ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

‘ತಂದೆ-ಮಗನ ಬಾಂಧವ್ಯದ ಮೇಲೆ ಪ್ರೀತಿಯ ಸವಾರಿ’

ಅಪ್ಪ ಅಂದ್ರೆ ಅವಕಾಶ

ಚಿತ್ರ: ಮೌನಂ

Rating 3.5 / 5

ನಿರ್ದೇಶನ: ರಾಜ್ ಪಂಡಿತ್

ನಿರ್ಮಾಪಕ: ಶ್ರೀಹರಿ

ಸಂಗೀತ: ಆರವ್ ರಿಶಿಕ್

ಛಾಯಾಗ್ರಹಣ: ಶಂಕರ್

ತಾರಾಬಳಗ: ಮಯೂರಿ, ಬಾಲಾಜಿ, ಅವಿನಾಶ್, ರಿತೇಶ್, ನಯನ, ಕೆಂಪೇಗೌಡ, ಇತರರು.

ತಂದೆ, ಮಗನ ಪುಟ್ಟ ಪ್ರಪಂಚದಲ್ಲಿ ಒಂದು ಹೆಣ್ಣು ಬಂದಾಗ ಏನೆಲ್ಲ ಆಗಬಹುದು ಎಂಬ ಕಾಲ್ಪನಿಕ ಕಥೆಯನ್ನು ಮೌನಂ ಚಿತ್ರ ಹೇಳಹೊರಟಿದೆ. ಮಗನಿಗಾಗಿ ಏನು ಬೇಕಾದರೂ ಮಾಡಬಲ್ಲ ತಂದೆ, ತಂದೆಯನ್ನೇ ಪ್ರಪಂಚ ಎಂದುಕೊಂಡಿದ್ದ ಮಗ. ಹೀಗೆ ಇವ್ರ ಬಾಂದವ್ಯ ಸಾಗುವಾಗ ಪ್ರೀತಿಯಲ್ಲಿ ಬೀಳೋ ಮಗ. ಇದ್ರಿಂದ ತಂದೆಯನ್ನು ಕಾಡೋ ಒಂಟಿತನ. ಕೊನೆಗೆ ಆತನೂ ಪ್ರೀತಿಯಲ್ಲಿ ಬೀಳುತ್ತಾನೆ.

ವಿಪರ್ಯಾಸ ಅಂದ್ರೆ ತಂದೆ ಮಗ ಪ್ರೀತಿಸುತ್ತಿರುವ ಹುಡಿಗಿ ಒಬ್ಬಳೇ ಆಗಿರುತ್ತಾಳೆ. ಮುಂದೇನಾಗುತ್ತೆ..? ಅನ್ನೋ ಕುತೂಹಲ ಇದ್ರೆ ಮಿಸ್ ಮಾಡ್ದೆ ಸಿನಿಮಾ ನೋಡಿ. ಹೀಗೆ ಅವಿನಾಭಾವ ಸಂಬಂಧದ ನಡುವೆ ಪ್ರೀತಿಯ ಪ್ರವೇಶ ಆದಾಗ ಏನೆಲ್ಲ ಆಗುತ್ತೆ ಅನ್ನೋದನ್ನ ಸಸ್ಪೆನ್ಸ್ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಜಾನರ್ನಲ್ಲಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ಬರುವ ಟ್ವಿಸ್ಟ್ ಗಳು ನೋಡುಗರಿಗೆ ಶಾಕ್ ನೀಡುತ್ತವೆ.

ಅವಿನಾಶ್ ಅಭಿನಯ ಅಮೋಘವಾಗಿ ಮೂಡಿಬಂದಿದೆ. ಮಯೂರಿ ಕೂಡ ಹೋಮ್ಲಿ ಹಾಗೂ ಬೋಲ್ಡ್ ಎರಡು ಶೇಡ್ನಲ್ಲೂ ತಮ್ಮ ಮಾಗಿದ ಅಭಿನಯದ ಮೂಲಕ ಮಿಂಚಿದ್ದಾರೆ. ಉಳಿದಂತೆ ಚಿತ್ರದ ಎಲ್ಲಾ ಪಾತ್ರಗಳು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು, ಕಥೆ, ಚಿತ್ರಕಥೆಯ ಮೇಲೆ ಇನ್ನಷ್ಟು ಗಮನ ಹರಿಸಿದ್ರೆ ಚಿತ್ರ ನಿಜಕ್ಕೂ ಬೇರೆಯದ್ದೇ ಲೆವೆಲ್ಗೆ ಹೋಗುತ್ತಿತ್ತು.  ನಿರ್ದೇಶಕ ರಾಜ್ ಪಂಡಿತ್ ತಮ್ಮ ಮೊದಲ ಚಿತ್ರದಲ್ಲೇ ಇಂತಹದ್ದೊಂದು ಸಬ್ಜೆಕ್ಟ್ ಕೈಗೆತ್ತಿಕೊಂಡಿರೋದಕ್ಕೆ ಅವರನ್ನ ಮೆಚ್ಚಲೇ ಬೇಕು.

#Mounam #Mayuri #Avinash #KannadaMovie #KannadaMovieReview

Tags