ಲುಕ್ಸ್

ಆತ್ಮಗಳ ಕಥೆ ಹೇಳುವುದಿಕ್ಕೆ ಬಂದ ಹೊಸಬರು.

ಸಿಂಬಲ್, ಅಂಕಿ ಸಂಖ್ಯೆಗಳು, ಒಂದೇ ಅಕ್ಷರಗಳನ್ನೊಳಗೊಂಡ ಅನೇಕ ಸಿನಿಮಾಗಳು ಚಂದನವನದಲ್ಲಿ ಈಗಾಗಲೇ ಬಂದಿದೆ. ಈಗ ಅದೇ ಸಾಲಿಗೆ ಸೇರಲು ಹೊರಟಿರುವುದು (ಅರ್ಕಾವತ್-೯) ಎಂಬ ಹೆಸರಿನ ಚಿತ್ರ.

ಈಗಾಗಲೇ ಕಲಾತ್ಮಕ ಮತ್ತು ಮಕ್ಕಳ ಚಿತ್ರ ನಿರ್ದೇಶಿಸಿದ್ದ ಹೇಮಂತ್ ಕುಮಾರ್ ಈಗ ಹಾರರ್ ಹಾದಿಗೆ ಹೊರಳಿದ್ದಾರೆ. ಮೊದಲ ಬಾರಿಗೆ ‘ಅರ್ಕಾವತ್’ ಚಿತ್ರದ ಮೂಲಕ ಸಸ್ಪೆನ್ಸ್ ಕಥೆ ಹೇಳಲು ಹೊರಟಿದ್ದಾರೆ. ಚಿತ್ರದ ಪ್ರಾರಂಭದಲ್ಲಿಯೇ ನಾಯಕಿಯ ಕಥೆ ಮುಗಿದು ಹೋಗುತ್ತದೆ. ವಿರಾಮದ ನಂತರ ಆಕೆ ಪ್ರತ್ಯಕ್ಷಳಾಗುತ್ತಾಳೆ. ಆಕೆಯ ಹಿಂದೆ ಆತ್ಮಗಳು ಸುತ್ತಾಡುತ್ತವೆ. ಈ ಸಮಸ್ಯೆಯಿಂದ ಹೇಗೆ ಪಾರಾಗಿ ಬರುತ್ತಾರೆ ಎಂಬುದು ಚಿತ್ರದ ಕಥಾವಸ್ತು.

ನವನಟ ಅಭಿ ಶೆಟ್ಟಿ ನಾಯಕರಾಗಿರುವ ಚಿತ್ರದಲ್ಲಿ ನಾಯಕಿ ಆಶಾ ಶೆಟ್ಟಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣವು ಬೆಂಗಳೂರಿನ ಸುತ್ತಮುತ್ತ ನಡೆದಿದೆ.

ಅರ್ಕಾವತ್ ರ್(೯) ಎಂಬ ಪದ ಚಿತ್ರದಲ್ಲಿ ಒಂದು ಕುತೂಹಲಕರ ಅಂಶವಾಗಿ ಮೂಡಿ ಬಂದಿದೆ. 2 ಸಾಹಸ ದೃಶ್ಯಗಳು ಹಾಗೂ 4 ಹಾಡುಗಳು ಈ ಚಿತ್ರದಲ್ಲಿವೆ. ಛಾಯಾ, ನಿಶ್ಚಿತ ಹಾಗೂ ಮೇಘ ಎಂಬ ಮೂವರು ಯುವತಿಯರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ “ಅರ್ಕಾವತ್” – “ಶ್!!! ಇದು ಆತ್ಮಗಳ ಕಥೆ” ಎಂದು ಅಡಿಬರವನ್ನು ಒಳಗೊಂಡಿದೆ. ಚಿತ್ರದ ಶೀರ್ಷಿಕೆ ಚಿತ್ರಕ್ಕೆ ಒಂದು ಹೊಸ ತಿರುವನ್ನು ನೀಡುವ ಸಲುವಾಗಿ ಅದಕ್ಕೆ ಸರಿಯಾಗುವಂತಹ ಹೆಸರನ್ನು ಇಟ್ಟಿದ್ದೇವೆ ಎನ್ನುತ್ತಾರೆ ನಿರ್ದೇಶಕರು.

ಇನ್ನು ಚಿತ್ರದ ನಟಿ ಆಶಾ ಶೆಟ್ಟಿ ಅವರದ್ದು ವಿಭಿನ್ನ ಶೇಡ್ ಇರುವ ಪಾತ್ರವಾಗಿದ್ದು ಚಿತ್ರದ ಮೊದಲರ್ಧದಲ್ಲಿ ನಾಯಕಿ ಆಗಿ ಕಾಣಲಿದ್ದು ಉಳಿದರ್ಧ ಭಾಗದಲ್ಲಿ ಆತ್ಮವಾಗಿ ಕಾಡಲಿದ್ದಾರಂತೆ.

Tags