ಜೀವನ ಶೈಲಿಸೌಂದರ್ಯ

ಕೇವಲ 15 ರೂಪಾಯಿಯಲ್ಲಿ ಮುಖದ ಅಂದ ಹೆಚ್ಚಿಸಿ…!

ಈಗಾಗಲೇ ಮಾರುಕಟ್ಟೆಗೆ ಅನೇಕ ರೆಡಿಮೇಡ್ ಫೇಸ್ ಪ್ಯಾಕ್, ಕ್ಲೆನ್ಸಿಂಗ್, ಮೊಯಿಶ್ಚರೈಸರ್ , ವೆರೈಟಿ ಕ್ರೀಮ್ ಗಳು ಬಂದಿವೆ. ಅದರ ಬೆಲೆ ಎಷ್ಟೆಂಬುದೂ ನಿಮಗೆ ಚೆನ್ನಾಗಿ ಗೊತ್ತು. ಅಂತಹುದರಲ್ಲಿ 15 ರೂಪಾಯಿಗೆ ಸಿಗುವ ಫೇಸ್ ಕ್ರೀಮ್ ಯಾವುದಿದೆ ಅಂತೀರಾ? ನಾವು ಹೇಳುತ್ತಿರುವುದು ಅಂಗಡಿಯಲ್ಲಿ ಸಿಗುವ ಕ್ರೀಮ್ ಗಳ ಬಗ್ಗೆ ಅಲ್ಲ. ಮನೆಯಲ್ಲಿ ನಾವೇ ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾದ ಫ್ರೆಶ್ ಫೇಸ್ ಪ್ಯಾಕ್ ಬಗ್ಗೆ.

ಹೌದು ಮೊಸರು-ಬಾಳೆಹಣ್ಣು ನಿಮಗೆ 15 ರೂಪಾಯಿ ಒಳಗಡೆ ಸಿಗುತ್ತದೆ. ಅದನ್ನು ಉಪಯೋಗಿಸಿಕೊಂಡು ತ್ವಚೆಯ ಅಂದ ಹೆಚ್ಚಿಸಿಕೊಳ್ಳುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ…

Image result for curd banana face pack

ಬೇಕಾಗುವ ಸಾಮಗ್ರಿಗಳು

ಒಂದು ಕಳಿತ ಬಾಳೆಹಣ್ಣು, ಮೊಸರು- 1 ಟೇಬಲ್ ಸ್ಪೂನ್, ಜೇನುತುಪ್ಪ- 1 ಟೀ ಸ್ಪೂನ್, ನಿಂಬೆಹಣ್ಣಿನ ರಸ- 1 ಟೀ ಸ್ಪೂನ್.

ಫೇಸ್ ಪ್ಯಾಕ್ ವಿಧಾನ

ಒಂದು ಬೌಲ್ ನಲ್ಲಿ ಕಳಿತ ಬಾಳೆಹಣ್ಣು ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ಮೊಸರು ಸೇರಿಸಿ. ಸ್ವಲ್ಪ ಸಮಯದ ನಂತರ ಜೇನುತುಪ್ಪ ಹಾಗೂ ನಿಂಬೆಹಣ್ಣಿನ ರಸ ಸೇರಿಸಿದರೆ ಫೇಸ್ ಪ್ಯಾಕ್ ರೆಡಿಯಾಗುತ್ತದೆ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ, ಒಣಗಿದ ಮೇಲೆ ಮುಖ ತೊಳೆಯಿರಿ.

ಫಲಿತಾಂಶ

ನಿಂಬೆಹಣ್ಣು ‘ನ್ಯಾಚುರಲ್ ಬ್ಲೀಚಿಂಗ್ ಏಜೆಂಟ್’ ಆದ್ದರಿಂದ ತ್ವಚೆ ಕ್ಲಿಯರ್ ಆಗಿರುವಂತೆ ನೋಡಿಕೊಳ್ಳುತ್ತದೆ. ಬಾಳೆಹಣ್ಣು ಮುಖದ ಅಂದವನ್ನು ಇಮ್ಮಡಿಗೊಳಿಸುತ್ತದೆ. ಇನ್ನು ಮೊಸರು ಮೊಯಿಶ್ಚರೈಸಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ.

ನೆರಿಗೆಗಳಿಲ್ಲದ ಶ್ವೇತ ಚರ್ಮ ನಿಮ್ಮದಾಗಲು ಬಳಸಿ ನುಗ್ಗೆ ಎಲೆ ಫೇಸ್ ಪ್ಯಾಕ್

#balkaninews #curd #facepack #beauty

Tags