನನೇಂದ್ರಿಯ

ಜನನೇಂದ್ರಿಯಗಳ ಭಾಗದಲ್ಲಿ ಹೊರಗೆ ಕಾಣಿಸುವ ಭಾಗವನ್ನು ಜನನಾಂಗ ಎನ್ನುತ್ತಾರೆ. ನಿಲುವಾಗಿ ತುಟಿ ಆಕಾರದಲ್ಲಿ ಇದ್ದು, ಕ್ಲಿಟೋರಿಸ್, ಮೂತ್ರನಾಳಗಳುಳ್ಳ ಹೊರಗೆ ಕಾಣಿಸುವ ಜನನಾಂಗವನ್ನು ಸಾಮಾನ್ಯವಾಗಿ ಎಲ್ಲರೂ ‘ಯೋನಿ’ ಎಂದು ಕರೆಯುತ್ತಾರೆ. ಯೋನಿ ಮಾರ್ಗವು ಗರ್ಭಾಶಯಕ್ಕೆ ಹೊಂದಿಕೊಂಡಿರುತ್ತದೆ.

ಎಲ್ಲಾ ಯೋನಿಗಳೂ ಒಂದೇ ರೀತಿ ಇರಲ್ಲ

ಯೋನಿ ಗಾತ್ರ, ಆಕಾರ ಮತ್ತು ಬಣ್ಣ ಸ್ತ್ರೀಯಿಂದ ಸ್ತ್ರೀಗೆ ಬದಲಾಗುತ್ತದೆ. ಒಬ್ಬರ ಯೋನಿ ಇನ್ನೊಬ್ಬರಿಗೆ ಯಾವುದೇ ರೀತಿಯಲ್ಲೂ ಹೋಲುವುದಿಲ್ಲ.

ಯೋನಿ ಎರಡು ಪಟ್ಟು ವಿಸ್ತರಿಸುತ್ತದೆ

ಸಾಮಾನ್ಯವಾಗಿ ಯೋನಿ 4 ರಿಂದ 5 ಇಂಚು ಆಳವಾಗಿರುತ್ತದೆ. ಆದರೆ ರತಿಕ್ರೀಡೆ ಸಮಯದಲ್ಲಿ ಅದು ಇರುವ ಗಾತ್ರಕ್ಕಿಂತ ಎರಡುಪಟ್ಟು ದೊಡ್ಡದಾಗುತ್ತದೆ. ಈ ಪ್ರಕ್ರಿಯೆಯನ್ನೇ ‘ವೆಜೈನಲ್ ಟೇನ್ಟಿಂಗ್’ ಎನ್ನುತ್ತಾರೆ. ರತಿಕ್ರೀಡೆ ಸಮಯದಲ್ಲಿ ಸ್ತ್ರೀ ಪ್ರೇರಿತಗೊಳ್ಳುವುದರಿಂದ ಈ ರೀತಿ ಆಗುತ್ತದೆ.

ಶಿಶು ಜನನದ ಬಳಿಕ ಯೋನಿಯಲ್ಲಿ ಬದಲಾವಣೆ ಕಾಣುತ್ತದೆ

ಪ್ರಸವದ ಬಳಿಕ, ಯೋನಿಯಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸುತ್ತವೆ. ಯೋನಿ ತನ್ನ ಪೂರ್ವ ಆಕೃತಿಯನ್ನು ಕಳೆದುಕೊಳ್ಳುತ್ತದೆ.

Tags